ಸಮಾಚಾರ

ಯಶ್- ರಾಧಿಕಾಗೆ ವಿಶೇಷ ಶುಭಾಶಯ ಕೋರಿದ ಸುದೀಪ್ ಪತ್ನಿ ಪ್ರಿಯಾ.

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲಾ ಈಗ ಅಪ್ಪ ಅಮ್ಮ ಆಗಿದ್ದಾರೆ. ರಾಧಿಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಕುಟುಬದಲ್ಲಿ ಸಂತಸ ಮನೆ ಮಾಡಿದೆ. ಭಾನುವಾರ ಬೆಳಗ್ಗೆ 6.10 ರ ವೇಳೆಗೆ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಅವರು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ಅಭಿಮಾನಿಗಳೂ ‘ಮಹಾಲಕ್ಷ್ಮಿ’ಯ ಆಗಮನವನ್ನು ಸಂಭ್ರಮಮಿಸುತ್ತಿದ್ದಾರೆ.

ಈ ವಿಚಾರ ಇಡೀ ಚಿತ್ರರಂಗದಲ್ಲೇ ಸಂಭ್ರಮವನ್ನು ಉಂಟುಮಾಡಿದ್ದು ಎಲ್ಲಾ ಸೆಲೆಬ್ರೆಟಿಗಳು ಕೂಡ ಯಶ್ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ಅದೇ ರೀತಿ ಸುದೀಪ್​​ ಪತ್ನಿ ಪ್ರಿಯಾ ಸುದೀಪ್ ಅವ್ರು ಕೂಡ ಪೋಷಕರಾದ ಸ್ಟಾರ್ ದಂಪತಿಗಳಿಗೆ​​​ ಟ್ವಿಟ್ಟರ್​​ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.

“ತಂದೆ ತಾಯಿಯಾದ ಯಶ್ ಹಾಗೂ ರಾಧಿಕಾರಿಗೆ ನನ್ನ ಶುಭ ಹಾರೈಕೆ. ನಿಮ್ಮ ಪುಟ್ಟ ಮಗಳು ನಿಮ್ಮ ಜೀವನದ ಒಂದು ಸುಂದರ ಭಾಗ ಆಗಲಿದ್ದಾಳೆ. ನಿಮಗೆ ದೇವರ ಆಶೀರ್ವಾದ ಇರಲಿ” ಎಂದು ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವಿಟ್ಟರ್​​ನಲ್ಲಿ ಶುಭಾಶಯ ಕೋರಿದ್ದಾರೆ. ಇದರ ಜೊತೆಗೆ ಯಶ್ ಮತ್ತು ರಾಧಿಕಾ ಜೊತೆಗಿರುವ ತಮ್ಮ ಫೋಟೋವನ್ನು ಕೂಡ ಪ್ರಿಯಾ ಹಂಚಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top