ಆರೋಗ್ಯ

ಚೆನ್ನಾಗಿರೋ ಮುಖದ ಅಂದ ಕೆಡಿಸಿ ಕಪ್ಪು ಕಲೆಗಳು ಮಾಡೋ ಮೊಡವೆಗಳಿಗೆ ತುಂಬಾ ಖರ್ಚು ಮಾಡಿ ಕ್ರೀಮ್ ಹಚ್ಚೋ ಬದ್ಲು ಹೀಗ್ಮಾಡಿ ಸಾಕು

ಮೊಡವೆಗಳಿಗೆ ತುಂಬಾ ಖರ್ಚು ಮಾಡಿ ಕ್ರೀಮ್ ಹಚ್ಚೋ ಬದ್ಲು ಹೀಗ್ಮಾಡಿ ಸಾಕು.

 

 

 

 ಐಸ್ ಪ್ಯಾಕ್:ಐಸ್ ತುಂಡುಗಳನ್ನು ಕಾಟನ್ ಬಟ್ಟೆಯಲ್ಲಿ ಇರಿಸಿ ಮುಖದ ಮೇಲೆ ಸ್ವಲ್ಪ ನಿಮಿಷಗಳ ಕಾಲ ಇರಿಸಿ ತೆಗೆಯಬೇಕು ಹೀಗೆ 5 ರಿಂದ 6 ಬಾರಿ ಮುಂದುವರಿಸಿದರೆ ದಿನಕ್ಕೆ ಸಾಕು.ಇದು ಮುಖದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವುದಲ್ಲದೆ , ಮುಖಕ್ಕೆ ಹೊಸ ಮೆರುಗನ್ನು ನೀಡುತ್ತದೆ .

 

 

 

ಟೂತ್ ಪೇಸ್ಟ್:ಮೊಡವೆ ಹೋದಮೇಲೆ ಉಳಿಯುವ ಕಪ್ಪುಮಚ್ಚೆ ಒಂದೇ ಒಂದು ರಾತ್ರಿಯಲ್ಲಿ ಮಾಯವಾಗಿಸಬಹುದು ಗೊತ್ತಾ?ಅದಕ್ಕೋಸ್ಕರ ನೀವು ಮಾಡಬೇಕಾಗಿರುದು ಇಷ್ಟೇ.ಮುಂಜಾನೆ ಎದ್ದು ಬಳಸುವ ಟೂತ್ ಪೇಸ್ಟ್ ಅನ್ನು ಬಳಸಬಹುದು.ರಾತ್ರಿ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.ಟೂತ್ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಹಚ್ಚಿ.ಹಾಗೆಯೇ ನಿಧಾನವಾಗಿ ಉಜ್ಜಿ.ಹೀಗೆ ಮಾಡುವುದರಿಂದ ಮೊಡವೆ ಉಬ್ಬುವುದು ಕಡಿಮೆಯಾಗುವುದು.ಇದು ಮುಖಕ್ಕೆ ತುಂಬಾ ಒಳ್ಳೆಯದು.ಯಾಕಂದರೆ ಇದು ಚರ್ಮದ ರಂಧ್ರವನ್ನು ತೆಗೆದು ಚರ್ಮ ಶ್ವಾಸ ತೆಗೆದುಕೊಳ್ಳುವ ಹಾಗೆ ಮಾಡುತ್ತವೆ.

ಶುಂಠಿ:ಶುಂಠಿಯನ್ನು ಸಣ್ಣದಾಗಿ ಕತ್ತರಿಸಿ ಆನಂತರ ಮೊಡವೆ ಇರುವ ಜಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಶುಭ್ರವಾದ ನೀರಿನಲ್ಲಿ ತೊಳೆದುಕೊಂಡು ಮತ್ತೆ ಶುಂಠಿಯನ್ನು ಉಜ್ಜಿ 5 ನಿಮಿಷ ಆದ ಮೇಲೆ ತೊಳೆದುಕೊಳ್ಳಿ ಹೀಗೆ ಎರಡು ದಿನ ಮಾಡಿದರೆ ಮೊಡವೆಗಳು ಸಂಪೂರ್ಣ ಮಾಯ.ಮೊಟ್ಟೆ:ಮೂರು ಮೊಟ್ಟೆಯಿಂದ ಬಿಳಿಯ ಲೋಳೆ ತೆಗೆದುಕೊಂಡು ಮೂರು ನಿಮಿಷದ ವರೆಗೂ ಹಾಗೆಯೇ ಬಿಡಬೇಕು.ಒಂದು ಬಾರಿ ಬಿಳಿಯ ಲೋಳೆಯ ಸೆಟ್ ಆದ ನಂತರ ಪಿಂಪಲ್ಸ್ ಇರುವ ಜಾಗದಲ್ಲಿ ಇದನ್ನು ಹಚ್ಚಿ.ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.ಹೀಗೆ ದಿವಸ ನಾಲ್ಕು ಬಾರಿ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಹೊಂದಬಹುದು.ತುಳಸಿ ಎಲೆ:ತುಳಸಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಮಳೆಯ ನೀರು ಅಥವಾ ಪನ್ನೀರ್ ಕಲೆಸಿ ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ತೊಳೆಯಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top