fbpx
ಮನೋರಂಜನೆ

ನಟ ಜಗ್ಗೇಶ್ ರವರ ಈ ಖಡಕ್ ಹೇಳಿಕೆಗೆ ಬೆಂಬಲ ಸೂಚಿಸಿದ ರಿಯಲ್ ಸ್ಟಾರ್ ಉಪೇಂದ್ರ

ಡಾ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಾಗೂ ಸರ್ಕಾರದಲ್ಲಿನ ಬಹುತೇಕ ಗಣ್ಯರು ಭಾಗವಹಿಸಿದ್ದರು. ಆ ವೇಳೆ ನೆರೆದಿದ್ದ ಹಲವು ಕಲಾವಿದರು ತಮ್ಮದೇ ಮಾತುಗಳ ಮೂಲಕ ಅಂಬಿಗೆ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಜಗ್ಗೇಶ್ ಅಂಬಿಯ ಕುರಿತು ಮನಮಿಡಿಯುವಂತೆ ಮಾತನಾಡಿದರು. ಅದರೊಂದಿಗೆ ಮಾತು ಮುಂದುವರೆಸಿ ವಿಷ್ಣು ಸ್ಮಾರಕ ಸ್ಥಾಪನೆಯಲ್ಲಿ ಉಂಟಾಗಿರುವ ಗೊಂದಲ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಮುಂದಿನ ತಲೆಮಾರಿನ ಯಾವುದೇ ನಟರಿಗೆ ಸರ್ಕಾರ ವತಿಯಿಂದ ಸ್ಮಾರಕ ನಿರ್ಮಾಣ ಕಾರ್ಯ ಬೇಡ ಎಂದು ಹೇಳುತ್ತಾ ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಮತ್ತು ಡಾ. ಅಂಬರೀಶ್ ಅವರಿಗೆ ಸ್ಮಾರಕ ಸಾಕು. ಮುಂದಿನ ಪೀಳಿಗೆಯವರಿಗೆ ಸ್ಮಾರಕ ಬೇಕು ಅಂದರೆ ನಮ್ಮ ಜಾಗದಲ್ಲೇ ಅಥವಾ ಅದಕ್ಕಾಗಿಯೇ ಒಂದು ಎಕರೆ ಜಾಗ ತಗೊಂಡು ಅಲ್ಲಿ ಸ್ಮಾರಕ ಮಾಡಿಕೊಳ್ಳೋಣ ಹಾಗೂ ನಮಗೇ ಸ್ಮಾರಕ ಮಾಡಿಕೊಡಿ ಎಂದು ಯಾವ ಕಲಾವಿದನೂ ಸರ್ಕಾರದ ಮುಂದೆ ಹೋಗಿ ಭಿಕ್ಷೆ ಬೇಡುವುದು ಬೇಡ ಎಂದು ಹೇಳಿಕೆ ಕೊಟ್ಟಿದ್ದರು.

ಜಗ್ಗೇಶ್ ರ್ ಈ ಹೇಳಿಕೆಯು ಇರುವ ಫೋಟೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ಹೇಳಿಕೆ ಇರುವ ಫೋಟೋ ಒಂದನ್ನು ನಟ ಉಪೇಂದ್ರ ರವರು ತಮ್ಮ್ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಚಪ್ಪಾಳೆ ಎಮೋಜಿ ಹಾಕುವ ಮೂಲಕ ನಟ ಜಗ್ಗೇಶ್ ರವರ ಮಾತಿಗೆ ಬೆಂಬಲ ಸೂಚಿಸಿದ್ದಾರೆ.

 

 

ಉಪೇಂದ್ರ ರವರ ಈ ಟ್ವೀಟ್ ನ್ನು ನೋಡಿದ ಜಗ್ಗೇಶ್ ಖುಷಿ ಪಟ್ಟು ಉಪೇಂದ್ರ ರವರಿಗೆ ಧನ್ಯವಾದಗಳನ್ನು ತಿಳಿಸುವುದರೊಂದಿಗೆ ಲವ್ ಯು ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top