fbpx
ಮನೋರಂಜನೆ

ಕೆಜಿಎಫ್ ಸಿನಿಮಾಗೆ ಎದುರಾಗಲಿದೆ ಒಂದು ಮಹಾ ಸಂಕಷ್ಟ

ಕರ್ನಾಟಕದ ಹೆಮ್ಮೆಯ ಚಿತ್ರವಾದ ಕೆಜಿಎಫ್ ಸಿನಿಮಾ ಇದೆ ತಿಂಗಳ ನೇ ತಾರೀಕಿನಂದು ತೆರೆಗೆ ಆಪ್ಪಳಿಸುತ್ತಲಿದ್ದು , ಸಿನಿ ಪ್ರೇಕ್ಷಕರ ಕುತೂಹಲವನು ಕೆರಳಿಸಿದೆ. ರಾಕಿಂಗ್ ಸ್ಟಾರ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಅಣಿಯಾಗಿದ್ದು, ಚಿತ್ರ ತೆರೆಕಂಡ ನಂತರ ಯಾವ ರೀತಿ ಧೂಳೆಬ್ಬಿಸಲಿದೆಯೋ ಕಾದ್ದು ನೋಡಬೇಕಿದೆ.

ಜಗತಿನಾದ್ಯಂತ ಸದ್ದು ಮಾಡುತ್ತಿರುವ ಕೆಜಿಎಫ್ ಸಿನಿಮಾ ಈಗ ಒಂದು ಮಹಾ ಸಂಕಷ್ಟಕ್ಕೆ ಗುರಿಯಾಗಿದ್ದು, ಈ ಸಂಕಷ್ಟದಿಂದ ಹೊರಬರಲು ಕೆಜಿಎಫ್ ಸಿನಿಮಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕೆತೆ ಇದೆ.

ಹಾಗಾದರೆ ಅದೇನು ಸಂಕಷ್ಟ ಅಂತೀರಾ? ನಮ್ಮ ಹೆಮ್ಮೆಯ ಕೆಜಿಎಫ್ ಸಿನಿಮಾ ‘ಪೈರಸಿ’ ಎಂಬ ಭೂತದ ಕಾಟಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಒಂದು ವೇಳೆ ಪೈರಸಿಯ ಕಾಟಕ್ಕೆ ಕೆಜಿಎಫ್ ಸಿನಿಮಾ ಸಿಲುಕಿದರೆ ಅದು ದೊಡ್ಡ ನಷ್ಟವಾಗಿ ಪರಿಣಮಿಸಿ ಬಿಡುತ್ತದೆ. ಇದಕ್ಕೆ ಉದಾಹರಣೆಯಂತೆ ಮೊನ್ನೆಯಷ್ಟೇ ಬಿಡುಗಡೆಯಾದ ಭಾರತೀಯ ಸಿನಿಮಾರಂಗದ ಬಹು ನಿರೀಕ್ಷಿತ ಸಿನಿಮಾ ರೋಬೊ.2 ಈಗಾಗಲೇ ತಮಿಳು ರಾಕರ್ಸ್ ವೆಬ್ ಸೈಟ್ ನಲ್ಲಿ ‘ಫುಲ್ ಹೆಚ್ ಡಿ ‘ ಯಲ್ಲಿ ಅಪ್ ಲೋಡ್ ಆಗಿದೆ. 550 ಕೋಟಿ ಬಜೆಟ್ ನಲ್ಲಿ ಸಿದ್ದವಾದ ಭಾರತದ ಅತೀ ವೆಚ್ಚದ ಸಿನಿಮಾ ಬಿಟ್ಟಿಯಾಗಿ ನೋಡುಗರೆ ಕೈಗೆ ಸಿಗುವಂತಾಗಿ ಹೋದರೆ, ಶ್ರಮವಹಿಸಿ ನಿರಂತರವಾಗಿ ಸಿನಿಮಾಗಾಗಿ ಕೆಲಸ ಮಾಡಿದವರ ಗತಿ ಏನು ಅಲ್ಲವೇ?

ಈ ಪರಿಸ್ಥಿತಿ ನಮ್ಮ ಕೆಜಿಎಫ್ ಸಿನಿಮಾಗೆ ಬರಬಾರದೆಂದರೆ, ಈ ಕೂಡಲೇ ನಮ್ಮ ಕೆಜಿಎಫ್ ತಂಡ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈ ಗೊಳ್ಳಲೇಬೇಕಿದೆ. ಏನಂತೀರಾ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top