fbpx
ಮನೋರಂಜನೆ

“ನಾನು 2ನೇ ಪ್ರಭಾಸ್ ಅಲ್ಲ, ಮೊದಲ ಯಶ್” ವೈರಲ್ ಆಯ್ತು ರಾಕಿಂಗ್ ಸ್ಟಾರ್ ಹೇಳಿಕೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಚಿತ್ರದ ಒಂದು ಟ್ರೈಲರ್​ನಿಂದ ಇಡೀ ಭಾರತ ಚಿತ್ರರಂಗವನ್ನು ಬಿಡುಗಡೆಗಾಗಿ ಕಾತುರತೆಯಿಂದ ಕಾಯುವಂತೆ ಮಾಡಿದೆ. ಬಾಹುಬಲಿ ಚಿತ್ರದ ಮೂಲಕ ಟಾಲಿವುಡ್ ನಟ ಪ್ರಭಾಸ್ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ಇದಗೀ ಯಶ್ ಅವರ ಹೆಸರು ಸಹ ದೊಡ್ಡ ಮಟ್ಟದಲ್ಲಿ ಕೇಳಿಬರದೆ.

ಮೊನ್ನೆ ಯಶ್​ ಮತ್ತು ತಂಡ ಚಿತ್ರದ ಕೆಜಿಎಫ್​ ತೆಲುಗು ಅವತರಿಣಿಕೆ ಪ್ರಮೋಷನ್​ಗಾಗಿ ಹೈದ್ರಾಬಾದ್​ಗೆ ತೆರಳಿತ್ತು. ಆಗ, ತೆಲುಗು ಮಾಧ್ಯಮದ ವರದಿಗಾರ್ತಿ ಒಬ್ಬರು ಯಶ್​ರ ಸಂದರ್ಶನ ಮಾಡಿದ್ದರು. ನಿಮ್ಮ ನಟನೆಯ ಕೆಜಿಎಫ್ ಚಿತ್ರ ಪ್ರಭಾಸ್ ನಟನೆಯ ಛತ್ರಪತಿ ಚಿತ್ರದ ಮಟ್ಟಕ್ಕೆ ನಿರೀಕ್ಷೆ ಹುಟ್ಟುಹಾಕಿದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ನೀವು ಎರಡನೇ ಪ್ರಭಾಸ್ ಆಗುವಿರಿ ಎಂದು ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ್ದ ಯಶ್ “ಹೋಲಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಸೆಕೆಂಡ್ ಎನ್ನುವ ಮಾತು ಬೇಡ. ನಾನು ಮೊದಲ ಯಶ್ ಆಗಿರಲು ಬಯಸುತ್ತೇನೆ. ಛತ್ರಪತಿ ಸಿನಿಮಾನೇ ಬೇರೆ, ನಮ್ಮ ಸಿನಿಮಾವೇ ಬೇರೆ. ”

ಕೆಜಿಎಫ್ ಬಗ್ಗೆ:
ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಸಿನಿಮಾ ಬಹುಕೋಟಿ ವೆಚ್ಚದ ಸಿನಿಮಾ. ಸುಮಾರು 70ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದ್ದು ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.. ಚಾಪ್ಟರ್-1 ಮತ್ತು ಚಾಪ್ಟರ್-2 ರೂಪದಲ್ಲಿ ಎರಡು ಕಂತುಗಳಲ್ಲಿ ‘ಕೆಜಿಎಫ್’ ಬಿಡುಗಡೆಯಾಗುತ್ತಿದೆ. ಮೊದಲ ಭಾಗದಲ್ಲಿ ರಾಕಿಯ ಬಾಲ್ಯ ಮತ್ತು ಭೂಗತ ಲೋಕದಲ್ಲಿ ಆತ ಗ್ಯಾಂಗ್​ಸ್ಟರ್ ಆಗಿ ಗುರುತಿಸಿಕೊಳ್ಳಲು ಕಾರಣವೇನು ಎಂಬುದನ್ನು ನಿರ್ದೇಶಕ ಪ್ರಶಾಂತ್ ನೀಲ್ ತೋರಿಸಲಿದ್ದಾರಂತೆ.

ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.. ಇಂಥಾ ಮಹೋನ್ನತ ಚಿತ್ರ ಡಿಸೆಂಬರ್ 21ರಂದು ದೇಶಾದ್ಯಂತ ತೆರೆಕಾಣುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top