ಸಮಾಚಾರ

ಅಂಬಿ ಸಾವಿಗೆ ಸಂತಾಪ ಸೂಚಿಸಿ ಮೋದಿಜಿ ಮಾಡಿದ ಟ್ವೀಟ್ ಗೆ ಧನ್ಯವಾದ ಕೋರಿದ ನಟಿ ಸುಮಲತಾ ಅಂಬರೀಶ್

ರೆಬೆಲ್ ಸ್ಟಾರ್ ಅಂಬರೀಶ್ ಕಾಲವಾದರೂ ಎಲ್ಲರ ಹೃದಯದಲ್ಲಿ ಶಾಶ್ವತ ನೆನಪನ್ನು ಬಿಟ್ಟು ಹೋಗಿದ್ದಾರೆ. ಕರ್ನಾಟಕ ಚಿತ್ರರಂಗಕ್ಕೆ ಹಾಗೂ ಕರ್ನಾಟಕದ ರಾಜಕೀಯಕ್ಕೆ ಡಾ. ಅಂಬರೀಶ್ ರವರು ಕೊಟ್ಟ ಕೊಡುಗೆ ಚಿರ ಕಾಲ ಸ್ಮರಣೀಯವೇ ಹೌದು. ಹೀಗಿರುವಾಗ ಅಂದು ಅಂಬಿಯ ಅಂತ್ಯ ಸಂಸ್ಕಾರವನು ಸಂಗಾವಾಗಿ ನೆರೆವೇರಿಸಕೊಟ್ಟ ಎಲ್ಲರಿಗೂ ಮತ್ತು ಅಂಬಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸುಮಲತ್ ಅಂಬರೀಶ್ ರವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಳೆದ ಬುಧವಾರ ನಡೆದ ಅಂಬಿ ನುಡಿ ನಮನ ಕಾರ್ಯಕ್ರಮದಲ್ಲಿ ಅಂಬರೀಶ್ ರವರ ಧರ್ಮಪತ್ನಿ ಸುಮಲತಾ ಮಾತನಾಡಿ ಅಂಬರೀಶ್ ರವರ ಅಂತ್ಯ ಕ್ರಿಯೆಗೆ ಸಹಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಪೊಲೀಸ್ ಇಲಾಖೆ, ಭಾಗವಹಿಸಿದ ಗಣ್ಯರಿಗೆ, ಚಿತ್ರರಂಗದ ಸದಸ್ಯರಿಗೆ ಮುಖ್ಯವಾಗಿ ಅಭಿಮಾನಿಗಳಿಗೆ ಎಲ್ಲರಿಗು ಧನ್ಯವಾದಗಳನ್ನು ಅರ್ಪಿಸಿದರು.

ನಂತರ ಸುಮಲತಾ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಗೂ ಫೇಸ್ಬುಕ್ ಖಾತೆಯಲ್ಲಿ ಕೂಡ ಎಲ್ಲರಿಗು ಕೃತಜ್ಞತೆಗಳನ್ನು ಅರ್ಪಿಸಿದರು. ಮತ್ತು ಕೆಲವು ಗಣ್ಯರು ಅಂಬಿಯ ಅಗಲಿಕೆಯ ದಿನದಂದು ಮಾಡಿದ ಟ್ವೀಟ್ ಗಳನ್ನೂ ಸುಮಲತಾ ರವರು ರೀಟ್ವೀಟ್ ಮಾಡಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಅಂದು ಅಂಬಿ ಅಗಲಿಕೆಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಕೈ ಮುಗಿಯುವ ಎಮೋಜಿ ಹಾಕುವ ಮೂಲಕ ಮೋದಿಗೆ ನಮನ ಸಲ್ಲಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top