ಆರೋಗ್ಯ

ಕಡಲೆಕಾಯಿ ಬೀಜ ತಿಂದ ತಕ್ಷಣ ನೀರು ಕುಡಿಬೇಡಿ ಅಂತ ದೊಡ್ಡವರು ಹೇಳ್ತಾರೆ ಯಾಕೆ ಗೊತ್ತಾ? ತಿಳ್ಕೊಂಡ್ಮೇಲೆ ಇನ್ಮೇಲೆ ಆ ತಪ್ಪು ಯಾವತ್ತೂ ಮಾಡಲ್ಲ

ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಕಡಲೆಕಾಯಿ ಬೀಜ ತಿನ್ನುವುದರಿಂದ ಮಾರಣಾಂತಿಕ ಕಾಯಿಲೆಗಳಿಂದ ಉಂಟಾಗುವ ಅಪಮೃತ್ಯುವಿನಿಂದ ಪಾರಾಗಬಹುದು.ಬೇಯಿಸಿದ ಕಡಲೆ ಬೀಜದಲ್ಲಿ ಪ್ಲಾವಿನೋಯ್ಡ್ಸ್ ಹಾಗು ಪಾಲಿ ಫಿನೋಲ್ಸ್ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ ಇದು ಹೃದಯದ ಸಮಸ್ಯೆ , ಕ್ಯಾನ್ಸರ್ ಯಿಂದ ಕಾಪಾಡುತ್ತದೆ.ಒಂದು ಕಪ್ ಬೇಯಿಸಿದ ಕಡಲೆ ಬೀಜದಲ್ಲಿ ೨.೫ ಗ್ರಾಂ ಫೈಬರ್ ಇದ್ದು ಇದು ಜೀರ್ಣಕ್ರಿಯೆ , ಮಲಬದ್ಧತೆ ಸಮಸ್ಯೆಗಳಿಂದ ಕಾಪಾಡುತ್ತದೆ, ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡಂಟ್ಸ್ ಇರುತ್ತದೆ.ಕಡಲೆ ಕಾಯಿ ಸಿಕ್ಕರೆ ಸಾಕು ಆರಾಮಾಗಿ ತಿಂದು ತೇಗುತ್ತೇವೆ , ಹಸಿಯಾಗೋ ಬೇಯಿಸಿಯೋ ಕಡಲೆ ಕಾಯಿಯ ರುಚಿಯೇ ಬೇರೆ , ಆದರೆ ದೊಡ್ಡವರು ಕಡಲೆ ಕಾಯಿ ತಿಂದ ಮೇಲೆ ನೀರು ಕುಡಿಯ ಬೇಡಿ ಎಂದು ಹೇಳುತ್ತಾರೆ ಯಾಕೆ ಗೊತ್ತೇ ?

 

 

 

ಕಡಲೆ ಕಾಯಿ ತಿಂದ ಮೇಲೆ ನೀರು ಕುಡಿಯಬಾರದು ಏಕೆಂದರೆ ಕಡಲೆ ಕಾಯಿಯಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿದ್ದು ಇದನ್ನು ತಿಂದ ತಕ್ಷಣ ನೀರು ಕುಡಿದರೆ ಕೊಬ್ಬಿನ ಅಂಶ ಆಹಾರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ .ಅಷ್ಟೇ ಅಲ್ಲದೆ ಕಡಲೆ ಕಾಯಿ ಉಷ್ಣ ಕಾರಕ ಕಡಲೆ ಕಾಯಿ ತಿಂದ ಮೇಲೆ ನೀರು ಕುಡಿದರೆ ತಂಪಾಗುತ್ತದೆ ಇದು ವಿರುದ್ಧವಾದ ಗುಣಗಳನ್ನು ಹೊಂದಿರುವುದರಿಂದ ಅಡ್ಡ ಪರಿಣಾಮಗಳಾದ ಶೀತ ಹಾಗು ಕೆಮ್ಮು ಉಂಟಾಗುತ್ತದೆ .

 

 

 

ಕಡಲೆ ಕಾಯಿ ತಿಂದರೆ ಸುಲಭವಾಗಿ ಜೀರ್ಣವಾಗುವುದಿಲ್ಲ , ಕಡಲೆ ಕಾಯಿ ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆ ನೋವಿನಂಥ ಸಮಸ್ಯೆಗಳಿಗೆ ಕಾರಣವಾಗುತ್ತದೆ ,ಆದ್ದರಿಂದ ಕಡಲೆ ಕಾಯಿ ತಿಂದ ನಂತ್ರ ಕನಿಷ್ಠ 20 ನಿಮಿಷ ಆದ ನಂತ್ರ ನೀರು ಕುಡಿದರೆ ಒಳ್ಳೆಯದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top