fbpx
ಮನೋರಂಜನೆ

ರಾಜಮೌಳಿ ನಿರ್ದೇಶನದ #RRR ಸಿನಿಮಾದಲ್ಲಿ ನಟಿಸುವರ ಕಿಚ್ಚ ಸುದೀಪ್ ?

ಸ್ಟಾರ್ ಡೈರೆಕ್ಟರ್ ರಾಜಮೌಳಿ ಬಾಹುಬಲಿ ಸಿನಿಮಾ ನಂತರ ‘ ಆರ್ ಆರ್ ಆರ್ ‘ ಎಂಬ ಸಿನಿಮಾ ಮಾಡ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದ್ದು, ಭರ್ಜರಿ ಇಂದ ಸಾಗುತ್ತಿದೆ. ವಿಭಿನ್ನ ಟೈಟಲ್ ಇರುವ ಈ ಸಿನಿಮಾದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ. ಎನ್ ಟಿ ಆರ್ ಹಾಗೂ ರಾಮ್ ಚರಣ್ ಒಟ್ಟಾಗಿ ನಟಿಸ್ತಾದ್ದರೆ ಎಂಬ ವಿಷಯ ಈಗಾಗಲೇ ಸುದ್ದಿಯಾಗಿದ್ದು. ಈ ಚಿತ್ರದಲ್ಲಿನ ಒಂದು ಪಾತ್ರಕ್ಕೆ ರಾಜಮೌಳಿ ಹುಡುಕಾಟದಲ್ಲಿದ್ದಾರಂತೆ. ಹಾಗೂ ಈ ಪಾತ್ರಕ್ಕಾಗಿ ರಾಜಮೌಳಿ ಒಂದಷ್ಟು ಕಲಾವಿದರನ್ನ ಊಹಿಸಿಕೊಂಡಿದ್ದಾರಂತೆ . ಅದೇ ರೀತಿ ಬಾಲಿವುಡ್ ಸಿಂಗಂ ಅಜಯ್ ದೇವಗನ್​ ಆ ಪಾತ್ರದಲ್ಲಿ ನಟಿಸ್ತಾರೇ, ಈ ಬಗ್ಗೆ ಅಜಯ್ ದೇವ್​ಗನ್ ರನ್ನು ರಾಜ್ ಮೌಳಿ ಅವರು ಸಂಪರ್ಕಿಸಿದ್ದಾರೆ ಅನ್ನುವ ಮಾತುಗಳು ಬಿ-ಟೌನ್ ನಲ್ಲಿ ಕೇಳಿಬರುತ್ತಿದೆ.

ಅದರಂತೆ ಇತ್ತಿಚೆಗಷ್ಟೇ ‘ಆರ್ ಆರ್ ಆರ್’ ಚಿತ್ರದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿದ್ದಾರೆ ಅನ್ನೋ ಟಾಕ್ಸ್​ ಕೇಳಿ ಬರ್ತಿತ್ತು.. ಆದರೆ ಇದೀಗ ಇನ್ನೊಂದು ಹೆಸರು ಕೇಳಿ ಬಂದಿದ್ದು ಆ ಹೆಸರೇ ಕಿಚ್ಚ ಸುದೀಪ್. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದ್ದು . ಈಗಾಗಲೇ ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ನೆಗೆಟಿವ್​ ಶೇಡ್​ನಲ್ಲಿ ಕಿಚ್ಚ ಅಭಿನಯಿಸಿ ಎಲ್ಲರ ಮನಸೂರೆಗೊಂಡಿದ್ದರು ಹಾಗೂ ಬಾಹುಬಲಿ ದಿ ಬಿಗಿನಿಂಗ್ ಸಿನಿಮಾದಲ್ಲಿ ಅಸ್ಲಂ ಖಾನ್ ಅನ್ನೋ ಮುಸ್ಲಿಂ ದೊರೆ ಪಾತ್ರದಲ್ಲಿ ಕಿಚ್ಚ ಕ್ಲಿಕ್ ಆಗಿದ್ದರು ಆದ್ದರಿಂದ ಕಿಚ್ಚನಿಗೆ ಸ್ಟಾರ್ ಡೈರೆಕ್ಟರ್ ರಾಜಮೌಳಿ ಮತ್ತೆ ‘ ಆರ್ ಆರ್ ಆರ್ ‘ ಚಿತ್ರದಲ್ಲಿ ಅವಕಾಶ ಕೊಡಬಹುದು ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಸ್ಯಾಂಡಲ್ ವುಡ್ ನಿಂದ ಹಾಲಿವುಡ್ ವರೆಗೂ ಸೌಂಡ್ ಮಾಡಿರುವ ಕಿಚ್ಚನ ಅಭಿನಯಕ್ಕೆ ಎಂತವರೂ ಮಾರುಹೋಗಲೇಬೇಕು. ಈಗಿರುವಾಗ ಕಿಚ್ಚ ಸುದೀಪ್ ರನ್ನು ಸಿನಿಮಾದಲ್ಲಿ ಕ್ಯಾಸ್ಟ್ ಮಾಡಿದರೆ ಬೆಸ್ಟ್ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಆದರೆ ‘ ಆರ್ ಆರ್ ಆರ್ ‘ ಸಿನಿಮಾದಲ್ಲಿ ಸುದೀಪ್ ನಟಿಸೋದ್ರ ಬಗ್ಗೆ ರಾಜಮೌಳಿ ತಂಡದಿಂದಾಗಲೀ, ಸುದೀಪ್ ಬಳಗದಿಂದಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.ಮುಂದೆ ಈ ವಿಚಾರದಲ್ಲಿ ಯಾವ ರೀತಿಯ ಬೆಳವಣಿಗೆಗಳಾಗುತ್ತದೋ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top