ಉದ್ಯೋಗ

10ನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇವೆ ಹುದ್ದೆಗಳು – ಇಂದೇ ಅರ್ಜಿ ಸಲ್ಲಿಸಿ

ನಾರ್ತ್ ವೆಸ್ಟರ್ನ್ ರೈಲ್ವೇಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಉದ್ಯೋಗಾವಕಾಶವನ್ನು ಕಲ್ಪಿಸಲಾಗಿದ್ದು, ನೀವು ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವರಾದರೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸಿ.

ನಾರ್ತ್ ವೆಸ್ಟರ್ನ್ ರೈಲ್ವೆ ಇಲಾಖೆ 2090 ಹುದ್ದೆಗಳಿಗಾಗಿ ಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು , ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 30 ರೊಳಗೆ www.rrcjaipur.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಉದ್ಯೋಗದ ಕುರಿತಾದ ಸವಿವರ ಮಾಹಿತಿ ಇಲ್ಲಿದೆ :

ಖಾಲಿ ಇರುವ ಒಟ್ಟು ಪೋಸ್ಟ್ಗಳ ಸಂಖ್ಯೆ – 2090

ವಿಭಾಗ ಪೋಸ್ಟ್ಗಳ ವಿವರ ಈ ಕೆಳಕಂಡಂತಿವೆ

ಅಜ್ಮೇರ್ ವಿಭಾಗ – 420
ಬಿಕಾನೆರ್ ವಿಭಾಗ 412
ಜೈಪುರ ವಿಭಾಗ – 503
ಜೋಧ್ಪುರ ವಿಭಾಗ– 410
ಬಿಟಿಸಿ ಕ್ಯಾರೇಜ್ (ಅಜ್ಮೀರ್) – 166
ಬಿಟಿಸಿ ಲೊಕೊ (ಅಜ್ಮೀರ್) – 57
ಕ್ಯಾರೇಜ್ ಕಾರ್ಯಾಗಾರ (ಬಿಕಾನೆರ್) – 37
ಕ್ಯಾರೇಜ್ ವರ್ಕ್ಷಾಪ್ (ಜೋಧ್ಪುರ) – ೮೫

ಹುದ್ದೆಗೆ ಬೇಕಿರುವ ಅರ್ಹತೆ:

ಅಭ್ಯರ್ಥಿಗಳು 50% ಅಂಕಗಳನ್ನು ಹೊಂದಿರಬೇಕು ಅಥವಾ ಹತ್ತನೆ ತರಗತಿ ಪಾಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ, ಅಭ್ಯರ್ಥಿಯು NCVT/SCVT ಯಿಂದ ನೀಡುವ ಐಟಿಐ ಅಥವಾ ಅದರ ಸಮಾನತೆಯ ರಾಷ್ಟ್ರೀಯ ವಾಣಿಜ್ಯೋದ್ಯಮ ಪ್ರಮಾಣಪತ್ರದಲ್ಲಿ ಹೊಂದಿರಬೇಕು.

ವಯೋಮಿತಿ:

ಅಭ್ಯರ್ಥಿಯ ವಯಸ್ಸು ಡಿಸೆಂಬರ್ 30, 2018ರ ಒಳಗೆ 15 ವರ್ಷ ತುಂಬಿರಬೇಕು 24 ವರ್ಷ ಮೀರಿರಬಾರದು. ಮೀಸಲಾತಿ ವಿಭಾಗದ ಅಭ್ಯರ್ಥಿಗಳು ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ ಅರ್ಜಿ ಶುಲ್ಕ 100 ರೂ. SC / ST/ದಿವ್ಯಾಂಗರು/ ಮಹಿಳೆಯರಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ:

10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ(ಮೆರಿಟ್ ಮೇರೆಗೆ) ಡಾಕ್ಯುಮೆಂಟ್ ಪರಿಶೀಲನೆಯ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೀಗೆ ಅರ್ಜಿ ಸಲ್ಲಿಸಿ:

ಆಸಕ್ತ ಅಭ್ಯರ್ಥಿಗಳು ನಾರ್ಥ್ ವೆಸ್ಟರ್ನ್ ರೈಲ್ವೆಯ ಅಧಿಕೃತ www.rrcjaipur.in ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಡಿಸೆಂಬರ್ 30, ಸಂಜೆ 5 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2018

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top