fbpx
ಸಮಾಚಾರ

ಕಿರುತೆರೆಗೆ ಬರ್ತಿದೆ ‘ಅಂಬಿ’ ನಾಯಕನಾಗಿ ನಟಿಸಿದ ಕೊನೆ ಸಿನಿಮಾ.

ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ.. ನಮ್ಮಿಂದ ದೈಹಿಕವಾಗಿ ದೂರಾಗಿ ವಾರವೇ ಗತಿಸಿಹೋಗಿದೆ. ಅಂಬಿಯ ಅಭಿಮಾನಿಗಳ ನೆನಪಿನ ಬುತ್ತಿಯಲ್ಲಿ ‘ಅಂಬಿ ನಿಂಗೆ ವಯಸಾಯ್ತೋ’ ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ.. ಅನಾರೋಗ್ಯ ಬಾಧಿಸುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಸಿನಿಮಾ ಕಿರುತೆರೆಗೆ ಬರಲು ಸಜ್ಜಾಗಿದೆ.

ಸಪ್ಟೆಂಬರ್ 27ರಂದು ತೆರೆಗೆ ಬಂದಿದ್ದ ಈ ಸಿನಿಮಾ ಈಗ ಕಿರುತೆರೆಯಲ್ಲಿ ಪ್ರಸಾರವಾಗಲು ರೆಡಿಯಾಗಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀಧಿಸಿದ್ದ ಸ್ಟಾರ್ ಸುವರ್ಣ ವಾಹಿನಿ ಸಿನಿಮಾವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲಿದೆ. ಡಿಸೆಂಬರ್ 9 ರಂದು ಸಂಜೆ 7 ಗಂಟೆಗೆ ಚಿತ್ರ ಪ್ರಸಾರವಾಗಲಿದ್ದು, ಸದ್ಯ ಅದರ ಪ್ರೊಮೋವನ್ನು ಸ್ಟಾರ್ ಸುವರ್ಣ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.

 

 

‘ಅಂಬಿ ನಿಂಗೆ ವಯಸ್ಸಯ್ತೋ’ ಯುವ ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶನದ ಸಿನಿಮಾವಾಗಿದ್ದು, ಇದು ಅವರಿಗೆ ಮೊದಲ ಸಿನಿಮಾ.. ಸಿನಿಮಾ ಯಶಸ್ಸುಕಂಡಿದ್ದು ಮೊದಲ ಪ್ರಯತ್ನದಲ್ಲಿ ಮಹೇಶ್ ಕುಮಾರ್ ಗೆದ್ದಿದ್ದಾರೆ.. ಜಾಕ್ ಮಂಜು ಮತ್ತು ಕಿಚ್ಚ ಸುದೀಪ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಅಂಬರೀಶ್, ಸುದೀಪ್, ಸುಹಾಸಿನಿ, ಶ್ರುತಿ ಹರಿಹರನ್ ನಟಿಸಿದ್ದರು. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top