fbpx
ಸಮಾಚಾರ

ವಿದೇಶಿ ಹುಡ್ಗನನ್ನು ಮದುವೆಯಾದಳು ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ.

ಬಾಲಿವುಡ್ ತುಂಬಾ ಸದ್ಯ ದೀಪಿಕಾ ಪಡುಕೋಣೆಯ ಮದುವೆಯ ಗೌಜು ಮುಗಿದಿಲ್ಲ. ಹಲವಾರು ವರ್ಷಗಳಿಂದ ರೂಮರ್‌ಗಳಿಗೆ ಆಹಾರವಾಗಿದ್ದ ದೀಪಿಕಾ ಕಡೆಗೂ ತನ್ನ ಪ್ರಿಯಕರ ನಟ ರಣವೀರ್ ಸಿಂಗ್ ನನ್ನು ಮದುವೆಯಾಗಿದ್ದಾಳೆ. ಬಾಲಿವುಡ್‌ನ ಅತಿರಥ ಮಹಾರಥರೆಲ್ಲ ಈ ಮದುವೆಯಲ್ಲಿ ಹಾಜರಿದ್ದು ಮಾಧ್ಯಮಗಳೂ ಇತ್ತ ಕಣ್ಣು ನೆಟ್ಟು ಕೂತಿದ್ದಾಗ ಬಾಲಿವುಡ್ಡಿನ ಮತ್ತೊಬ್ಬ ಖ್ಯಾತ ನಟಿಯಾದ ಪ್ರಿಯಾಂಕಾ ಚೋಪ್ರಾ ಕೂಡ ಮದುವೆ ಮಾಡಿಕೊಂಡಿದ್ದಾಳೆ.

 

 

ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಗಾಯಕ ನಿಕ್ ಜೋನಾಸ್ ಅವರ ಬಹು ನಿರೀಕ್ಷಿತ ವಿವಾಹ ಶನಿವಾರ ಅದ್ಧೂರಿಯಾಗಿ ನೆರವೇರಿತು. ಜೋಧ್‍ಪುರದ ಉಮೇದ್ ಭವನ್ ಅರಮನೆಯ ಹೋಟೆಲ್‍ನಲ್ಲಿ ಶನಿವಾರ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಕ್-ಪ್ರಿಯಾಂಕ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ರು.

ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ರಾಲ್ಪ್‌ ಲಾರೆನ್‌ ಗೌನ್‌ ಧರಿಸಿದ್ದರು. ಮದುಮಗ ನಿಕ್ ಜೊನಾಸ್ ಕೂಡ ಅದೇ ಡಿಸೈನರ್ ಲೇಬಲ್ ಇರುವ ಉಡುಗೆ ಧರಿಸಿದ್ದರು. ಇಂದು ಪ್ರಿಯಾಂಕಾ ಮತ್ತು ನಿಕ್‌ ಜೊನಾಸ್‌ ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯಾಗಲಿದ್ದಾರೆ.

ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ಮದುವೆಯ ಫೋಟೋ ಹಾಗೂ ವಿಡಿಯೋ ಹಕ್ಕನ್ನು ಅಂತಾರಾಷ್ಟ್ರೀಯ ನಿಯತಕಾಲಿಕೆ ಒಂದಕ್ಕೆ ಬರೋಬ್ಬರಿ 17 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಮದುವೆಯ ಮಹಲ್‍ನಲ್ಲಿ ಸಾಕಷ್ಟು ಭದ್ರತೆಯನ್ನು ಹಾಕಲಾಗಿದ್ದು, ಆಮಂತ್ರಿತರು ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top