ಮನೋರಂಜನೆ

ದೀಪಾವಳಿಗೆ ಪಟಾಕಿ ಹೊಡಿಬೇಡಿ ಎಂದಿದ್ದ ಪಿಗ್ಗಿ ಈಗ ಮಾಡಿದ್ದು ಸರೀನಾ? ಮದುವೆ ಮನೆಯಲ್ಲೊಂದು ವಿವಾದ.

ಕಳೆದೊಂದು ವರ್ಷದಿಂದ ಲವ್ ಅಫೆರಿನ ವಿಚಾರವಾಗಿ ಬಾಲಿವುಡ್ಡಿನಲ್ಲಿ ಭಾರಿ ಸುದ್ದಿಯಲ್ಲಿದೆ ಪ್ರಿಯಾಂಕಾ ಚೋಪ್ರಾ ತನ್ನ ಪ್ರಿಯಕರನನ್ನು ಕಟ್ಟಿಕೊಂಡಿದ್ದಾಳೆ. .ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಗಾಯಕ ನಿಕ್ ಜೋನಾಸ್ ಅವರ ಬಹು ನಿರೀಕ್ಷಿತ ವಿವಾಹ ಶನಿವಾರ ಅದ್ಧೂರಿಯಾಗಿ ನೆರವೇರಿತು. ಜೋಧ್‍ಪುರದ ಉಮೇದ್ ಭವನ್ ಅರಮನೆಯ ಹೋಟೆಲ್‍ನಲ್ಲಿ ಶನಿವಾರ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಕ್-ಪ್ರಿಯಾಂಕ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಆದರೆ ಟ್ವಿಟಿಗರು ಮಾತ್ರ ಪ್ರಿಯಾಂಕಾ ವಿರುದ್ಧ ಕೆಂಡಾಮಂಡಲವಾಗಿದ್ದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ. ಹಾಗಾದರೆ ಏನು ಕಾರಣ ಅಂತೀರಾ ಮುಂದೆ ಓದಿ?

ಮದುವೆಯ ಬಳಿಕ ಅರಮನೆಯ ಹೊರಗೆ ವಿದೇಶಿ ಸಂಪ್ರದಾಯದಂತೆ ಪಿಗ್ಗಿ ಮತ್ತು ನಿಕ್ ಆಕರ್ಷಕ ಪಟಾಕಿ ಪ್ರದರ್ಶನ ನಡೆಸಿದ್ದರು. ಆದರೆ ಈ ಹಿಂದೆ ದೀಪಾವಳಿ ಸಂದರ್ಭದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಪಟಾಕಿ ಸಿಡಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಲಿದೆ ಎಂದು ಜಾಗೃತಿ ಮೂಡಿಸಿದ್ದರು. ಜತೆಗೆ, ತನಗೆ ಅಸ್ತಮಾ ಇದೆ, ತನ್ನಂತಹ ಅಸ್ತಮಾ ರೋಗಿಗಳಿಗೆ ತೊಂದರೆಯಾಗುತ್ತೆ ಎಂಬುದನ್ನೂ ಕೂಡ ಹೇಳಿಕೊಂಡಿದ್ದರು. ಈ ಹಿನ್ನೆಲೆ, ದೀಪಾವಳಿ ಕಳೆದ ಒಂದು ತಿಂಗಳ ಬಳಿಕ ಅವರ ವಿವಾಹದಲ್ಲಿ ಈ ರೀತಿ ಪಟಾಕಿ ಹೊಡೆದಿರುವುದರಿಂದ ಟೀಕೆಗೆ ಗುರಿಯಾಗಿದ್ದಾಳೆ.

 

 

ದೀಪಾವಳಿಯಲ್ಲಿ ವರ್ಷಕ್ಕೊಂದು ದಿನ ಪಟಾಕಿ ಹೊಡೆಯುದರಿಂದ ಪರಿಸರ ಮಾಲಿನ್ಯವಾಗುತ್ತದೆ ಎಂದು ಒದರುವ ಪ್ರಿಯಾಂಕಾ ತನ್ನ ಮದುವೆಯಲ್ಲಿ ನಿಮಿಷಗಳ ಕಾಲ ಲಕ್ಷಾಂತರ ರೂ. ಪಟಾಕಿ ಸಿಡಿಸಿದ್ದಾರೆ. ಇದೇ ವಿಚಾರ ಇಟ್ಟುಕೊಂಡ ಸಾಮಾಜಿಕ ಜಾಲತಾಣಿಗರು ಪ್ರಿಯಾಂಕಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. ಈಗ ಪಿಗ್ಗಿಗೆ ಉಸಿರಾಟದ ಸಮಸ್ಯೆಯಾಗಲಿಲ್ಲವಾ? ಎಂದು ಆಕೆಯೇ ಉತ್ತರಿಸಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top