fbpx
ಮನೋರಂಜನೆ

ಅಂದು ರಾಧಿಕಾ ಪಂಡಿತ್ ಗೆ ಪ್ರಥಮ್ ಹೇಳಿದ ಭವಿಷ್ಯ ನಿಜವಾಗೇ ಹೊಯ್ತು – ವಿಡಿಯೋ ನೋಡಿ

ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ರವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಹೌದು ಸ್ಯಾಂಡಲ್ ವುಡ್ ಸೂಪರ್ ಜೋಡಿಯ ಮನೆಗೆ ಮುದ್ದು ಮಹಾಲಕ್ಷ್ಮಿ ಅಂದರೆ ಹೆಣ್ಣು ಮಗುವಿನ ಆಗಮನವಾಗಿದೆ. ಈ ಸ್ವೀಟ್ ಸುದ್ದಿಗೆ ಯಶ್ ಮತ್ತು ರಾಧಿಕಾ ಅಭಿಮಾನಿಗಳು ದಿಲ್ ಕುಶ್ ಆಗಿದ್ದು, ಯಶ್ ಮತ್ತು ರಾಧಿಕಾರವರ ಮಗುವಿನ ಫೋಟೋ ಈಗಾಗಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಆದರೆ ಈ ಸಂಭ್ರಮದ ನಡುವಲ್ಲಿ ಬಿಗ್ ಬಾಸ್ ಪ್ರಥಮ್ ಕೂಡ ಸುದ್ದಿಯಾಗಿದ್ದಾರೆ.

ಪ್ರಥಮ್ ಸುದ್ದಿಯಾಗಿದ್ದು ಏಕೆ ?

ಒಳ್ಳೆ ಹುಡ್ಗ ಎಂದು ಕರೆಸಿಕೊಳ್ಳುವ ಪ್ರಥಮ್ ಆಗಾಗ ಸ್ಟಾರ್ ಗಳ ಬಳಿ ಹೋಗಿ ಅವರನ್ನು ಮಾತನಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಕಳೆದ ತಿಂಗಳು
ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್ ವೇಳೆ ತುಂಬುಗರ್ಭಿಣಿಯಾಗಿದ್ದ ರಾಧಿಕಾ ಪಂಡಿತ್​ರನ್ನು ಭೇಟಿಯಾಗಿದ್ದ ಪ್ರಥಮ್ ಅವರನ್ನು ಮಾತನಾಡಿಸಿ ಯಾವ ಮಗು ಜನಿಸುತ್ತದೆ ಎಂಬುದರ ಕುರಿತಾಗಿ ತಮ್ಮ ಐದು ಬೆರಳುಗಳಲ್ಲಿ ಒಂದು ಬೆರಳು ಮುಟ್ಟುವಂತೆ ರಾಧಿಕಾ ರವರಿಗೆ ಹೇಳಿದ್ದರು. ಆಗ ರಾಧಿಕಾ ಪಂಡಿತ್ ಪ್ರಥಮ್ ರವರ ಎರಡನೇ ಬೆರಳನ್ನು ಬೆರಳನ್ನು ಮುಟ್ಟಿದ್ದರು.

ಅಂದು ಪ್ರಥಮ್ ರವರ ಎರಡನೇ ಬೆರಳನ್ನು ರಾಧಿಕಾ ರವರು ಮುಟ್ಟಿದಾಗ ಪ್ರಥಮ್​ ಜ್ಯೂನಿಯರ್​ ರಾಧಿಕಾ ಪಂಡಿತ್ ಜನಿಸುತ್ತಾಳೆ ಎಂದು ಹೇಳಿದ್ದರು. ಮುಂದುವರೆದು ತಮಾಷೆ ಮಾಡಿ ಹೆಬ್ಬೆರಳು ಜ್ಯೂನಿಯರ್​ ಯಶ್​, ಮಧ್ಯದ ಬೆರಳು ಅವಳಿ-ಜವಳಿ, ಉಂಗುರದ ಬೆರಳು ಕ್ರಿಕೆಟ್​ ಟೀಂ ಹಾಗೂ ಕಿರುಬೆರಳು ಮುಟ್ಟಿದ್ದರೆ ಗಾಂಧಾರಿಯಂತೆ ನೂರಾ ಒಂದು ಮಕ್ಕಳಾಗುತ್ತಿದ್ದವು ಎಂದಿದ್ದರು. ಪ್ರಥಮ್ ರವರ ತಮಾಷೆ ಮಾತಿಗೆ ರಾಧಿಕ್ ಪಂಡಿತ್ ರವರು ನಗುತ್ತಲೇ ಥ್ಯಾಂಕ್ಸ್ ಹೇಳಿದ್ದರು.

ಆದರೆ ಈಗ ಕಾಕತಾಳೀಯವೆಂಬಂತೆ ನಿನ್ನೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳಿಗೆ ಹೆಣ್ಣು ಮಗುವಾಗಿದ್ದು ಪ್ರಥಮ್ ರವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

\

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top