ಸಮಾಚಾರ

ಮತ್ತೆ ಶುರುವಾಯ್ತು ದುನಿಯಾ ವಿಜಿ ಕೌಟುಂಬಿಕ ಕಲಹ-ಬುಸುಗುಟ್ಟಿದ ‘ನಾಗ’ರತ್ನ.

ಇನ್ನೇನು ಮುಗಿಯಿತು ಎಂದು ಭಾವಿಸುವಷ್ಟರಲ್ಲಿ ನಟ ದುನಿಯಾ ವಿಜಯ್ ಕೌಟುಂಬಿಕ ಕಲಹವು ಮತ್ತೆ ಹೊಸ ರೂಪವನ್ನು ಪಡೆದುಕೊಂಡಿದೆ. ವಿಜಿ ವಿರುದ್ಧ ಮತ್ತೆ ಕೆಂಡಕಾರಿರುವ ನಾಗರತ್ನ ಇದೀಗ, ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಮನೆಗಾಗಿ ವಿಜಿ ವಿರುದ್ಧ ದೂರು ನೀಡಲು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಲಿದ್ದಾರೆ. ನಾಗರತ್ನ ಅವರು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿಯನ್ನು ಭೇಟಿಯಾಗಿ ತಮ್ಮ ಪತಿ ವಿಜಿ ವಿರುದ್ಧ ದೂರು ನೀಡಲಿದ್ದಾರೆ.

ಮಾಸ್ತಿಗುಡಿ ಸಿನಿಮಾ ನಿರ್ಮಾಪಕ ಸುಂದರ್ ಗೌಡ ವಾಸಿಸುತ್ತಿರುವ ಮನೆ ವಿಜಿಗೆ ಸೇರಿದ್ದಂತೆ. ಹಾಗಾಗಿ, ನಾಗರತ್ನ ಅವರು ಸುಂದರ್ ಗೌಡ ಉಳಿದುಕೊಂಡಿರುವ ಮನೆ ಮೇಲೆ ಕಣ್ಣು ಹಾಕಿದ್ದಾರೆ. ಆ ಮನೆ ತಮಗೇ ದಕ್ಕುವಂತೆ ಮಾಡಿಕೊಡಬೇಕು ಎಂದು ನಾಗರತ್ನ, ಮಹಿಳಾ ಆಯೋಗಕ್ಕೆ ಮನವಿ ಮಾಡಲಿದ್ದಾರೆ. ಹಾಗೆಯೇ ಮಕ್ಕಳಾದ ಮೊನಿಶಾ, ಮೊನಿಕಾ ಕೂಡ ಸಾಥ್ ನೀಡಲಿದ್ದು ಮನೆ ಜೊತೆಗೆ ತಮಗೆ ಸರಿಯಾದ ಜೀವನಾಂಶ ಕೊಡಿಸುವಂತೆ ಕೇಳಿಕೊಳ್ಳಲಿದ್ದಾರೆ.

ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಹಿಂಭಾಗದಲ್ಲಿರೋ ದುನಿಯಾ ವಿಜಿ ಮನೆಯಿದ್ದು, ಈಗಾಗಲೇ ವಿಜಿ ತನ್ನ ಸ್ನೇಹಿತ ಸುಂದರ್ ಗೌಡಗೆ 4 ವರ್ಷದ ಹಿಂದೆ ಮನೆ ಮಾರಿದ್ದಾರೆ. ಸುಂದರ್ ಗೌಡಗೆ ವಿಜಿ ಮನೆ ಮಾರಿರುವ ವಿಚಾರ ತಿಳಿಯುತ್ತಿದ್ದಂತೆ ವಿಜಿ ವಿರುದ್ಧ ನಾಗರತ್ನ ಗರಂ ಆಗಿದ್ದಾರೆ. ನನ್ನ ಅನುಮತಿಯಿಲ್ಲದೆ ವಿಜಿ ಮನೆ ಮಾರಿದ್ದಾರೆ ಎಂದು ನಾಗರತ್ನ ಆರೋಪ ಮಾಡುತ್ತಿದ್ದಾರೆ. ಈ ವಿಚಾರವಾಗಿಯೇ ಇಂದು ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top