ಬೇಸಿಗೆ ಕಾಲದಲ್ಲಷ್ಟೇ ದೊರೆಯುವ ಈ ಹಣ್ಣು ಸಿಹಿಯಾಗಿದ್ದರೂ ಕೂಡ ಸಕ್ಕರೆ ಇಲ್ಲ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಹೆಚ್ಚು ರುಚಿ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು ಬಿಸಿಲಿನ ಆಯಾಸ, ಸುಸ್ತು ನಿವಾರಿಸುತ್ತದೆ. ಬಿಸಿಲಲ್ಲಿ ಆಟವಾಡಿ ದಣಿಯುವ ಮಕ್ಕಳು ಈ ಹಣ್ಣಿನ ಪಾನಕವನ್ನೂ ಕುಡಿಯಬಹುದು. ಮೂಗಿಗೆ ಹಿತವೆನಿಸುವ ಪರಿಮಳ, ನಾಲಿಗೆಗೆ ಹಿಡಿಸುವ ರುಚಿ, ದಾಹ-ದಣಿವು ತಣಿಸುವ ಶಕ್ತಿ ಇದೆ.
ಕಣ್ಣಿನ ಶಕ್ತಿಯನ್ನು ಹೆಚ್ಚಿಸಲು ಅವಶ್ಯವಾದ ವಿಟಮಿನ್ ಎ, ಬೀಟಾ ಕೆರೋಟಿನ್ ಇದ್ದು, ಕಣ್ಣಿನ ಪೊರೆ ಸಮಸ್ಯೆ ಹೆಚ್ಚಾಗುವುದನ್ನು ತಡೆಯುತ್ತದೆ.ಅತಿ ಕಡಿಮೆ ಕೊಬ್ಬಿನಂಶ, ಒಳ್ಳೆಯ ಕಾರ್ಬೊಹೈಡ್ರೇಟ್ ಇದೆ. ಬೀಜದಲ್ಲಿ ಅಧಿಕ ಪೊಟ್ಯಾಷಿಯಂ ಇದ್ದು ತೂಕ ಕರಗಿಸಲು ಉಪಯುಕ್ತವಾಗಿದೆ.ಕರಬೂಜದಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ವೈರಸ್ ಹಾಗೂ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಬೇಕಾದ ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚಿಸುತ್ತದೆ.ಅಕಾಲಿಕವಾಗಿ ವಯಸ್ಸಾಗುವಿಕೆ ತಡೆಯುವ ಜೀವಕೋಶಗಳನ್ನು ಹೆಚ್ಚಿಸುತ್ತವೆ.ಅಧಿಕ ಪ್ರಮಾಣದ ವಿಟಮಿನ್ ಸಿ ಅಲ್ಸರ್ ತಡೆದರೆ, ಇದರಲ್ಲಿರುವ ಆಕ್ಸಿಕೈನ್ ಅಂಶ ಮೂತ್ರಪಿಂಡ ದೋಷ ಹಾಗೂ ಕಲ್ಲುಗಳನ್ನು ನಿವಾರಿಸುತ್ತದೆ.ನಿದ್ರಾ ಸಂಬಂಧಿತ ತೊಂದರೆಗಳನ್ನು ನಿವಾರಿಸುತ್ತದೆ.ರಕ್ತವನ್ನು ತೆಳ್ಳಗಾಗಿಸುವ ಗುಣ ಹೊಂದಿರುವ ಕರಬೂಜ ಹಣ್ಣು ಹೃದ್ರೋಗ ಸಮಸ್ಯೆಯನ್ನು ನಿವಾರಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
