fbpx
ಮನೋರಂಜನೆ

ಕೊನೆಗೂ ಈಡೇರಿತು ರಾಕಿಂಗ್ ಸ್ಟಾರ್ ಆಸೆ- ಯಶ್‌–ರಾಧಿಕಾ ದಂಪತಿಗೆ ಹೆಣ್ಣು ಮಗು ಜನನ.

ಚಂದನವನದ ಕ್ಯೂಟೆಸ್ಟ್ ಕಪಲ್ ಯಶ್ – ರಾಧಿಕಾ ಪಂಡಿತ್ ಹೆಣ್ಣು ಮಗುವಿನ ಅಪ್ಪ- ಅಮ್ಮ ಆಗಿದ್ದಾರೆ. ಭಾನುವಾರ ಮುಂಜಾನೆ 6.20ರ ಸುಮಾರಿಗೆ ರಾಧಿಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಶ್ ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ವೈದ್ಯರು ದಿನಾಂಕ ನೀಡಿದ್ದರೂ ಅದಕ್ಕೂ ಒಂದು ವಾರ ಮುಂಚಿತವಾಗಿಯೇ ರಾಧಿಕಾ ಪಂಡಿತ್ ತಾಯಿಯಾಗಿದ್ದು, ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. .. 2016ರ ಡಿಸೆಂಬರ್ 9ಕ್ಕೆ ಸ್ಯಾಂಡಲ್​ವುಡ್​ನ ತಾರಾ ಜೋಡಿ ಯಶ್ ಮತ್ತು ರಾಧಿಕಾ ಮದುವೆಯಾಗಿತ್ತು. ಮೊದಲ ಮಗುವಿನ ಆಗಮನದ ಖುಷಿಯಲ್ಲಿರುವ ರಾಧಿಕಾ ಪಂಡಿತ್ ಮತ್ತು ಯಶ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿವೇ.

 

 

ಮಗುವಿನ ವಿಚಾರದಲ್ಲಿ ಯಶ್​ ಆಸೆಯೇ ಈಡೇರಿದೆ. ಅದು ಹೇಗೆ ಅಂತೀರಾ? ಯಶ್​ಗೆ ಹೆಣ್ಣು ಮಗು ಬೇಕು ಎನ್ನುವ ಇಚ್ಛೆ ಇತ್ತು. ರಾಧಿಕಾ ಗಂಡು ಮಗು ಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದರು. ನಿನ್ನೆ ಇನ್ಸ್​​​ಟಾಗ್ರಾಂನಲ್ಲಿ ಈ ಕುರಿತಂತೆ ರಾಧಿಕಾ ಫೋಟೋವೊಂದನ್ನು ಅಪ್​ಲೋಡ್​ ಮಾಡಿದ್ದರು. ಈಗ ಹೆಣ್ಣು ಮಗು ಜನಿಸಿರುವುದರಿಂದ ಯಶ್​ ಆಸೆ ಈಡೇರಿದಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top