fbpx
ಸಮಾಚಾರ

ಅಂಬರೀಶ್ ಅಂತಿಮ ದರ್ಶನಕ್ಕೆ ನಲಪಾಡ್ ಗೆ ಅವಕಾಶ ಕೊಟ್ಟು ಮುಜುಗರಕ್ಕೀಡಾದ ಪೊಲೀಸರು

ಅಂಬಿ ಪಂಚಭೂತಗಳಲ್ಲಿ ಲೀನರಾಗಿದ್ದು. ಅಂಬಿ ನಮ್ಮ ಪಾಲಿಗೆ ಇನ್ನು ನೆನಪು ಮಾತ್ರ . ಡಾ ಅಂಬರೀಶ್ ಅತ್ಯಂತ ಸಹೃದಯಿ ಹಾಗು ಸ್ನೇಹಜೀವಿ ಆಗಿದ್ದರು, ಇದಕ್ಕೆ ಸಾಕ್ಷಿ ಎಂಬಂತೆ ಅಂಬಿಯ ಅಂತಿಮ ಯಾತ್ರೆಯಲ್ಲಿ ಜನಸಾಗರವೇ ಹರಿದು ಬಂದಿತ್ತು.

ಹೀಗಿರುವಾಗ ಮಂಡ್ಯ ಜನತೆಯ ಒತ್ತಾಯದ ಮೇರೆಗೆ ಅಂಬಿಯ ಪಾರ್ಥಿವ ಶರೀರವನ್ನು ಭಾನುವಾರ ಮಂಡ್ಯ ಗೆ ವಾಯುಸೇನೆಯ ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗಿ ಮರುದಿನ ಅಂದರೆ ಸೋಮವಾರ ಬೆಳಿಗ್ಗೆ ಅದೇ ವಾಯುಸೇನೆಯ ಹೆಲಿಕಾಪ್ಟರ್ ನಲ್ಲಿ ಅಂಬಿ ಪಾರ್ಥಿವ ಶರೀರರವನ್ನು ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಆದರೆ ಈ ಸಮಯದಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿಯಾಗಿರುವ ನಲ್ ಪಾಡ್ ಗೆ ಮುಖ್ಯವಾಗಿ ಎಚ್‍ಎಎಲ್ ನಲ್ಲಿ ಅಂಬಿ ಪಾರ್ಥಿವ ಶರೀರವನ್ನು ನೋಡಲು ಅನುವು ಮಾಡಿಕೊಟ್ಟ ಪೊಲೀಸರ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಗರಂ ಆಗಿದ್ದಾರಂತೆ.

ಹಿರಿಯ ಪೊಲೀಸ್ ಅಧಿಕಾರಿಗಳಿಗೇಕೆ ಸಿಟ್ಟು?

ಕಾನೂನು ಪ್ರಕಾರ ನಲಪಾಡ್ ಒಳ ಪ್ರವೇಶಿಸಲು ಅವಕಾಶ ಇಲ್ಲ, ಏಕೆಂದರೆ ಈಗಾಗಲೇ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಕೊಲೆ ಯತ್ನದ ಆರೋಪಿಯನ್ನು ಎಚ್‍ಎಎಲ್ ಒಳಗಡೆ ಬಿಟ್ಟಿದ್ದು ಭದ್ರತಾ ವೈಫಲ್ಯ ಎಂಬ ಮಾತುಗಳು ಕೇಳಿಬರುತ್ತಿದೆ. ಇದರಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ.

ನಲಪಾಡ್ ಎಚ್‍ಎಎಲ್ ಪ್ರವೇಶಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಕಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಳಿದಾಗ ಅವರು ‘ನಲಪಾಡ್ ಕುಟುಂಬದ ಸದಸ್ಯರ ಜೊತೆ ಒಳಗಡೆ ಹೋಗಿದ್ದಾರೆ’ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ .

ಕೆಲವು ಪೊಲೀಸ್ ಅಧಿಕಾರಿಗಳ ಮುಂದೆಯೇ ನಲಪಾಡ್ ಎಚ್‍ಎಎಲ್ ಒಳಗಡೆ ಹೋಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top