ಭವಿಷ್ಯ

12 ರಾಶಿಯವರು ಯಾವ ದೀಪವನ್ನು ಹಚ್ಚಿದರೆ ಒಳ್ಳೆಯದಾಗಿ ಸಮಸ್ಯೆಗಳು ಪಟ್ ಅಂತ ಪರಿಹಾರವಾಗುತ್ತೆ ಗೊತ್ತಾ

ಮೇಷ ರಾಶಿಮೇಷ ರಾಶಿಯವರು ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು. ನಿಂಬೆ ಹಣ್ಣನ್ನು ಕತ್ತರಿಸಿ ಎರಡು ಭಾಗವನ್ನಾಗಿ ಮಾಡಿ, ಅದರ ರಸವನ್ನು ತೆಗೆದು ಅದನ್ನು ಉಲ್ಟಾ ಮಾಡಿ ಅದರಲ್ಲಿ ಯಾವ ಎಣ್ಣೆಯನ್ನು ಬೇಕಾದರೂ ಹಾಕಬಹುದು ಈ ರೀತಿಯಾಗಿ ದೀಪಾ ಹೆಚ್ಚಿದರೆ ತುಂಬಾ ಒಳ್ಳೆಯದು.

ವೃಷಭ ರಾಶಿ:ಬೂದು ಗುಂಬಳಕಾಯಿಯ ದೀಪವನ್ನು ಹಚ್ಚಬೇಕು. ವಾರಕ್ಕೆ ಅಥವಾ ತಿಂಗಳಿಗೆ ಒಂದು ಬಾರಿಯಾದರೂ ಈ ದೀಪ ಹಚ್ಚಿದರೆ ಬೇಗನೆ ಕಷ್ಟಗಳು ನಿವಾರಣೆಯಾಗಿ ಅದೃಷ್ಟ ಒಲಿಯುತ್ತದೆ .

ಈ ದೀಪಗಳನ್ನು ಯಾವಾಗ ಹಚ್ಚಬೇಕು ?

ಭಾನುವಾರ ರಾಹುಕಾಲದ ಸಮಯದಲ್ಲಿ ಈ ದೀಪಗಳನ್ನು ಹಚ್ಚಿದರೆ ತುಂಬಾ ಒಳ್ಳೆಯದು ಮತ್ತು ಈಶ್ವರನ ದೇವಸ್ಥಾನದಲ್ಲಿ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಚ್ಚಿದರೆ ಕೂಡ ತುಂಬಾ ಒಳ್ಳೆಯದು. ಇನ್ನು ಯಾವ ದೇವಸ್ಥಾನವೂ ಸಿಕ್ಕಿಲ್ಲ ಎಂದರೆ ನಿಮ್ಮ ಮನೆಯ ಒಳಗಡೆ ಒಂದು ತಟ್ಟೆಯಲ್ಲಿ ಇಟ್ಟು ದೇವರ ಮುಂದೆ ಆದರೂ ಹಚ್ಚಿದರು ಕೂಡ ಒಳ್ಳೆಯದು.

 

 

 

ಮಿಥುನ ರಾಶಿ:ಮನೆಯಲ್ಲಿ ಚಿನ್ನ, ಬೆಳ್ಳಿಯ ದೀಪ ಇರಬಹುದು ಆದರೆ ಮಿಥುನ ರಾಶಿಯವರು ಮಣ್ಣಿನ ದೀಪವನ್ನು ಹಚ್ಚಿದರೆ ತುಂಬಾ ಶ್ರೇಷ್ಠ.ಇದರಿಂದ ಅನೇಕ ಸಮಸ್ಯೆಗಳು ಬೇಗನೇ ತೀರಿ ಹೋಗಿ ಅದೃಷ್ಟ ಬರುತ್ತದೆ.

ಕಟಕ ರಾಶಿ:ಈ ರಾಶಿಯವರು ಹಾಗಲಕಾಯಿಯ ದೀಪವನ್ನು ಹಚ್ಚಬೇಕು. ಇದನ್ನು ಯಾರು ಬೇಕಾದರೂ ಹಚ್ಚಬಹುದು.ಈ ದೀಪವನ್ನು ಹಚ್ಚುವುದರಿಂದ ತುಂಬಾ ಕಷ್ಟ ಮತ್ತು ಸಮಸ್ಯೆಗಳಿಂದ ಬಳಲುತ್ತಿರುವವರು ಹಚ್ಚಿದರೆ ಅವರ ಕಷ್ಟಗಳು ಬೇಗನೆ ಪರಿಹಾರವನ್ನು ಕಾಣುತ್ತವೆ. ಹಾಗಲಕಾಯಿಯನ್ನು ಮಧ್ಯಕ್ಕೆ ಕತ್ತರಿಸಿ ಅದರೊಳಗಡೆ ಇರುವುದನೆಲ್ಲ ತೆಗೆದು ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚುವುದರಿಂದ ನಿಮ್ಮ ಜೀವನದಲ್ಲಿರುವ ಸಮಸ್ಯೆಗಳ ಹೊರಟು ಹೋಗುತ್ತವೆ.

ಸಿಂಹ ರಾಶಿ:ಸಿಂಹ ರಾಶಿಯವರು ತೆಂಗಿನಕಾಯಿಯ ದೀಪವನ್ನು ಹಚ್ಚಬೇಕು. ತೆಂಗಿನ ಕಾಯಿಯನ್ನು ಮಧ್ಯಕ್ಕೆ ಸರಿಯಾಗಿ ಒಡೆದು ಅದರೊಳಗಡೆ ಕುಂಕುಮವನ್ನು ಹಚ್ಚಿ,ಎಣ್ಣೆಯನ್ನು ಹಾಕಿ ದೀಪ ಹಚ್ಚಬೇಕು. ಕೆಲವು ತೆಂಗಿನ ಕಾಯಿ ಕುಳಿತುಕೊಳ್ಳುವುದಿಲ್ಲ ಆದ್ದರಿಂದ ಒಂದು ಬಟ್ಟಲು ಅಥವಾ ಬಾಂಡ್ಲಿಯನ್ನು ತೆಗೆದುಕೊಂಡು ಅದರೊಳಗೆ ಅಕ್ಕಿಯನ್ನು ಹಾಕಿ ದೀಪವನ್ನು ಹಚ್ಚಬೇಕು.ಇದರಿಂದ ತುಂಬಾ  ಒಳ್ಳೆಯದಾಗುತ್ತದೆ.

 

 

 

ಕನ್ಯಾ ರಾಶಿ:ಕನ್ಯಾ ರಾಶಿಯವರು ಕಾಮಾಕ್ಷಿ ದೀಪವನ್ನು ಹಚ್ಚಬೇಕು. ಕಾಮಾಕ್ಷಿ ದೀಪ ಮಾಮೂಲಿ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ.ಅದನ್ನು ತೆಗೆದುಕೊಂಡು ಈ ದೀಪವನ್ನು ಹಚ್ಚಬೇಕು.

ತುಲಾ ರಾಶಿ:ತುಲಾ ರಾಶಿಯವರು ಐದು ಮೂಲೆಯ ಅಂದರೆ ಐದು ಮೂತಿ ಇರುವ ಮಣ್ಣಿನ ದೀಪವನ್ನು ತೆಗೆದುಕೊಂಡು ಐದು ಮೂಲೆಗೂ ಬತ್ತಿಯನ್ನು ಹಾಕಿ ದೀಪ ಹಚ್ಚಬೇಕು.

ವೃಶ್ಚಿಕ ರಾಶಿ:ವೃಶ್ಚಿಕ ರಾಶಿಯವರು ಯಾವ ದೀಪವನ್ನು ಆದರೂ ಹಚ್ಚಬಹುದು. ಆದರೆ ತುಪ್ಪವನ್ನು ಹಾಕಿ ತುಪ್ಪದ ದೀಪವನ್ನು ಹಚ್ಚಿದರೆ ತುಂಬಾ ಒಳ್ಳೆಯದಾಗುತ್ತದೆ.

ಧನಸ್ಸು ರಾಶಿ:ಧನಸ್ಸು ರಾಶಿಯವರು ಬೆಳ್ಳಿಯ ದೀಪವನ್ನು ಹಚ್ಚಿದರೆ ತುಂಬಾ ಒಳ್ಳೆಯದು. ಎಲ್ಲಾ ವಿಷಯಗಳಲ್ಲೂ ಯಶಸ್ಸನ್ನು ಕಾಣುತ್ತೀರ.

ಮಕರ ರಾಶಿ:ಮಕರ ರಾಶಿಯವರು ಯಾವ ದೀಪವನ್ನಾದರೂ ಹಚ್ಚಬಹುದು ಆದರೆ ಸೂರ್ಯಕಾಂತಿ ಎಣ್ಣೆಯಿಂದ ದೀಪವನ್ನು ಹಚ್ಚಬೇಕು.

ಕುಂಭ ರಾಶಿ:ಕುಂಭ ರಾಶಿಯವರು ಎಳ್ಳಿನ ಎಣ್ಣೆಯ  ದೀಪವನ್ನು ಹಚ್ಚಬೇಕು.

ಮೀನ ರಾಶಿ:ಮೀನ ರಾಶಿಯವರು ಬೇವಿನ ಎಣ್ಣೆಯ ದೀಪವನ್ನು ಹಚ್ಚಬೇಕು.

ಬೇಗನೆ ನಮ್ಮ ಆಸೆಗಳು ಈಡೇರಬೇಕು ಎಂದರೆ,ಭಾನುವಾರ ರಾಹುಕಾಲದ ಸಮಯದಲ್ಲಿ  27 ದೀಪಗಳನ್ನು ಹಚ್ಚಬೇಕು. 27 ಸಂಖ್ಯೆ ಏನಕ್ಕೆ ಎಂದರೆ ಒಟ್ಟಾರೆಯಾಗಿ 27 ನಕ್ಷತ್ರಗಳು ಇರುತ್ತವೆ. ಆದ್ದರಿಂದ 27 ದೀಪಗಳನ್ನು ದೇವಸ್ಥಾನದಲ್ಲಿ ಹಚ್ಚಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top