ದೇವರು

ಈ ಮಂತ್ರವನ್ನು ಕಾಗದದ ಮೇಲೆ ಬರೆದು ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ

ಈ ಮಂತ್ರವನ್ನು ಕಾಗದದ ಮೇಲೆ ಬರೆದು, ಪೂಜೆ ಮಾಡಿದರೆ, ಅದೃಷ್ಟ ನಿಮ್ಮದಾಗುತ್ತೆ.

ನಮ್ಮ ಹಿಂದೂ ಧರ್ಮ, ವಾಸ್ತು, ಜ್ಯೋತಿಷ್ಯ ಶಾಸ್ತ್ರದಿಂದ ಜನರು ತುಂಬಾ ಪ್ರಭಾವಿತವಾಗುತ್ತಾರೆ. ವಾಸ್ತು ದೋಷವಿದ್ದರೆ ನಾವು ಅಂದುಕೊಂಡ ಕೆಲಸ, ಆಗದೇ ಇರುವುದು. ಅನಾರೋಗ್ಯ ಸಮಸ್ಯೆಗಳು, ಧನವೃದ್ಧಿ ಕಡಿಮೆಯಾಗುವುದು, ಮನೆಯಲ್ಲಿ ಅಶಾಂತತೆ ಇರುವುದು. ಇಂತಹ ಸಮಸ್ಯೆಗಳು ಬರುತ್ತಾ ಇರುತ್ತವೆ.

 

 

 

ಈ ದೋಷದ ಪ್ರಭಾವಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಂಡು, ಧನಪ್ರಾಪ್ತಿ ಸಿಗಬೇಕೆಂದರೆ, ಏನು ಮಾಡಬೇಕು ? ಎಂದು ನಾವು ಈಗ ತಿಳಿಯೋಣ ಬನ್ನಿ.ಮೊದಲಿಗೆ ಐದು ಕಾಗದಗಳನ್ನು ತೆಗೆದುಕೊಳ್ಳಿ. ಅದರಲ್ಲಿ “ ಓಂ ಶ್ರೀ ಮಹಾಲಕ್ಷ್ಮೀಯೇ ನಮಃ” ಎಂಬ ಮಂತ್ರವನ್ನು ನೂರ ಎಂಟು ಬಾರಿ ಬರೆಯಬೇಕು. ಹೀಗೆ ಐದು ಕಾಗದದಲ್ಲಿ ಬರೆಯಿರಿ. ಹೀಗೆ ಸೋಮವಾರ, ಗುರುವಾರ, ಶುಕ್ರವಾರದ ದಿನಗಳಲ್ಲಿ ಸ್ನಾನ ಮತ್ತು ಪೂಜೆಯಾದ ನಂತರ , ಈ ಮಂತ್ರವನ್ನು ಬರೆಯಬೇಕು. ಬರೆದ ನಂತರ, ಈ ಕಾಗದಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ. ಸ್ವಲ್ಪ ಅಕ್ಷತೆ, ಹೂವನ್ನು, ಈ ಐದು ಕಾಗದದ ಮೇಲೆ ಇಟ್ಟು ಅವುಗಳನ್ನು ಮಡಚಿ ಇಡಬೇಕು.ಅನಂತರ ಒಂದು ಕಾಗದವನ್ನು ದೇವರ ಮನೆಯಲ್ಲಿ ಇಡಬೇಕು.ಎರಡನೇ ಕಾಗದವನ್ನು ನಗದು ಇಡುವ ಜಾಗದಲ್ಲಿ ಇಡಬೇಕು.ಮೂರನೇ ಕಾಗದವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.ನಾಲ್ಕನೇ ಕಾಗದವನ್ನು ವ್ಯಾಪಾರದ ಸ್ಥಳದಲ್ಲಿ ಅಥವಾ ಉದ್ಯೋಗ ಮಾಡುವ ಜಾಗದಲ್ಲಿ ಇಡಬೇಕು.

 

 

 

ಐದನೇ ಕಾಗದವನ್ನು ಮನೆಯಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಇಡಬೇಕು.ಹೀಗೆ ಮಾಡುವುದರಿಂದ ನಾವು ಅಂದುಕೊಂಡ ಕೆಲಸ ದಿಗ್ವಿಜಯವಾಗುತ್ತದೆ. ಸಂತೋಷ, ಸುಖವನ್ನು ಕಾಣುಬಹುದು. ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ, ಶತ್ರುಗಳು ಮಿತ್ರರಾಗುತ್ತಾರೆ, ವಾಸ್ತು ದೋಷಗಳು ತುಂಬಾ ಕಾಲದವರೆಗು ದೂರವಾಗುತ್ತವೆ.ಆದ್ದರಿಂದ ಈ ಚಿಕ್ಕ ಕೆಲಸವನ್ನು ನಾವು ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ಮಾಡಿದರೆ, ಎಲ್ಲ ಒಳ್ಳೆಯದೇ ಆಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top