fbpx
ಸಮಾಚಾರ

“ಬಿಜೆಪಿ ಅಧಿಕಾರಕ್ಕೆ ಬಂದರೇ ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ” ಯೋಗಿ ಆದಿತ್ಯನಾಥ್.

ತಾವು ಆಡಳಿತ ನಡೆಸುತ್ತಿರುವ ಉತ್ತರಪ್ರದೇಶದಲ್ಲಿ ಒಂದರ ಹಿಂದೊಂದರಂತೆ ನಗರಗಳ ಮರುನಾಮಕರಣ ಮಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೀಗ ತೆಲಂಗಾಣದ ರಾಜಧಾನಿ ಮುತ್ತಿನ ನಗರಿ ಹೈದರಾಬಾದ್ ಹೆಸರು ಬದಲಾಯಿಸುವ ಮಾತನ್ನಾಡಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಾಗರವನ್ನಾಗಿ ಬದಲಾಯಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಯೋಗಿ ಆದಿತ್ಯನಾಥ್, ಮತದಾರರಿಗೆ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಮರುನಾಮಕಾರಣ ಮಾಡುವುದಾಗಿ ಘೋಷಿಸಿದರು.

“ಈ ಹಿಂದೆ ಹೈದರಾಬಾದ್ ನ ಹೆಸರು ಮೊದಲು ಭಾಗ್ಯನಗರ ಎಂದೇ ಇತ್ತು. 1590 ರಲ್ಲಿ ಖುಲಿ ಕುತುಬ್ ಶಾ ಎಂಬುವವನು ಭಾಗ್ಯನಗರದ ಹೆಸರನ್ನು ಹೈದರಾಬಾದ್ ಎಂದು ಬದಲಿಸಿದನು. ಈ ಸಮಯದಲ್ಲಿ ಎಷ್ಟೋ ಹಿಂದುಗಳ ಮೇಲೆ ದಾಳಿಯಾಯಿತು, ಎಷ್ಟೋ ದೇವಾಲಯಗಳು ಧ್ವಂಸವಾದವು. ಆದ್ದರಿಂದ ನಾವು ಆ ಹೆಸರನ್ನು ಮತ್ತೆ ಈ ನಗರಕ್ಕೆ ಇಡಲು ಬಯಸುತ್ತೇವೆ.. ಅಷ್ಟೇ ಅಲ್ಲ, ಸಿಕಂದರಾಬಾದಿನ ಹೆಸರನ್ನೂ ಕರೀಂನಗರ ಎಂದು ಬದಲಿಸುತ್ತೇವೆ. ಬಿಜೆಪಿಯನ್ನು ಗೆಲ್ಲಿಸಿ” ಎಂದು ಆದಿತ್ಯ ನಾಥ್ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top