ದೇವರು

ಕಾಶಿಗೆ ಹೋದಾಗ ಏನಾದರೂ ಇಷ್ಟವಾದದ್ದನ್ನ ಅಲ್ಲಿಯೇ ಬಿಟ್ಟು ಬರಬೇಕು ಅಂತಾರೆ ಯಾಕೆ ಗೊತ್ತಾ ?

ಕಾಶಿಗೆ ಹೋದಾಗ ಇಷ್ಟವಾದದ್ದನ್ನು ಏನಾದರೂ ಅಲ್ಲಿಯೇ ಬಿಟ್ಟು ಬರಬೇಕು ಹೀಗೆ ಮಾಡಿದರೆ ತುಂಬಾ ಒಳ್ಳೇದು ಎಂದು ಹಿರಿಯರು ಹಾಗು ಪಂಡಿತರು ಹೇಳುತ್ತಿರುತ್ತಾರೆ ಆದರೆ ಇದರ ಹಿಂದಿರುವ ನಿಜವಾದ ಕಾರಣ ಏನು ಎಂದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ .ಮನಸ್ಸು , ಪಂಚೇಂದ್ರಿಗಳು ,ಈ ದೇಹ ಸಕಲವೂ ದೇವರು ಕೊಟ್ಟದ್ದೇ , ಹೀಗಿರುವಾಗ ಮನುಷ್ಯನು ದೇವರ ಕಾರ್ಯಗಳನ್ನು , ಪೂಜೆಗಳನ್ನು ,ಇತರರಿಗೆ ಒಳ್ಳೆಯ ಕೆಲಸಗಳನ್ನೇ ಮಾಡಬೇಕು .ಆಡುವ ನಾಲ್ಕು ಮಾತುಗಳಲ್ಲಿ ಒಂದು ಪದ ದೇವರ ನಾಮವಿರಬೇಕು ಎಂದು ಹೇಳುತ್ತಿದ್ದರು, ಕಣ್ಣುಗಳು ದೇವರ ಧ್ಯಾನವನ್ನು ಮಾಡಬೇಕು , ಕಿವಿ ಗಳು ದೇವರ ಕಥೆ ಇತ್ಯಾದಿಗಳನ್ನು ಕೇಳಬೇಕು , ಆಡುವ ಮಾತು ಹಿತವಾಗಿರಬೇಕು , ನಾಲಿಗೆ ಶುದ್ದವಾಗಿರಬೇಕು , ನಾಸಿಕ ದೇವರ ಪಾದದ ಬಳಿಯಿರುವ ತುಳಸಿಯ ಗಂಧವನ್ನು ಸವಿಯಬೇಕು ಎನ್ನುತ್ತಿದ್ದರು ಹಿರಿಯರು ಆದರೆ ಈಗ ಯಾರಿಗೆ ಇದರ ತಲೆ ಬಿಸಿ ಇದೆ ಅಲ್ಲವೇ ?

 

 

 

ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಗಾಗಿ ಭಗವಂತನ ಧಾನ್ಯವನ್ನು ಮರೆತಿದ್ದೇವೆ , ಹೀಗೆ ಮಾಡುತ್ತಾ ಹೋದರೆ ನಮ್ಮ ಇಷ್ಟಗಳೇ ಕಷ್ಟಗಳಾಗಿ ಮಾರ್ಪಾಡಾಗುತ್ತದೆ ಉದಾಹರಣೆಗೆ : ಹೆಚ್ಚು ತಿಂದರೆ ಅಜೀರ್ಣ ಸಮಸ್ಯೆಯಿಂದ ಬಳಲಬೇಕಾಗುತ್ತದೆ , ಇನ್ನು ಹೆಣ್ಣಿನ ಮೋಹ ಹೆಚ್ಚಾದರೆ ವಿವಿಧ ರೀತಿಯ ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ .

 

 

 

ಭಗವಂತನನನ್ನ ಬಿಟ್ಟು ಇಷ್ಟಗಳ ಹಿಂದೆ ಹೋದರೆ ಪಡಬಾರದ ಕಷ್ಟಗಳನ್ನು ಪಡಬೇಕಾಗುತ್ತದೆ , ಇದೆ ಕಾರಣದಿಂದಲೇ ನಮಗೆ ಬಹಳ ಇಷ್ಟದ ಕೆಲವು ವಸ್ತುಗಳನ್ನು ಬಿಟ್ಟುಬಿಟ್ಟರೆ ಮನಸ್ಸು ,ಶರೀರ ,ಬುದ್ಧಿ ಪ್ರಸನ್ನತೆಯಿಂದ ಕೂಡಿರುತ್ತದೆ .ಎಲ್ಲ ಆಸೆಗಳನ್ನು ಒಟ್ಟಿಗೆ ಬಿಡಲು ಸಾಧ್ಯವಾಗುವುದಿಲ್ಲ , ಆದ್ದರಿಂದಲೇ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಒಂದೊಂದು ಆಸೆಗಳನ್ನು ಬಿಡುತ್ತಾರೆ ,ಕಾಶಿಯಲ್ಲಿ ಸ್ವಲ್ಪ , ಗಯಾದಲ್ಲಿ ಸ್ವಲ್ಪ ,ಪ್ರಯಾಗದಲ್ಲಿ ಸ್ವಲ್ಪ , ಗಂಗೆಯಲ್ಲಿ ಸ್ವಲ್ಪ ಆಸೆಗಳನ್ನು ಬಿಡುತ್ತಾರೆ .ಕೋರಿಕೆಗಳಿಗೆ ದಾಸನಾಗದೇ ಮೋಕ್ಷವನ್ನು ಪಡೆದುಕೋ ಎಂಬುದು ಇದರ ಪರಮಾರ್ಥ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top