fbpx
ಸಮಾಚಾರ

ವಿಷ್ಣು ಕುಟುಂಬ ಮತ್ತು ಅಭಿಮಾನಿಗಳ ವಿರುದ್ಧ ಕಿಡಿಕಾರಿದ ನಿರ್ಮಾಪಕ ಸಾ.ರಾ ಗೋವಿಂದ್

ಕಳೆದ 9 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ವಿಷ್ಣು ಸ್ಮಾರಕ ವಿಚಾರ, ಈಗ ಮತ್ತೆ ತಲೆಯೆತ್ತಿ ನಿಂತಿದೆ . ಈ ಬಾರಿ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಸಾಂಗವಾಗಿ ನೆರವೇರಲೇಬೇಕೆಂದು ವಿಷ್ಣು ಕುಟುಂಬ ಮತ್ತು ಅಭಿಮಾನಿಗಳು ಪಣತೊಟ್ಟಂತಿದೆ.ವಿಷ್ಣು ಸ್ಮಾರಕದ ವಿಚಾರದಲ್ಲಿ ಸರ್ಕಾರ ನಿಲರ್ಕ್ಷ್ಯ ತೋರುತ್ತಿದೆ ಎಂದು ವಿಷ್ಣು ಕುಟುಂಬ ಮತ್ತು ವಿಷ್ಣು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಕರ್ನಾಟಕದ ಎಲ್ಲೆಡೆ ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದ ಬಗ್ಗೆಯೇ ಮಾತಾಗುತ್ತಿದೆ.ಹೇಗಾದರೂ ಈ ಗೊಂದಲ ಬಗೆಹರಿಸಬೇಕಾದ ಸಂದಿಗ್ನತೆ ಸರಕಾರಕ್ಕೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಯಾವ ನಿಲುವನ್ನು ತಾಳುತ್ತದೋ ಕಾದು ನೋಡಬೇಕಿದೆ.

ಅಂಬಿ ನಿಧನದ ನಂತರ ವಿಷ್ಣು ಸ್ಮಾರಕ ಚರ್ಚೆ ಮತ್ತಷ್ಟು ಸ್ವರೂಪ ಪಡೆದ್ದಿದ್ದು ವಿಷ್ಣು ಸ್ಮಾರಕ ವಿಚಾರದಲ್ಲಿ ಈ ಪರಿಯ ನಿರ್ಲಕ್ಷ್ಯವೇಕೆ ಎಂಬ ಮಾತುಗಳು ಕೇಳಿ ಬರುತ್ತಿವೇ. ಈ ಬಗ್ಗೆ ಮಾತನಾಡಿದ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ನಿರ್ಮಾಪಕ ಸಾರ ಗೋವಿಂದು “ಎಲ್ಲಿ ಸ್ಮಾರಕ ನಿರ್ಮಾಣವಾಗಬೇಕು ಎಂಬುದನ್ನು ಮೊದಲು ವಿಷ್ಣು ಕುಟುಂಬ ಮತ್ತು ಅಭಿಮಾನಿಗಳು ಕೂತು ಚರ್ಚಿಸಬೇಕು. ಅಭಿಮಾನಿಗಳಿಗೆ ಅಭಿಮಾನ್ ಸ್ಟುಡಿಯೋ ದಲ್ಲಿ ಸ್ಮಾರಕವಾಗಲಿ ಎಂಬ ಇಂಗಿತ ಇದ್ದು, ಭಾರತೀ ವಿಷ್ಣುವರ್ಧನ್ ಮೇಡಂರವರಿಗೆ ಮೈಸೊರಿನಲ್ಲಿ ಸ್ಮಾರಕ ಆಗಬೇಕೆಂಬ ಯೋಚನೆ ಇದೆ. ಇದರಿಂದಾಗಿ ಗೊಂದಲ ಏರ್ಪಟ್ಟಿದೆ. ಇಲ್ಲಿ ಯಾರಾದರೂ ಒಬ್ಬರು ಸೋಲಲೇ ಬೇಕು. ಒಮ್ಮತದ ನಿರ್ಧಾರದವಾದ ಮೇಲೆ ಪರಿಹಾರಕ್ಕಾಗಿ ಸಿಎಂ ಬಳಿ ಹೋಗಬೇಕು.”

“ಮೊದಲು ನಿಮ್ಮಲ್ಲಿರುವ ಗೊಂದಲ ಬಗೆಹರಿಸಿಕೊಳ್ಳಿ, ನಂತರ ಸ್ಮಾರಕ ಎಲ್ಲಿ ಆಗಬೇಕು ಎಂದು ನಿರ್ಧರಿಸಿ, ನಿಮ್ಮಲ್ಲೆ ಗೊಂದಲ ಇಟ್ಟುಕೊಂಡು ಬೇರೆಯವರನ್ನು ದೂಷಿಸಬೇಡಿ. ಮೊದಲು ಅಭಿಮಾನಿಗಳು ಮತ್ತು ಕುಟುಂಬ ಕೂತು ಮಾತನಾಡಿ ಒಮ್ಮತಕ್ಕೆ ಬನ್ನಿ” ಎಂದು ಪರೋಕ್ಷವಾಗಿ ವಿಷ್ಣು ಕುಟುಂಬ ಮತ್ತು ಅಭಿಮಾನಿಗಳ ವಿರುದ್ಧ ಸಾ.ರಾ ಗೋವಿಂದ್ ಕಿಡಿಕಾರಿದ್ದಾರೆ.

ಮಾತು ಮುಂದುವರೆಸಿ ಮೈಸೂರಿನಲ್ಲಿ ಸ್ಮಾರಕ ಆಗಬೇಕೋ ಅಥವಾ ಬೆಂಗಳೂರಿನಲ್ಲಿ ಆಗಬೇಕೋ ಎಂಬುವ ವಿಚಾರ ಸದ್ಯಕ್ಕೆ ಚರ್ಚೆಯಲಿದ್ದು. ಬೆಂಗಳೂರಿನಲ್ಲೇ ಸ್ಮಾರಕ ನಿರ್ಮಾಣವಾಗಲಿ, ಬಾಲಕೃಷ್ಣ ರವರ ಮಕ್ಕಳಿಗೆ ಸದ್ಬುದ್ಧಿ ಬರಲಿ ಹಾಗೂ ಅವರು ಕೋರ್ಟ್ನಲ್ಲಿ ಅವರು ಹಾಕಿರುವ ದಾವೆಯನ್ನು ಹಿಂಪಡೆಯಲಿ ಎಂದು ಹೇಳುತ್ತಾ. ಎರೆಡೆರೆಡು ಕಡೆ ಸ್ಮಾರಕ ನಿರ್ಮಾಣ ಆಗಲಿ ಎನ್ನುವುದು ಸಮಂಜಸ ಅಲ್ಲ.. ಈಗಾಗಿ ಬೆಂಗಳೂರಿನಲ್ಲಿಯೇ ಸ್ಮಾರಕ ನಿರ್ಮಾಣವಾದರೆ ಒಳ್ಳೆಯದು ಎಂದು ಸಾ. ರಾ ಗೋವಿಂದ್ ಹೇಳಿಕೆ ನೀಡಿದ್ದಾರೆ.

ಸಾ.ರಾ ಗೋವಿಂದ್ ರವರ ಹೇಳಿಕೆಗೆ ವಿಷ್ಣು ಅಭಿಮಾನಿಗಳು ಗರಂ ಆಗಿದ್ದು, “ಎರಡಲ್ಲಾ ಕರ್ನಾಟಕದ ತುಂಬವೂ ವಿಷ್ಣು ಸ್ಮಾರಕವನ್ನು ನಿರ್ಮಿಸಿದರೆ ನಿಮಗೇನು ತೊಂದರೆ? ಎಂದು ಸಾರ ಗೋವಿಂದು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top