fbpx
ಸಮಾಚಾರ

ಚಾಲೆಂಜಿಂಗ್​ ಸ್ಟಾರ್ ದರ್ಶನ್​​​​ಗೆ​ 100 ರೂ ದಂಡ ವಿಧಿಸಿದ ಬಿಬಿಎಂಪಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್​​ಗೆ ಬಿಬಿಎಂಪಿ ಫೈನ್ ಹಾಕಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂ. ದಂಡವನ್ನು ಬಿಬಿಎಂಪಿ ವಿಧಿಸಿದೆ..

ದರ್ಶನ್ ಅವ್ರು 2017- 18 ರ ಸಾಲಿನಲ್ಲಿ 12,024 ಆಸ್ತಿ ತೆರಿಗೆ ಕಟ್ಟಬೇಕಾಗಿತ್ತು. ಆದರೆ ಸರಿಯಾದ ಸಮಯಕ್ಕೆ ತೆರಿಗೆ ಕಟ್ಟದೇ ಇದ್ದಿದ್ದಕ್ಕೆ 100 ರೂ. ದಂಡ ಮತ್ತು 2164 ರೂ. ಬಡ್ಡಿ ಹಾಕಿದೆ. ದರ್ಶನ್ ಜೊತೆಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲೀಕತ್ವದ ಬಾಪೂಜಿ ಎಜುಕೇಷನ್ ಟ್ರಸ್ಟ್ 60 ಲಕ್ಷ ರೂ. ಆಸ್ತಿ ತೆರಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದ್ದು ಅದಕ್ಕೂ ದಂಡ ವಿಧಿಸಲಾಗಿದೆಯಂತೆ.

2017-18 ಹಾಗೂ 2018-19 ಸಾಲಿನಲ್ಲಿ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದ ₹12,024 ತೆರಿಗೆ ಕಟ್ಟದೇ ದರ್ಶನ್​​​ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಬಿಬಿಎಂಪಿ ₹2,164 ರೂಪಾಯಿ ಬಡ್ಡಿ ಹಾಕಿದೆ. ಇದರ ಜೊತೆಗೆ ₹100 ರೂಪಾಯಿ ದಂಡವನ್ನು ಕೂಡ ಹಾಕಿದೆ. ಇದೀಗ ಬಡ್ಡಿ ಹಾಗೂ ದಂಡ ಎರಡೂ ಸೇರಿ ದರ್ಶನ್​ ಬಿಬಿಎಂಪಿಗೆ ಒಟ್ಟು ₹14,889 ಕಟ್ಟಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top