fbpx
ಭವಿಷ್ಯ

ಈ ನಾಲ್ಕು ರಾಶಿಯವರಿಗೆ ಪ್ರೇಮ ವಿವಾಹ ಕಂಟಕವಾಗಿ ಪರಿಣಮಿಸುತ್ತದೆ , ಇದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನಿದೆ ಬನ್ನಿ ತಿಳಿಯೋಣ

ಈ ನಾಲ್ಕು ರಾಶಿಯವರಿಗೆ ಪ್ರೇಮ ವಿವಾಹ ಕಂಟಕವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹ ಅದರಲ್ಲೂ ಅಂತರ ಜಾತಿಯ ವಿವಾಹಗಳನ್ನು ಸಾಮಾನ್ಯವಾಗಿ ನಾವು ನೋಡುತ್ತೇವೆ ಆದರೆ ನೂರಕ್ಕೆ ಮೂವತ್ತು ಪ್ರತಿಶತ ತಂದೆ ತಾಯಿಯರು ಪ್ರೇಮ ವಿವಾಹಕ್ಕೆ ಒಪ್ಪಿಗೆ ಸೂಚಿಸುತ್ತಾರೆ , ಇನ್ನು ಎಪ್ಪತ್ತು ಪ್ರತಿಶತ ತಂದೆ ತಾಯಿಯರು ಪ್ರೇಮ ವಿವಾಹಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ .ಪ್ರೇಮ ವಿವಾಹವನ್ನು ನಿರಾಕರಿಸುತ್ತಾರೆ.

 

 

 

ಇನ್ನೂ ಮಕ್ಕಳ ವಿಷಯಕ್ಕೆ ಬಂದರೆ ಕೆಲವರು ಮೃದು ಸ್ವಭಾವದವರಾಗಿರುತ್ತಾರೆ, ಇನ್ನು ಕೆಲವರು ತುಂಬಾ ಒರಟು ಸ್ವಭಾವದವರು ಆಗಿರುತ್ತಾರೆ. ಯಾಕೆ ಹೀಗೆ ? ಎಂದರೆ ಅದು ಅವರ ರಾಶಿ ಮತ್ತು ನಕ್ಷತ್ರಗಳ ಪ್ರಭಾವವಾಗಿರುತ್ತದೆ.

ಮೇಷ ರಾಶಿ:ಮೇಷ ರಾಶಿಯ ಅಧಿಪತಿ ಕುಜನಾಗಿದ್ದು .ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ, ಮತ್ತು ಕೃತ್ತಿಕಾ ನಕ್ಷತ್ರ ಒಂದನೇ ಪಾದ ಮೇಷ ರಾಶಿಗೆ ಬರುತ್ತವೆ . ಈ ಮೂರು ನಕ್ಷತ್ರಗಳು ಸಹ ಒಂದೊಂದು ರೀತಿಯ ವಿಬ್ಬಿನ್ನ ಸ್ವಭಾವನ್ನು ಆ ನಕ್ಷತ್ರದವರಲ್ಲಿ ಮೂಡಿಸುತ್ತವೆ .ಅಶ್ವಿನಿ ನಕ್ಷತ್ರ ತಟಸ್ಥವಾಗಿರುತ್ತದೆ , ಆದರೆ ಭರಣಿ ನಕ್ಷತ್ರದವರು ತುಂಬಾ ಜೋರಾಗಿರುತ್ತಾರೆ. ಕೃತ್ತಿಕಾ ನಕ್ಷತ್ರ ಒಂದನೇ ಪಾದದವರು ಸ್ವಲ್ಪ ಮೃದು ಸ್ವಭಾವದವರಾಗಿರುತ್ತಾರೆ.ಭರಣಿ ನಕ್ಷತ್ರದವರಿಗೆ ಧೈರ್ಯ ಹೆಚ್ಚು- ಇನ್ನೂ ಭರಣಿ ನಕ್ಷತ್ರದವರು ಯಾರನ್ನಾದರೂ ಪ್ರೀತಿಸಿದ್ದರೆ, ನೀವು ಬಂದರೆಷ್ಟು, ಬಿಟ್ಟರೆಷ್ಟು ನಾನು ಮದುವೆ ಆಗುವುದೇ ಎಂದು ಪ್ರೇಮ ವಿವಾಹವಾಗಿ ಬಿಡುತ್ತಾರೆ . ನಾವು ಇಬ್ಬರೂ ಒಪ್ಪಿಕೊಂಡಿದ್ದೇವೆ. ಅಷ್ಟು ಸಾಕು ನಾವು ಒಂದು ದೇವಸ್ಥಾನದಲ್ಲಿ ಮದುವೆಯಾಗುತ್ತೇವೆ ಎನ್ನುವ ಧೈರ್ಯ ಅವರಿಗಿರುತ್ತದೆ.ಅದರೆ ಕೃತಿಕಾ ನಕ್ಷತ್ರ ಓಂದನೆ ಪಾದ ,ಅಶ್ವಿನಿ ನಕ್ಷತ್ರದವರಾದರೆ ಭಯದಿಂದ ತುಂಬಾ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಾರೆ.ತಂದೆ ತಾಯಂದರಿಗೆ ಇದೊಂದು ಸೂಚನೆ- ನಿಮ್ಮ ಮಕ್ಕಳ ನಕ್ಷತ್ರ ಅಥವಾ ರಾಶಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಮೇಷ ರಾಶಿ.

ಕನ್ಯಾ ರಾಶಿ, ಮಕರ ರಾಶಿ ಮತ್ತು ವೃಷಭ ರಾಶಿ:ಈ ರಾಶಿಯವರು ಪ್ರೇಮ ವಿವಾಹ ಮುರಿದು ಬೀಳುವ ಸಾಧ್ಯತೆಗಳು ಸಹ ಇರುತ್ತವೆ .ಪ್ರೇಮ ವಿವಾಹ ಈ ನಾಲ್ಕು ರಾಶಿಯವರಿಗೆ ಕಂಟಕವಾಗುತ್ತದೆ.ಪ್ರೇಮ ವಿವಾಹಕ್ಕೆ ಪ್ರೋತ್ಸಾಹಿಸುವ ಗ್ರಹಗಳು.ರಾಹು, ಶುಕ್ರ, ಚಂದ್ರ, ಪ್ರೇಮ ವಿವಾಹಕ್ಕೆ ಪ್ರೋತ್ಸಾಹಿಸುವ ಗ್ರಹಗಳಾಗಿವೆ.ರಾಹು ದೆಸೆ ನಡೆಯುವಾಗ ಸಾಮಾನ್ಯವಾಗಿ ಪ್ರೇಮ ವಿವಾಹವಾಗಿಬಿಡುತ್ತದೆ, ಆದರೆ ಇದು ಮುಂದೆ ಅನೇಕ ತೊಂದರೆಗಳನ್ನು ತಂದೊಡ್ಡುತ್ತದೆ.ರಾಹು ಉಚ್ಚ ಸ್ಥಾನದಲ್ಲಿದ್ದು, ಏಳನೇ ಸ್ಥಾನದಲ್ಲಿ ಕುಜನ ಜೊತೆ ರಾಹು ಸ್ಥಿತನಿದ್ದರೆ ಅವರಿಗೆ ಪ್ರೇಮ ವಿವಾಹವಾಗುತ್ತದೆ ಎಂದು ನಿಖರವಾಗಿ ಹೇಳಬಹುದು.ಕುಜನ ಜೊತೆ ಶುಕ್ರ ಕಳತ್ರ ಕಾರಕನಾಗಿದ್ದರೆ ದ್ವಿಕಳತ್ರ ಯೋಗ ಉಂಟಾಗಿ ಮದುವೆ ಮುರಿದು ಬೀಳುವ ಸಾಧ್ಯತೆಗಳಿರುತ್ತವೆ.

ಉದಾಹರಣೆಗೆ: ಕನ್ಯಾ ರಾಶಿಯ ಅಧಿಪತಿ ಬುಧನಾಗಿದ್ದಾನೆ, ಬುಧನೂ ಸಹ ಸಪ್ತಮ ಭಾವದಲ್ಲಿ ಧನಸ್ಸು ರಾಶಿಯಲ್ಲಿ ಇದ್ದರೆ ಜೊತೆಗೆ ರಾಹು, ಕುಜ ಸ್ಥಿತರಿದ್ದರೆ, ಪ್ರೇಮ ವಿವಾಹವಾಗುವುದಿಲ್ಲ. ಎಷ್ಟೇ ಕಷ್ಟ ಪಟ್ಟರೂ ಸಹ ಆಗುವುದಿಲ್ಲ. ಇಷ್ಟ ಪಟ್ಟರೂ ಸಹ ಆಗುವುದಿಲ್ಲ .ಸಪ್ತಮಾಧಿಪತಿ ಗುರು ಏನಾದರೂ ಮಿಥುನ ರಾಶಿಯಲ್ಲಿ ಇರುವುದಾಗಲಿ, ಅಥವಾ ಧನಸ್ಸು ರಾಶಿಯಲ್ಲಿ ಶತ್ರು ಸ್ಥಾನದಲ್ಲಿ ಇದ್ದರೆ, ಮಿಥುನ ಲಗ್ನದಲ್ಲಿ ಬುಧ ಏನಾದರೂ ಏಳನೇ ಮನೆಯಲ್ಲಿ ಸ್ಥಿತನಿದ್ದಾನೆ ಎಂದರೆ ಅವರಿಗೆ ಪ್ರೇಮ ವಿವಾಹ ಖಂಡಿತ.ರಾಹು ನೀಚ ಸ್ಥಾನದಲ್ಲಿದ್ದರೆ, ಬುಧ ಏನಾದರೂ ಪಾಪ ಗ್ರಹಗಳ ಜೊತೆಯಲ್ಲಿ ನೀಚ ಸ್ಥಾನದಲ್ಲಿದ್ದರೆ, ಅಲ್ಲಿ ಮದುವೆ ಮುರಿದು ಬೀಳುತ್ತವೆ. ಆಗ ನ್ಯೂನ್ಯತೆಗಳು ಉಂಟಾಗುತ್ತವೆ. ಆದ್ದರಿಂದ ಮದುವೆ ಎಂದರೆ ಎಷ್ಟೋ ಜನ ಇಷ್ಟಪಡುವುದಿಲ್ಲ. ಆಆದ್ದರಿಂದ ಜಾತಕ ಪರಿಶೀಲನೆಯನ್ನು ಅವಶ್ಯವಾಗಿ ಮಾಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top