fbpx
ಸಮಾಚಾರ

ಸ್ಥಳೀಯ ನಕ್ಷೆಯ ಟ್ಯಾಗ್ ಗಳಲ್ಲಿ ತಮಿಳು ಭಾಷೆಯನ್ನು ಹಿಂದಿಕ್ಕಿದ ಕನ್ನಡ

ಇತ್ತೀಚಿಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ನಲ್ಲಿ ಏಷ್ಯಾದ ‘ ಓ ಎಸ್ ಎಂ ‘ OpenStreetMap (OSM) ಸಮುದಾಯಗಳ ವಾರ್ಷಿಕ ಸಮ್ಮೇಳನ ಜರುಗಿತು. ಈ ಸಮ್ಮೇಳನದಲ್ಲಿ ‘ಓ ಎಸ್ ಎಂ’ ನ ಹಲವಾರು ಸದಸ್ಯರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಇಂಟರ್ನೆಟ್ ಮ್ಯಾಪ್ ನಲ್ಲಿ ಸ್ಥಳೀಯ ಟ್ಯಾಗ್ ಗಳು ಕನ್ನಡ ಭಾಷೆಯಲ್ಲಿ ಕಾಣಸಿಗುತ್ತಿರುವುದ ಕುರಿತಾಗಿ ಚರ್ಚೆ ನಡೆಯಿತು. ಓಎಸ್ಎಂ ನ ಸದಸ್ಯರು ‘ಬೇರೆ-ಬೇರೆ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಭಾಷೆ ಅತಿ ಹೆಚ್ಚು ಸಂಖ್ಯೆಯ ಸ್ಥಳೀಯ ಟ್ಯಾಗ್ಗಳನ್ನು ಮ್ಯಾಪ್ ನಲ್ಲಿ ಹೊಂದಿದೆ ಎಂದು’ ಹೇಳಿದರು.

ಮುಂದುವರೆದು ಮ್ಯಾಪ್ ನಲ್ಲಿ ಅತಿ ಹೆಚ್ಚ್ಚು ಕನ್ನಡದ ಟ್ಯಾಗ್ ಬರಲು ಕಾರಣ ಇಲ್ಲಿನ ಜನ ಸಕ್ರಿಯವಾಗಿ ಮ್ಯಾಪ್ ನಲ್ಲಿ ಕನ್ನಡವನ್ನು ಸೇರಿಸಲು ಕೈಗೊಳ್ಳುತ್ತಿರುವ ಅವಿರತ ಪ್ರಯತ್ನ ಎಂದು ‘ಓಎಸ್ಎಂ’ ಸದ್ಯಸರು ಮೆಚ್ಚುಗೆ ಸೂಚಿಸಿದರು.

‘ಓಎಸ್ಎಂ’ ಎಂಬುದು ಉಚಿತವಾಗಿ ಇಂಟರ್ನೆಟ್ ನಲ್ಲಿ ವಿಶ್ವದ ನಕ್ಷೆ ತಯಾರಿಸಲು ಅಥವಾ ಸಂಪಾದಿಸಲು ಮಾಡಿರುವ ಅತಿ ದೊಡ್ಡ ಯೋಜನೆ, ಐದು ಮಿಲಿಯನ್ ಗಿಂತ ಹೆಚ್ಚು ನೋಂದಾಯಿತ ಬಳಕೆದಾರರು ಓಎಸ್ಎಂ ನಲ್ಲಿ ಇದ್ದು, ಇವರುಗಳು ಹಸ್ತಚಾಲಿತ ಸಮೀಕ್ಷೆ, ಜಿಪಿಎಸ್ ಸಾಧನಗಳು, ವೈಮಾನಿಕ ಛಾಯಾಗ್ರಹಣ ಮತ್ತು ಇತರ ವಿಧಾನಗಳನ್ನು ಬಳಸಿಕೊಂಡು ಡೇಟಾ ಸಂಗ್ರಹಿಸುತ್ತಾರೆ. ಹಾಗೂ ಅವರು ಸಂಪಾದಿಸಿದ ಡೇಟಾ ವನ್ನು ‘ಓಎಸ್ಎಂ’ ಮುಕ್ತ ಡೇಟಾಬೇಸ್ನಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

ಈ ಕುರಿತು ಮಾತನಾಡಿದ ಓಎಸ್ಎಂ’ ಸದಸ್ಯೆ ಶ್ರೀವಿದ್ಯಾ ” ಈ ಯೋಜನೆ ಜನರ ಸಕ್ರಿಯ ಭಾಗವಹಿಸುವಿಕೆ ಯಿಂದ ಈಗಾಗಲೇ ಕೆಲವು ಏಶಿಯನ್ ದೇಶಗಳಲ್ಲಿ ಯಶಸ್ವೀ ಆಗಿದ್ದು, ಭಾರತದಲ್ಲೂ ದಲ್ಲೂ ಈ ಯೋಜನೆ ಯಶಸ್ಸಿನ್ನತ ದಾಪುಗಾಲು ಹಾಕುತ್ತಿದೆ. ಭಾರತದಲ್ಲಿ ಮೊದಲು ಚೆನ್ನೈ ನಲ್ಲಿ ಶುರುವಾದ ಈ ಯೋಜನೆ ನಂತರ ಬೆಂಗಳೂರಿನಲ್ಲಿ ಶುರುವಾಯಿತು, ಆದರೆ ಬೆಂಗಳೂರಿನಲ್ಲಿ ಈ ಯೋಜನೆ ಶುರುವಾದಾಗಿನಿಂದ ಅತಿ ಹೆಚ್ಚು ಕನ್ನಡ ಟ್ಯಾಗ್ ಗಳು ಸೇರ್ಪಡೆಯಾಗ ತೊಡಗಿದವು. ಆದಾಗಿಯೂ ಇದು ಉಚಿತವದ ಮಾತು ಬೇಕಾದಾಗ ಎಡಿಟ್ ಮ್ಯಾಪ್ ಯೋಜನೆ ಆಗಿರುವುದರಿಂದ ಸ್ಥಳೀಯ ಜನರು ಸ್ವಪ್ರೇರಣೆಯಿಂದ ಕನ್ನಡ ಟ್ಯಾಗ್ ಗಳನ್ನೂ ಮ್ಯಾಪ್ ನಲ್ಲಿ ಸೇರಿಸಿದರು ಹಾಗು ಸೇರಿಸುತ್ತಿದ್ದಾರೆ ಕೂಡ” ಎಂದರು.

ಈಗಾಗಲೇ ಚೆನ್ನೈ ನಲ್ಲಿ ಮ್ಯಾಪಿಂಗ್ ಪೂರ್ಣಗೊಂಡಿದೆಯಂತೆ ಹಾಗೂ ಬೆಂಗಳೂರಿನ ಮ್ಯಾಪಿಂಗ್ ಭಾಗಶಃ ಪೂರ್ಣಗೊಂಡಿದ್ದು, ಸಾಟೆಲೈಟ್ಲೇ ಟೌನ್ ಗಳಿಗೆ ಹತ್ತಿರ ಇರುವ ಏರಿಯಾಗಳ ಮ್ಯಾಪಿಂಗ್ ನಡೆಯಬೇಕಿದೆಯಂತೆ.

ಕೊನೆಯದಾಗಿ ಮಾತನಾಡಿದ ಸದಸ್ಯೆ ಶ್ರೀವಿದ್ಯಾ “ಎಲ್ಲರ ಸಕ್ರಿಯ ಈ ಮ್ಯಾಪಿಂಗ್ ನಲ್ಲಿ ಇದ್ದು. ಕೆಲವು ಸದಸ್ಯರು ಹೊಸದಾಗಿ ಮ್ಯಾಪ್ ಮಾಡಿದ ಸ್ಥಳಗಳನ್ನು ಕನ್ನಡದಲ್ಲಿ ಓದುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ ಕೂಡ. ಆದ್ದರಿಂದ, ಮ್ಯಾಪಿಂಗ್ ಮಾಡಿದ ನಂತರ ಸದಸ್ಯರು ಕನ್ನಡ ಟ್ಯಾಗ್ಗಳನ್ನು ಸೇರಿಸುತ್ತಾರೆ. ಬೇರೆ ಎಲ್ಲ ಭಾಷೆಗಳಿಗಿಂತ ಕನ್ನಡ ಭಾಷೆಯದಲ್ಲಿ ಅತಿ ಹೆಚ್ಚು ಪ್ರತಿಕ್ರಿಯೆ ದೊರೆಯುತ್ತಿದ್ದು, ಇದು ತಮಿಳನಲ್ಲಿರುವ ಸ್ಥಳೀಯ ಟ್ಯಾಗ್ ಸಂಖ್ಯೆಯನ್ನು ಮೀರಿಸಿದೆ ” ಎಂದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top