ಸಮಾಚಾರ

ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಮತ್ತೊಂದು ದೂರು ದಾಖಲು.

ಸಮಾಜದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗ್ಗೆ ಮಾತಾಡುತ್ತಲೇ ನೇರಾ ನೇರ ಅಭಿಪ್ರಾಯ ಮಂಡಿಸೋ ಮೂಲಕ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿರುವವರು ಬಹುಭಾಷಾ ನಟ ಪ್ರಕಾಶ್ ರೈ. ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವ ನಟ ಪ್ರಕಾಶ್ ರೈ, ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಟೀಕಿಸುತ್ತಲೇ ಬಂದಿದ್ದರು.

ಇಂಥಾ ರೈಗೆ ಇದೀಗ ಸಂಕಷ್ಟ ಎದುರಾಗಿದೆ.. ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅಕ್ರಮವಾಗಿ ಒಬ್ಬರೆ ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವ ಆರೋಪದ ಹಿನ್ನೆಲೆ, ರೈ ವಿರುದ್ಧ ದೂರು ದಾಖಲಿಸಲಾಗಿದೆ.. ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಿವಾಸಿ ಜಗನ್ ಕುಮಾರ್ ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಪ್ರಕಾಶ್ ರೈ ತಮಿಳುನಾಡಿನ ವೇಲಚ್ಚೇರಿ ವಿಧಾನಸಭೆಯಲ್ಲಿಯೇ ಎರಡು ವೋಟರ್ ಐಡಿ ಹೊಂದಿದ್ದಾರೆ. ಅಲ್ಲದೇ, ಆಂಧ್ರದ ರಂಗಾರೆಡ್ಡಿ ಜಿಲ್ಲೆಯ ಸೇರಿಲಿಂಗಮ್ ಪಲ್ಲಿ ವಿಧಾನಸಭೆಯಲ್ಲಿ ಮತದಾನ ಹಕ್ಕು ಹೊಂದಿದ್ದಾರೆಂಬ ಆರೋಪವಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.. “ನನ್ನ ಬಳಿ ಕೇವಲ ಒಂದೇ ವೋಟರ್ ಐಡಿ ಇದೆ. ಆದರೆ ಕೆಲವರು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ತಪ್ಪುಗ್ರಹಿಕೆಯಿಂದ ನನ್ನ ವಿರುದ್ಧ ಈ ದೂರು ನೀಡಲಾಗಿದೆ ಎಂದು ಕಾಣುತ್ತಿದೆ.. ಒಂದು ವೇಳೆ ಅವರ ಬಳಿ ಆಧಾರಗಳಿದ್ದರೆ ಸಾಭೀತು ಮಾಡಲಿ.. ಪ್ರಶ್ನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಕರ್ನಾಟಕದಲ್ಲಿ ಮತದಾನ ಮಾಡುತ್ತಿಲ್ಲವೆಂದು ಅನೇಕರು ದೂರುತ್ತಿದ್ದಾರೆ ಆದರೆ ಕರ್ನಾಟಕದಲ್ಲಿ ನಾನು ವೋಟರ್ ಐಡಿಯೇ ಇಲ್ಲ. ತಮಿಳುನಾಡಿನ ಅಡಿಯಾರ್‌ನಲ್ಲಿ ನಾನು 20 ವರ್ಷಗಳಿಂದ ವಾಸವಾಗಿದ್ದೇನೆ. ಆದ್ದರಿಂದ ಅಲ್ಲಿ ಮಾತ್ರ ಮತದಾನದ ಗುರುತಿನ ಚೀಟಿ ಹೊಂದಿದ್ದೇನೆ.”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top