ಭವಿಷ್ಯ

05 ಡಿಸೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೫ ಡಿಸೆಂಬರ್ ೨೦೧೮
ಸೂರ್ಯೋದಯ : ೦೭:೦೫
ಸೂರ್ಯಾಸ್ತ : ೧೭:೫೨
ಅಮಂತ ತಿಂಗಳು : ಕಾರ್ತಿಕ

ಪಕ್ಷ : ಕೃಷ್ಣ ಪಕ್ಷ
ತಿಥಿ : ತ್ರಯೋದಶೀ – ೧೨:೦೨ ವರೆಗೆ
ನಕ್ಷತ್ರ : ವಿಶಾಖ – ೨೭:೩೪+ ವರೆಗೆ
ಯೋಗ : ಅತಿಗಂಡ – ೨೨:೩೩ ವರೆಗೆ
ಸೂರ್ಯ ರಾಶಿ -ವೃಶ್ಚಿಕ

ಅಭಿಜಿತ್ ಮುಹುರ್ತ :ಯಾವುದೂ ಇಲ್ಲ
ಅಮೃತಕಾಲ : ೧೮:೩೪ – ೨೦:೧೨
ರಾಹು ಕಾಲ: ೧೨:೨೮ – ೧೩:೪೯
ಗುಳಿಕ ಕಾಲ: ೧೧:೦೮ – ೧೨:೨೮
ಯಮಗಂಡ:೦೮:೨೬ – ೦೯:೪೭

ಚಂಚಲತೆ ಸ್ವಭಾವವುಳ್ಳ ನೀವು ಯಾರೊಟ್ಟಿಗಾದರೂ ಮಾತಾಡಿದರೆ ಏನು ತಿಳಿದುಕೊಳ್ಳವರೋ ಎಂಬ ಸೂಕ್ಷ ಪ್ರವೃತ್ತಿಯವರು. ಹಾಗಾಗಿ ಜನರೇ ನಿಮ್ಮನ್ನು ನೋಯಿಸುವರು. ಅವರಿಗೆ ಪ್ರತ್ಯುತ್ತರ ಕೊಡಲು ಅಸಹಾಯಕರಾಗಿ ನೋವನ್ನು ಅನುಭವಿಸುವಿರಿ.

 

ನಿಮ್ಮ ಮೇಲೆ ನಿಜವಾದ ಅಂತಃಕರಣದಿಂದ ಮಿಡಿಯುವ ಜನರ ಭೇಟಿ ಆಗುವುದು. ಇದರಿಂದ ನಿಮಗೆ ಮಾನಸಿಕ ಧೈರ್ಯ-ಸ್ಥೈರ್ಯ ಬರುವುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ಸಾಹ ತೋರುವಿರಿ.

 

ಕಚೇರಿ ಕೆಲಸ ಕಾರ್ಯಗಳಲ್ಲಿ ನೀವು ತೋರುವ ಶ್ರದ್ಧೆ ಮತ್ತು ನಿಮ್ಮ ಮೇಲೆ ಮೇಲಧಿಕಾರಿಗಳ ಕೃಪಾಕಟಾಕ್ಷ ಕಂಡು ಇತರೆಯವರು ಅಸೂಯೆ ಪಡುವರು. ನಿಮ್ಮನ್ನು ಮಣಿಸಲೆಂದೆ ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುವರು. ಈ ಬಗ್ಗೆ ತಲೆಕೆಡಿಸಿಕೊಳ್ಳದಿರಿ.

 

ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎನ್ನುವಂತೆ ನಿಮ್ಮ ಮನೆಗೆ ಲಕ್ಷ್ಮೀಯ ಆಗಮನವಾಗುವುದು. ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಧರ್ಮ ಮಾಡಿದಲ್ಲಿ ನಿಮಗೂ ನಿಮ್ಮ ಕುಟುಂಬಕ್ಕೂ ಒಳಿತಾಗುವುದು.

 

 

ನಂಬಿಕೆಯೆ ದೇವರು. ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ಎಂಬ ದಾಸವಾಣಿಯನ್ನು ನಿಮ್ಮ ವ್ಯಾಪಾರ, ವ್ಯವಹಾರದ ಬಂಡವಾಳ ಮಾಡಿಕೊಳ್ಳಿ. ಹಾಗಾಗಿ ಕೆಲಸಗಾರರನ್ನು ನಂಬಿ. ಮತ್ತು ಅವರೂ ಕೂಡಾ ನಿಮ್ಮನ್ನು ನಂಬುವಂತೆ ಮಾಡಿ.

 

 

ನಿಮ್ಮೊಳಗಿನ ಸೂಕ್ಷ ್ಮ ಅಹಂಕಾರದ ಕುರಿತಾಗಿ ಪರಾಮರ್ಶೆಯನ್ನು ಮಾಡಿಕೊಳ್ಳಿ. ಎಲ್ಲಾ ಖಾರಕ್ಕಿಂತ ಅಹಂಕಾರ ಹೆಚ್ಚು ಖಾರ ಎಂಬ ಅನುಭವದ ಮಾತು ನಿಮಗೆ ಬಿಸಿ ಮುಟ್ಟಿಸುವುದು. ಉತ್ತಮರಾದ ಸ್ನೇಹಿತರ ಸಲಹೆಯನ್ನು ಪಡೆಯಿರಿ.

 

 

ಅಯ್ಯೋ ಪಾಪ ಎಂದರೆ ಆಯುಷ್ಯ ಕಡಿಮೆ ಆಗುವಂತಹ ಸಂದರ್ಭವಿದೆ. ಪರರ ಕಷ್ಟಕ್ಕೆ ಮರುಗಿ ದಾನಶೂರ ಕರ್ಣನಂತೆ ಇದ್ದುದೆಲ್ಲವನ್ನು ಪರರಿಗೆ ಹಂಚುವ ಔದಾರ್ಯದಿಂದ ಕೆಲಕಾಲ ಹಿಂದೆ ಸರಿಯುವುದು ಒಳ್ಳೆಯದು

 

 

ನಿಮ್ಮಲ್ಲಿ ಅಡಗಿರುವ ಅಪರೂಪವಾದ ಶಕ್ತಿ, ಚೈತನ್ಯಗಳು ಅನ್ಯರನ್ನು ನಿಮ್ಮತ್ತ ಸೆಳೆಯಲು ಸಹಕಾರಿಯಾಗುವುದು. ಅಂತರಂಗದಲ್ಲಿನ ದುಗುಡ, ದುಮ್ಮಾನಗಳನ್ನು ಅದುಮಿಟ್ಟುಕೊಂಡು ಹೊರಜಗತ್ತಿನಲ್ಲಿ ನಗುವಿನ ಮುಖವಾಡವನ್ನು ಧರಿಸುವಿರಿ.

ನಿಜವಾದ ಅಂತಃಕರಣಶೀಲರಾದ ನೀವು ಪರರ ಕಷ್ಟಕ್ಕೆ ಮರುಗಿ ಸಹಾಯ ನೀಡುವಿರಿ. ಇದರಿಂದ ಜನರು ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನು ತಾಳುವರು. ನಿಮ್ಮನ್ನು ಗೌರವಿಸಲು ಬಂದ ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ಮಾತನಾಡಿ.

 

 

ಸಾಮಾಜಿಕವಾಗಿ ನೀವು ಗುರುತಿಸಲ್ಪಡುವಿರಿ. ನೀವು ಅದ್ಭುತವೂ ವಿಶೇಷವೂ ಆದಂತಹ ಕಾಂತಿಯ ಶಕ್ತಿಯಾಗಿ ಆದರಿಸಲ್ಪಡುವಿರಿ. ಇದು ದೈವವು ನಿಮ್ಮ ಮೇಲೆ ತೋರಿದ ಔದಾರ್ಯವೆಂದು ಭಾವಿಸಿ. ಅಹಂಕಾರ ಪಡದಿರಿ.

 

ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ.

 

ಸದಾ ಕಾಲವು ನಿಮ್ಮನ್ನು ಜನರು ಮಾತನಾಡಿಸಬೇಕು. ಪ್ರತಿಯೊಂದು ಕ್ರಿಯೆಗೂ ಶಹಾಬಾಸ್‌ಗಿರಿ ಕೊಡಬೇಕೆಂಬ ಮನೋಭೂಮಿಕೆಯಿಂದ ಹೊರಬನ್ನಿ. ಏಕೆಂದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಶಕ್ಯವಿಲ್ಲ. ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನು ಗೌರವಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top