fbpx
ಸಮಾಚಾರ

ಅಂಬಿಯ ಚಿತಾಭಸ್ಮ ಗಂಗೆಯ ಮಡಿಲಿಗೆ

ನವೆಂಬರ್ 24 ರಂದು ಅಸುನೀಗಿದ ಅಂಬರೀಶ್ ಅವರ ಅಂತ್ಯಕ್ರಿಯೆ ನವೆಂಬರ್ 26 ರಂದು ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ನಡೆಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತ್ತು ನಾಲ್ಕು ದಿನಗಳ ಬಳಿಕ ಹಾಲು ತುಪ್ಪ ಕಾರ್ಯ ಸೇರಿದಂತೆ ವಿಧಿ ವಿಧಾನಗಳು ಕಳೆದ ಬುಧವಾರ ನಡೆದಿತ್ತು. ಹಾಲು ತುಪ್ಪದ ಕಾರ್ಯ ಜರುಗಿದ ದಿನವೇ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಕಾವೇರಿ ನದಿಯಲ್ಲಿ ಅಂಬರೀಶ್ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು.

ನಂತರ ನಿನ್ನೆ ಗಂಗಾ ನದಿಯಲ್ಲಿ ಅಂಬರೀಶ್ ರವರ ಸಹ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಹಿರಿಯ ನಟ ಹಾಗೂ ಅಂಬರೀಶ್ ಆಪ್ತ ದೊಡ್ಡಣ್ಣ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಾಶಿಗೆ ತೆರಳಿ ವಿಧಿ ವಿಧಾನಗಳನ್ನ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ದಿವಂಗತ ಅಂಬರೀಶ್ ಅವರ ಚಿತಾಭಸ್ಮ ಗಂಗಾ ತಾಯಿಯ ಮಾಡಲಿಗೆ ಸೇರಿದೆ.

ಈ ಮುಂಚೆಯೇ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಅಂಬರೀಶ್ ಚಿತಾಭಸ್ಮವನ್ನು 4 ಕಡೆ ವಿಸರ್ಜನೆ ಮಾಡಲಾಗುವುದೆಂದು ತಿಳಿಸಿದ್ದರು ಆದರೆ ಮುಂದೆ ಈ ಕುರಿತಾಗಿ ಅಂಬಿ ಕುಟುಂಬ ಮತ್ತು ಸ್ನೇಹಿತರ ಬಳಗ ಯಾವ ನಿರ್ಧಾರ ಕೈ ಗೊಳ್ಳುತ್ತಾರೋ ಕಾದು ನೋಡಬೇಕಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top