ಮನೋರಂಜನೆ

ಮೊದಲ ಚಿತ್ರಕ್ಕೇ ಅಂಬಿ ಪುತ್ರ ಪಡೆದ ಸಂಭಾವನೆ ಇಷ್ಟೊಂದಾ? ಕೇಳಿದ್ರೆ ಶಾಕ್ ಆಗ್ತಿರಾ.

ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಬಾರಿ ನಾಯಕ ನಟನಾಗಿರೋ ಅಮರ್ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆಗಳು ಮನೆ ಮಾಡುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕ ಎಂದೇ ಹೆಸರುವಾಸಿಯಾಗಿರುವ ನಾಗಶೇಖರ್ ಬಿಡುವಿಲ್ಲದೆ ನಿರಂತರವಾಗಿ ಚಿತ್ರೀಕರಣ ಮಾಡುತ್ತಿದ್ದಾರೆ.. ರೆಬೆಲ್ ಸ್ಟಾರ್ ಪುತ್ರನ ಮೊದಲ ಚಿತ್ರವಾಗಿರುವುದರಿಂದ ಚಿತ್ರದ ಮೇಲೆ ಒಂದು ರೀತಿ ನಿರೀಕ್ಷೆಗಳು ಹುಟ್ಟುಕೊಂಡಿವೆ.. ಇದೀಗ ಚಿತ್ರಕ್ಕೆ ಸಂಭಂದಿಸಿದ ಸುದ್ದಿಯೊಂದು ಹೊರಬಿದ್ದಿದ್ದು ಅದನ್ನು ಕೇಳಿದ ಪ್ರತಿಯೊಬ್ಬರು ಅಚ್ಚರಿ ಪಡುತ್ತಿದ್ದಾರೆ.. ಏನು ಆ ಆಶ್ಚರ್ಯದಾಯಕ ಮ್ಯಾಟರ್ ಅಂತೀರಾ? ಮುಂದೆ ಓದಿ.

ಮೊದಲ ಸಿನಿಮಾಗೆ ಅಭಿಷೇಕ್ ದೊಡ್ಡ ಮೊತ್ತದ ಸಂಭಾವನೆಯನ್ನೆ ಪಡೆದಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದ್ದು ಅಮರ್’ಗಾಗಿ ಅಭಿಷೇಕ್​ ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ವಿಚಾರ ಆಪ್ತ ವಲಯದಲ್ಲಿ ಹರಿದಾಡುತ್ತಿದ್ದು ಅಚ್ಚರಿದಾಯಕವಾಗಿದೆ.. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ತನ್ನ ಮೊದಲ ಚಿತ್ರಕ್ಕೆ ಕನ್ನಡ ಸಿನಿಮಾ ರಂಗದಲ್ಲಿ ನಟನ ಮಗನೊಬ್ಬ ಅಧಿಕ ಮೊತ್ತದ ಸಂಭಾವನೆ ಪಡೆದಂತಾಗುತ್ತದೆ.

ಅಂದಹಾಗೆ ಚಿತ್ರದಲ್ಲಿ ಅಭಿಷೇಕ್ ಬೈಕ್​ ರೇಸರ್​ ಪಾತ್ರದಲ್ಲಿ ನಟಿಸುತ್ತಿದ್ದು ಅವರಿಗೆ ತಾನ್ಯಾ ಹೋಪ್ ನಾಯಕಿಯಾಗಿ ನಟಿಸುತ್ತಿದ್ದಾಳೆ. ಉಳಿದಂತೆ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದು ಸತ್ಯಾ ಹೆಗ್ಡೆ ಅವರ ಕ್ಯಾಮರಾ ಕೈಚಳಕ ಇರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top