fbpx
ಸಮಾಚಾರ

“ರಾಜ್, ಅಂಬಿಗೆ ಒಂದು ನ್ಯಾಯ ವಿಷ್ಣುವರ್ಧನ್‌ಗೆ ಒಂದು ನ್ಯಾಯಾವೇ?” ವಿಷ್ಣು ಅಳಿಯ ಅನಿರುಧ್ ಬೇಸರ.

ಡಾ.ವಿಷ್ಣುವರ್ಧನ್ ಅವರ ವಿಚಾರದಲ್ಲಿ ಹಿಂದಿನಿಂದಲೂ ಸರ್ಕಾರ ಮತ್ತು ಚಿತ್ರರಂಗ ತೋರುತ್ತಿರುವ ನಿರ್ಲಕ್ಷತೆ ಈಗ ಗುಟ್ಟಾಗಿ ಉಳಿದಿಲ್ಲ.. ಇದಕ್ಕೆ ದೊಡ್ಡ ನಿದರ್ಶನವೆಂದರೆ ಅಂಥಾ ಮಹಾನ್ ನಟ ನಮ್ಮಿಂದ ದೈಹಿಕವಾಗಿ ಮರೆಯಾಗಿ ಹತ್ತು ವರ್ಷವೇ ಕಳೆದಿದ್ದರೂ ನೆಟ್ಟಗೆ ಒಂದು ಸಮಾಧಿಯ ವ್ಯವಸ್ಥೆ ಮಾಡುವಲ್ಲಿ ಸರ್ಕಾರ ಮತ್ತು ಚಿತ್ರರಂಗ ಸಂಪೂರ್ಣ ವಿಫಲವಾಗಿವೆ. ಅತ್ತ ಅಂಬರೀಶ್ ಕಣ್ಮರೆಯಾಗುತ್ತಲೇ ಇತ್ತ ಮತ್ತೆ ವಿಷ್ಣು ಸ್ಮಾರಕದ ವಿಚಾರ ಹೊಗೆಯಾಡಲಾರಂಭಿಸಿದೆ.

ಸಾಹಸಸಿಂಹನ ಸ್ಮಾರಕ ವಿಚಾರವಾಗಿ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮತ್ತೊಮ್ಮೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವ ವಿಚಾರಕ್ಕೆ ಅನಿರುದ್ದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ ಮತ್ತು ಅಂಬಿ ಹೆಸರಿನಲ್ಲಿ ಫಿಲ್ಮ್ ಸಿಟಿ, ವಿಶ್ವವಿದ್ಯಾಲಯ ಮಾತುಕತೆಗಳು ನಡೆಯುತ್ತಿವೆ,. ನಮಗೂ ಅತೀವ ಸಂತೋಷ.ಆದರೆ ವಿಷ್ಣುವರ್ಧನ್ ಹೆಸರಿನಲ್ಲಿ ಅಂತಾ ಯೋಜನೆಗಳನ್ನ ಸರ್ಕಾರ ಏಕೆ ಕೈಗೆತ್ತುಕೊಳ್ಳುವುದಿಲ್ಲ? ಕನ್ನಡ ಚಿತ್ರರಂಗದಲ್ಲಿ ಮೂವರು ನಾಯಕರು ಹೆಸರು ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಆದ್ರೆ ಸ್ಮಾರಕ ವಿಚಾರದಲ್ಲಿ ವಿಷ್ಣುವರ್ಧನ್ ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

“ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಜೊತೆಗೆ ಹಿರಿಯ ನಟರಾದ ರಾಜ್ ಕುಮಾರ್, ಅಂಬರೀಷ್ ಹೆಸರಿನಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಲಾಗುವುದು ಎಂದು ಹೇಳುವ ಸರ್ಕಾರ, ವಿಷ್ಣುವರ್ಧನ್ ಹೆಸರಿನಲ್ಲಿ ಏಕೆ ಫಿಲ್ಮ್ ಇನ್ಸ್’ಟಿಟ್ಯೂಟ್ ಮಾಡುತ್ತೇನೆಂದು ಹೇಳುತ್ತಿಲ್ಲ.. ಕೇವಲ ಬೇರೆ ಇಬ್ಬರ ನಾಯಕರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಹಾಗಾದ್ರೆ ಅಪ್ಪಾಜಿ ಕನ್ನಡ ಚಲನಚಿತ್ರಕ್ಕೆ ಸೇವೆ ಸಲ್ಲಿಸಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಸುಮಾರು ವರ್ಷಗಳಿಂದ ವಿಷ್ಣುವರ್ಧನ್ ಹೆಸರಿನಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡುವುದಾಗಿ ಸರ್ಕಾರದ ಗಮನಕ್ಕೆ ತಂದರು ಏನೂ ಪ್ರಯೋಜನವಾಗಿಲ್ಲ. ಸರ್ಕಾರಕ್ಕೆ ನೀಲಿ ನಕ್ಷೆ ಹಾಗೂ ಬಜೆಟ್ ಬಗ್ಗೆಯೂ ಭಾರತಿ ವಿಷ್ಣುವರ್ಧನ್ ವರದಿ ನೀಡಿದ್ದಾರೆ. ಹೀಗಿದ್ದರೂ ಸರ್ಕಾರದಿಂದ ಮಾತ್ರ ಯಾವ ಕ್ರಮವೂ ಆಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ವಿಷ್ಣುವರ್ಧನ್ ಹೆಸರಿನಲ್ಲಿ ಜಾತಿಯನ್ನು ಹುಡುಕಬೇಡಿ:
ಇನ್ನು ವಿಷ್ಣುವರ್ಧನ್ ವಿಚಾರದಲ್ಲಿ ಜಾತಿ ತಾರತಮ್ಯ ತರಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅನಿರುಧ್ “ಕಲೆಯಲ್ಲಿ ಜಾತಿ ಹುಡುಕಬಾರದು. ನಮಗ್ಯಾವ ಜಾತಿಯೂ ಇಲ್ಲ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುತ್ತೇವೆ. ನಮ್ಮದು ವಸುಧೈವ ಕುಟುಂಬಕಂ ನಾವೆಲ್ಲರೂ ಒಂದು. ಹಾಗೇನಾದ್ರೂ ಅಪ್ಪಾಜಿ ಸ್ಮಾರಕ ವಿಚಾರದಲ್ಲಿ ಜಾತಿ ವಿಚಾರವಿದ್ದರೇ ಅದು ದುಃಖದ ವಿಚಾರ” ಅಂತಾ​ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top