fbpx
ಮನೋರಂಜನೆ

ರಕ್ಷಿತ್ ಶೆಟ್ಟಿ ಯ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಗ್ಗೆ ಟ್ವೀಟ್ ಮಡಿದ ರಶ್ಮಿಕಾ ಮಂದಣ್ಣ – ಏನಿದು ಹೊಸ ವಿಚಾರ ?

ಕಿರಿಕ್ ಪಾರ್ಟಿಯಲ್ಲಿ ಎಲ್ಲರ ಮನಸೂರೆಗೊಂಡಿದ್ದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಜೋಡಿ ಪ್ರೀತಿಸಿ, ಮದುವೆ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿತ್ತು. ಆದರೆ ಇತ್ತೀಚಿಗೆ
ಈ ಜೋಡಿ  ಲವ್ ಬ್ರೇಕ್ ಅಪ್ ಗೆ ಶರಣಾಯಿತು. ರಕ್ಷಿತ್ – ರಶ್ಮಿಕಾ ಪ್ರೀತಿ ಮುರಿದು ಬಿದ್ದಿದ್ದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದ್ದಂತೂ ಹೌದು.

ಹೀಗಿರುವಾಗ ನಟಿ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ರಕ್ಷಿತ್‌ ಶೆಟ್ಟಿ ಜೊತೆಗಿನ ಬ್ರೇಕಪ್‌ ನಂತರ ಇದೇ ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ರಕ್ಷಿತ್‌ ವಿಚಾರವಾಗಿ ಮಾತನಾಡಿದ್ದಾರೆ.

ಹೌದು, ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಬಳಗದ ಗೆಳೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್‌ಗೆ ರಶ್ಮಿಕಾ ಬರ್ತ್‌ಡೇ ವಿಶ್‌ ಮಾಡುವುದರೊಂದಿಗೆ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನ ನೋಡಲು ತಾವು ಕಾತರಳಾಗಿರುವ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

 

ಇದೀಗ ಈ ವಿಚಾರ ಸೋಶಿಯಲ್ ಮೀಡಿಯಾ ಗಳಲ್ಲಿ ಸಖತ್ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top