fbpx
ಸಿನಿಮಾ

ಚಿಕ್ಕ ವಯಸ್ಸಿಗೆ ತಂದೆ ತಾಯಿ ಡೈವೋರ್ಸ್ ಆದ ಮೇಲೆ ಬಹಳ ಕಷ್ಟದಿಂದ ಜೀವನ ಸಾಗಿಸಿ ಈಗಲೂ ಒಂಟಿಯಾಗಿ ಬದುಕುತ್ತಿರುವ ನಟಿ ನಗ್ಮಾ ಬದುಕು ಕರುಣಾಜನಕ

ನಟಿ ನಗ್ಮಾರವರ ಬಗ್ಗೆ ಸ್ವಲ್ಪ ಮಾಹಿತಿ :ನಗ್ಮಾ ರವರ ನಿಜವಾದ ಹೆಸರು  ನಂದಿತಾ ಅರವಿಂದ್ ಮೊರಾರ್ಜಿ ,ಇವರು ಹುಟ್ಟಿದು 25 ಡಿಸೆಂಬರ್ 1974 ರಂದು ಮುಂಬೈಯಲ್ಲಿ .ಇವರು ಕನ್ನಡ ಸೇರಿದಂತೆ  9 ಭಾಷೆಗಳಲ್ಲಿ  ನಟಿಸಿದ್ದಾರೆ , ಇವರ ತಂದೆ ಅರವಿಂದ್ ಪ್ರತಾಪಸಿಂಹ ಮೊರಾರ್ಜಿ,ವ್ಯಾಪಾರಿ ತಾಯಿ  ಸೀಮಾ ಕೆಲವು ವರ್ಷಗಳ ನಂತರ ಇವರ ತಂದೆ ತಾಯಿ ವಿಚ್ಛೇದನ ತೆಗೆದುಕೊಂಡು ಬೇರೆ  ಮದುವೆ ಮಾಡಿಕೊಳ್ಳುತ್ತಾರೆ .

 

 

 

ಈ ಸಮಯದಲ್ಲಿ ತುಂಬಾ ಚಿಕ್ಕವರಾಗಿದ್ದ ನಗ್ಮಾ ತುಂಬಾ ಕಷ್ಟಪಟ್ಟಿದ್ದಾರೆ ಮತ್ತು ಆ ಸಮಯದಲ್ಲಿ ಯೇಸುವಿನ ಮೇಲೆ ಇವರ ನಂಬಿಕೆ ಮತ್ತು ಭಕ್ತಿ ಶುರುವಾಯಿತಂತೆ ,ಅವರ ಅಪ್ಪನಿಗೆ ಮರು ಮದುವೆಯಾದ ಮೇಲೆ ಹುಟ್ಟಿದ ಮಕ್ಕಳು  ಧನರಾಜ್ ಮತ್ತು  ಯುವರಾಜ್,ಅವರ ತಾಯಿಗೆ ಹುಟ್ಟಿದ ಮಕ್ಕಳು  ರೋಶಿನಿ, ಜ್ಯೋತಿಕಾ ಮತ್ತು ತರುಣ್ ಪಾರ್ಸಿ.ಡಿಸೆಂಬರ್ 31 ,2005 ರಂದು ನಗ್ಮಾರವರ ತಂದೆ ಮರಣಹೊಂದುತ್ತಾರೆ ಅಲ್ಲಿಯವರೆಗೂ ನಗ್ಮಾರವರ ತಂದೆ ಮತ್ತು ಇವರ ಸಂಬಂಧ ತುಂಬಾ ಆತ್ಮೀಯವಾಗಿರುತ್ತದೆ .
ನಗ್ಮಾರವರ ತಾಯಿ ಇವರು ಸಿನಿಮಾಗಳಲ್ಲಿ ಮಾಡಲು ತುಂಬಾ ಪ್ರೋತ್ಸಾಹ ಮಾಡುತಿದ್ದರಂತೆ ,ಶೂಟಿಂಗ್ ಸಮಯದಲ್ಲಿ ಇವರ ಜೊತೆ ಹೋಗುತ್ತಿದ್ದರಂತೆ .ವ್ಯಾಪಾರಿ ಮತ್ತು ನಿರ್ಮಾಪಕರಾದ ಕಾರಣ ನಗ್ಮಾರವರ ತಂದೆ ಹೋದಮೇಲೆ ಮುಂಬೈಯಲ್ಲಿ ಒಂದು ನಗ್ಮಾ’ಸ್ ಎನ್ನುವ ಬಟ್ಟೆ ಅಂಗಡಿ ತೆರೆಯುತ್ತಾರೆ ನಂತರ ಇವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ .

ನಗ್ಮಾ ರವರು 1990 ರಲ್ಲಿ ತಮ್ಮ ಸಿನಿ ಜೀವನ ಶುರು ಮಾಡಿದರು ,ಅವರ ತಂದೆ ನಿರ್ಮಾಪಕರಾಗಿದ್ದ ಕಾರಣ ಇವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದವು .ಇವರು 100 ಕ್ಕೂ ಅನೇಕ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ  ಅವರು ಮಾಡಿರುವ  ಕನ್ನಡ ಚಿತ್ರಗಳು ಕುರುಬನ ರಾಣಿ,ರವಿಮಾಮ,ಹೃದಯವಂತ ಇನ್ನೂ ಹಲವು .ಇನ್ನೂ ಇವರಿಗೆ ಮದುವೆ ಆಗಿಲ್ಲ .ಇವರು ಈಗ  ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಲ್ಲಿ ಕೆಲಸ ಮಾಡುತ್ತಾ ಬ್ಯುಸಿ ಆಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top