ಮನೋರಂಜನೆ

ಮತ್ತೆ ಮುಂದಕ್ಕೆ ಹೋಯ್ತು ಶಿವಣ್ಣನ ಕವಚ- ಈ ವರ್ಷ ರಿಲೀಸ್ ಆಗೋದು ಡೌಟ್?

‘ದಿ ವಿಲನ್’ ಸಿನಿಮಾ ಬಳಿಕ ಶಿವಣ್ಣನ ಮತ್ತೊಂದು ಚಿತ್ರ ಯಾವಾಗ ಥಿಯೇಟರ್​ಗೆ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದರು.. ಇದೀಗ ಅಭಿಮಾನಿಗಳ ಕಾತರಕ್ಕೆ ಉತ್ತರ ‘ಕವಚ’.. ಹೌದು ಶಿವಣ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕವಚ’ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು ಈಗಾಗಲೇ ಸೆನ್ಸಾರ್ ಅನ್ನು ಕೂಡ ಮುಗಿಸಿಕೊಂಡಿದೆ.. ಆದರೆ ಕಾರಣಾಂತರಗಳಿಂದ ಚಿತ್ರ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.

ಇದಕ್ಕೂ ಮುನ್ನ ಚಿತ್ರವು ಡಿಸೆಂಬರ್ 07ರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು , ನಂತರ ಮುಂದಕ್ಕೆ ಹೋಗಿ ಡಿಸೆಂಬರ್ 28ಕ್ಕೆ ತೆರೆಕಾಣಲಿದೆ ಎನ್ನಲಾಗಿತ್ತು ಆದರೀಗ ಈ ದಿನಾಂಕದಂದೂ ಕೂಡ ಕವಚ ‘ರಿಲೀಸ್’ ಆಗುತ್ತಿಲ್ಲ.. ಹೌದು ಕವಚ ಸಿನಿಮಾ ಮತ್ತೊಮ್ಮೆ ಮುಂದಕ್ಕೆ ಹೋಗಿದ್ದು ಸದ್ಯಕ್ಕೆ ‘ಕವಚ’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಅಲ್ಲದೆ ಈ ವರ್ಷ ಸಿನಿಮಾ ಬರುವುದು ಅನುಮಾನ ಎನ್ನಲಾಗುತ್ತಿದೆ.

ಸೆನ್ಸಾರ್ ಮಂಡಳಿಯಿಂದ ಕವಚ ಚಿತ್ರಕ್ಕೆ U/A ಪ್ರಮಾಣ ಪತ್ರ ಸಿಕ್ಕಿದ್ದು ಫ್ಯಾಮಿಲಿ ಸಮೇತ ಕೂತು ನೋಡುವ ಸಿನಿಮಾ ಇದಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಒಂದು ರೀತಿಯ ಕುತೂಹಲ ಮೂಡಿಸಿರುವ ಕವಚ ಸಿನಿಮಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಅಂದಹಾಗೆ ‘ಕವಚ’ ಸಿನಿಮಾ ಮಲೆಯಾಳಂನ ಸೂಪರ್ ಹಿಟ್ ‘ಒಪ್ಪಮ್’ ಚಿತ್ರದ ರಿಮೇಕ್ ಆಗಿದ್ದು ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆಯಂತೆ. ಇಶಾ ಕೊಪ್ಪಿಕರ್, ರವಿ ಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಶ್ರೀವಾತ್ಸವ್ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಸಿನೆಮಾಗೆ ಇದೆ. ಶಿವಣ್ಣ ಅವರು ಇಷ್ಟೂ ದಿನ ನಟಿಸಿದ ಎಲ್ಲಾ ಸಿನೆಮದಲ್ಲೂ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಕವಚ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡು ಹೇಗೆ ಮಿಂಚಲಿದ್ದಾರೆ ಕಾಡು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top