fbpx
ದೇವರು

ವಾಸ್ತು ಶಾಸ್ತ್ರದ ಪ್ರಕಾರ ಹಣಕಾಸು ,ವಿದ್ಯಾಭ್ಯಾಸ ,ಆರೋಗ್ಯ ಭಾಗ್ಯಗಳಿಗಾಗಿ ಮನೆಯಲ್ಲಿ ಈ ರೀತಿಯ ಗಣೇಶನನ್ನು ಇಟ್ಟು ಪೂಜೆ ಮಾಡಿದ್ರೆ ಬಹಳ ಒಳ್ಳೆಯದು

 ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಣೇಶನನ್ನು  ಈ ರೀತಿಯಾಗಿ ಮುಖ ಮಾಡಿ ಇಟ್ಟರೆ ಐಶ್ವರ್ಯ ಹಾಗೂ ಸಿರಿವಂತಿಕೆ ಪ್ರಾಪ್ತಿಯಾಗುತ್ತದೆಯಂತೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ದೇವರ ಫೋಟೋ ಅಥವಾ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಟ್ಟು ಪೂಜಿಸಿದರೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ . ಅದೇ ರೀತಿ ಗಣೇಶ ಅಥವಾ ವಿನಾಯಕ ಎಂದು ನಾವು ಕರೆಯುವ ದೇವರ ಫೋಟೋವನ್ನು ಅಥವಾ ಮೂರ್ತಿಯನ್ನು, ಮನೆಯಲ್ಲಿ ಯಾವ ರೀತಿ ಇಡಬೇಕು ? ಜೊತೆಗೆ ಯಾವ ರೀತಿಯ ಫೋಟೋ ಇಟ್ಟರೆ ಯಾವ  ರೀತಿಯ ಅನುಕೂಲವಾಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ವಿನಾಯಕ ಸಿದ್ಧಿ,  ಬುದ್ಧಿ ಕೊಡುವವನು. ವಿಘ್ನವನ್ನು ನಿವಾರಿಸುವವನು. ಅದೇ ರೀತಿ ಮನೆಯಲ್ಲಿ ಯಾವ ರೀತಿಯ ಫೋಟೋ ಇಟ್ಟರೆ ಒಳ್ಳೆಯದು ಎಂದು ತಿಳಿದುಕೊಳ್ಳಿ

 ಎಡಕ್ಕೆ ತಿರುಗಿದ ಸೊಂಡಿಲಿನ ಗಣೇಶ ವಿಗ್ರಹ.

 

 

 

ಈ ಗಣೇಶ  ಮನೆಯಲ್ಲಿ ಇಡಲು ಇದು ಸೂಕ್ತವಾದ ವಿಗ್ರಹವಾಗಿದೆ. ಎಡಕ್ಕೆ ತಿರುಗಿರುವ ಸೊಂಡಿಲಿನ ಗಣೇಶನ  ವಿಗ್ರಹವು ಚಂದ್ರನ ತತ್ತ್ವವನ್ನು ಪ್ರಚೋದಿಸುತ್ತದೆ. ಹಾಗಾಗಿ ಮನೆಯನ್ನು ಶಾಂತವಾಗಿ ಇರಿಸುತ್ತದೆ. ಅಲ್ಲದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ದುಷ್ಟ ಶಕ್ತಿ ಅಥವಾ ನಕಾರಾತ್ಮಕ ಶಕ್ತಿಯನ್ನು ಶಮನಗೊಳಿಸುತ್ತದೆ.ಮನೆಯಲ್ಲಿ ವಿಗ್ರಹವನ್ನು ಅಥವಾ ಫೋಟೋವನ್ನು ಇಡುವಾಗ ಯಾವಾಗಲೂ ಕುಳಿತಿರುವ ವಿಗ್ರಹವನ್ನು ಇಡಬೇಕು ನಿ0ತ ಭ0ಗಿಯ ವಿಗ್ರಹವನ್ನು ದೇವಸ್ಥಾನದಲ್ಲಿ ಮಾತ್ರ ಇಡಲು ಸೂಕ್ತ ,ಮನೆಯಲ್ಲಿ ಇಡಬಾರದು.

 ಬಲಕ್ಕೆ ತಿರುಗಿದ ಸೊಂಡಿಲಿನ ಗಣೇಶ ವಿಗ್ರಹ.

 

 

 

ಬಲಕ್ಕೆ ತಿರುಗಿದ ಸೊಂಡಿಲಿನ ಗಣೇಶನನ್ನು ಸಿದ್ಧಿ ವಿನಾಯಕ ಎಂದು ಕರೆಯಲಾಗುತ್ತದೆ. ಈ ರೀತಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸೂಕ್ತವಲ್ಲ ಇದನ್ನು ದೇವಾಲಯಗಳಲ್ಲಿ ಮಾತ್ರ ಇಡಲಾಗುತ್ತದೆ. ಲಾಡನ್ನು ತೆಗೆದುಕೊಳ್ಳುತ್ತಿರುವ ಗಣೇಶನ ವಿಗ್ರಹ:ಲಾಡನ್ನು ತನ್ನ ಸೊಂಡಿಲಿನಲ್ಲಿ ತೆಗೆದುಕೊಳ್ಳುತ್ತಿರುವ ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಟ್ಟರೆ ಆರ್ಥಿಕವಾಗಿ ಯಶಸ್ಸು ಸಿಗುತ್ತದೆ. ಹಣಕಾಸಿನ ತೊಂದರೆ ಪರಿಹಾರವಾಗುತ್ತದೆ.ನೇರ ಸೊಂಡಿಲಿನ ಗಣೇಶ:ನೇರವಾಗಿರುವ ಸೊಂಡಿಲಿನ ಗಣೇಶ ಸಿಗುವುದು ತುಂಬಾ ಅಪರೂಪ. ಇದನ್ನು ಇಟ್ಟು ಮನೆಯಲ್ಲಿ ಪೂಜಿಸಿದರೆ ಮಕ್ಕಳ ಆರೋಗ್ಯ ಬುದ್ಧಿಶಕ್ತಿ ಎರಡು ವೃದ್ಧಿಯಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top