fbpx
ಸಿನಿಮಾ

34 ವರ್ಷಗಳ ಹಿಂದೆಯೇ ಚಿತ್ರರಂಗಕ್ಕೆ ವಿದಾಯ ಹೇಳಲು ಹೊರಟ್ಟಿದ್ದರಂತೆ ವಿಷ್ಣುದಾದಾ

ವಿಷ್ಣುದಾದ ನಿಧನ ಹೊಂದಿ ವರ್ಷಗಳೇ ಗತಿಸಿದರೂ ಇಂದಿಗೂ ಅವರ ಸ್ಮಾರಕದ ವಿಚಾರ ಬಗೆಹರಿಯದೆ ಇರುವುದು ವಿಷಾದವೇ ಸರಿ. ಆದರೆ ವಿಷ್ಣು ಅಭಿಮಾನಿಗಳು ಸಾಹಸ ಸಿಂಹನಿಗಾಗಿ ತಮ್ಮ ಹೃದಯದಲ್ಲಿ ಒಂದು ಸ್ಮಾರಕವ ನಿರ್ಮಿಸಿ ವಿಷ್ಣುದಾದಾರನ್ನು ಇಂದಿಗೂ ಆರಾಧಿಸುತ್ತಲೇ ಬಂದಿರುವುದು ವಿಷ್ಣುದಾದಾರ ಆದರ್ಶ ಬದುಕಿಗೆ ಹಿಡಿದ ಕೈ ಗನ್ನಡಿಯೇ ಹೌದು.

ಆದರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರು 34 ವರ್ಷದ ಹಿಂದೆ ತಮ್ಮ ನಟನ ಬದುಕಿಗೆ ವಿದಾಯ ಹೇಳಲು ಹೊರಟಿದ್ದರಂತೆ…ಹೌದು, ವಿಷ್ಣುವರ್ಧನ್ ರವರು ತೆರೆಯ ಮೇಲೆ ಸೂಪರ್ ಸ್ಟಾರ್ ನಂತೆ ಮಿಂಚುತ್ತಿರುವ ಸಮಯದಲ್ಲಿ ಅವರಿಗೆ ಅನಾಮಿಕ ಟೆಲಿಫೋನ್​​ ಕರೆಗಳಿಂದ ಬೈಗುಳಗಳ ಪ್ರವಾಹವೇ ಹರಿದು ಬರುತ್ತಿತ್ತಂತೆ. ಹಾಗೂ ವಿಷ್ಣು ಸಿನಿಮಾ ಪೋಸ್ಟರ್ ಗಳಿಗೆ ಸಗಣಿ ಬಳೆಯಲಾಗುತ್ತಿತ್ತಂತೆ ಮತ್ತು ವಿಷ್ಣುವರ್ಧನ್ ರವರ ಸಿನಿ ಜರ್ನಿಯಲ್ಲಿ ಅತಿ ದೊಡ್ಡ ಬ್ರೇಕ್ ಕೊಟ್ಟ ‘ಬಂಧನ’ ಚಿತ್ರದ ಬಿಡುಗಡೆಗೆ ಅಡ್ಡಿ ಆತಂಕಗಳು ಎದುರಾಗಿದ್ದವಂತೆ. ಬಂಧನ ಸಿನಿಮಾದ ಪೋಸ್ಟರ್​ಗಳಿಗೂ ಸಗಣಿ ಮೆತ್ತುತ್ತಿದ್ದರಂತೆ. ಈ ಘಟನೆಗಳಿಂದ ಬೇಸತ್ತ ಡಾ.ವಿಷ್ಣುವರ್ಧನ್ ಚಿತರಂಗಕ್ಕೆ ಗುಡ್ ಬೈ ಹೇಳಿ ಮದರಾಸ್ ನಲ್ಲಿ ಹೋಗಿ ನೆಲೆಸುವ ನಿರ್ಧಾರಕ್ಕೆ 34 ವರ್ಷಗಳ ಹಿಂದೆಯೇ ಬಂದಿದ್ದರಂತೆ.

ಆದರೆ ಅದೃಷ್ಟವಶಾತ್ ಕೆಲವು ಹಿರಿಯ ಪತ್ರಕರ್ತರ, ಆಪ್ತ ಸ್ನೇಹಿತರ ಸಲಹೆಗಳಿಂದ ಚಿತ್ರರಂಗ ಬಿಡುವ ವಿಚಾರವನ್ನು ತದನಂತರ ಕೈ ಬಿಟ್ಟರಂತೆ ವಿಷ್ಣು .ಆಮೇಲೆ ದೇವರ ಕೃಪೆ ಎಂಬಂತೆ ಅವರ ಬಂಧನ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡ ಮೇಲೆ ಚಿತರಂಗಕ್ಕೆ ವಿದಾಯ ಹೇಳಬೇಕೆಂದಿದ್ದ ವಿಷ್ಣು ಮತ್ತೆ ಆ ಬಗ್ಗೆ ಯೋಚಿಸಲಿಲ್ಲವಂತೆ ಎಂದು ಕನ್ನಡದ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ತಮ್ಮ ಫೇಸ್​ಬುಕ್ ವಾಲ್​ನಲ್ಲಿ ಬರೆದುಕೊಂಡಿದ್ದಾರೆ.a

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top