ಭವಿಷ್ಯ

ಈ ರಾಶಿಯ ಗಂಡಸರು ತಮ್ಮ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸುಖವಾಗಿ ನೋಡಿಕೊಳ್ಳುತ್ತಾರೆ

ಈ ರಾಶಿಯ ಹುಡುಗರು ಮದುವೆಯಾದ ನಂತರ ಅವರ ಪತ್ನಿಯರನ್ನು ಮಹಾರಾಣಿಯ ರೀತಿಯಲ್ಲಿ ನೋಡಿಕೊಳ್ಳುತ್ತಾರೆ.ಆ ರಾಶಿಯವರು ಯಾವುವು ? ನಿಮ್ಮದು ಈ ರಾಶಿಯಲ್ಲಿಯೇ ಇದೆಯೇ ಎಂದು ಒಮ್ಮೆ ನೋಡಿ.

ಪ್ರತಿಯೊಂದು ಹುಡುಗಿಯ ಕನಸಾಗಿರುತ್ತದೆ.ಒಂದು ದಿನ ತಮ್ಮ ಕನಸಿನ ರಾಜಕುಮಾರ ಸಿಗಬೇಕೆಂದು ಬಯಸುತ್ತಾರೆ. ಅವರನ್ನು ಪ್ರೀತಿಸಿ ಕರೆದುಕೊಂಡು ಹೋಗುತ್ತಾರೆಂದು ಅಂದುಕೊಂಡಿರುತ್ತಾರೆ . ಆದರೆ ಅನೇಕ ಬಾರಿ ನಾವು ನಮ್ಮ ರಾಜಕುಮಾರ ಅಂದುಕೊಂಡಿರುವವನೇ ಕೋಪಿಷ್ಠನು ಆಗಿರುತ್ತಾನೆ. ಈ ಕಾರಣದಿಂದ ವೈವಾಹಿಕ ಜೀವನದಲ್ಲಿ ಜಗಳ, ಹೊಡೆದಾಟ,ಕೋಪ, ಅನುಮಾನಗಳು ಉಂಟಾಗಿ ಜಗಳ ಅತಿರೇಕತೆ ಹೋಗುತ್ತವೆ. ಚೆನ್ನಾಗಿರುವ ದಂಪತಿಗಳನ್ನು ಕೂಡ ವಿವಾಹ ವಿಚ್ಛೇದನದವರೆಗೂ ಕೊಂಡೊಯ್ಯುತ್ತವೆ.

ನೀವು ಕೂಡ ಬಯಸುತ್ತೀರಾ ? ನೀವು ವಿವಾಹ ಮಾಡಿಕೊಳ್ಳುವಾಗ ಈ ತಪ್ಪುಗಳು ಉಂಟಾಗಬಾರದೆಂದು . ಇಲ್ಲಿ ಕೆಲವು ರಾಶಿಗಳ ಬಗ್ಗೆ ಹೇಳಲಾಗಿದೆ. ಈ ರಾಶಿಯವರು ಅವರ ಪತ್ನಿಯರನ್ನು ರಾಣಿಯ ರೀತಿಯಲ್ಲಿ ನೋಡಿಕೊಳ್ಳುತ್ತಾರಂತೆ ಈ ರಾಶಿಯ ಹುಡುಗರು ಅವರ ಹೆಂಡತಿಯ ಪರವಾಗಿ ತುಂಬಾ ನಂಬಿಕಸ್ಥರಾಗಿರುತ್ತಾರೆ . ಅವರನ್ನು ತುಂಬಾ ಗೌರವಿಸುತ್ತಾರೆ. ಅವರ ಮನೆಯಲ್ಲಿ ಅವರ ಪತ್ನಿಯಾದವಳು ರಾಣಿಯ ರೀತಿಯಲ್ಲಿ ಜೀವನ ನಡೆಸಬೇಕೆಂದು ಬಯಸುತ್ತಾರೆ. ಬನ್ನಿ ಆ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.

 

 

 

ಮೇಷ ರಾಶಿ :ಈ ರಾಶಿಯ ಹುಡುಗರು ಅವರ ಪತ್ನಿಯನ್ನು ತುಂಬಾ ಆರೈಕೆ ಮಾಡುತ್ತಾರೆ. ಅವರ ಹೆಂಡತಿಯ ಪ್ರತಿಯೊಂದು ಸಣ್ಣ ಪುಟ್ಟ ಅವಶ್ಯಕತೆಗಳನ್ನು ಸಹ ಪೂರೈಸುತ್ತಾರೆ.ತಮ್ಮ ಪತ್ನಿಯರ ಬೇಕು ಬೇಡಗಳ ಬಗ್ಗೆ ಮನ ಒಲಿಸುವ ಪ್ರಯತ್ನವನ್ನು ಮಾಡುತ್ತಾರೆ. ಅವರ ಹೆಂಡತಿಗೆ ಏನಾದರೂ ಸ್ವಲ್ಪ ಕೂಡ ಆಘಾತವಾದರೂ ಇವರ ಮನಸ್ಸು ತುಂಬಾ ವಿಚಲಿತವಾಗುತ್ತದೆ. ಇವರಿಗೆ ಅವರ ಪತ್ನಿಯ ಜೊತೆಗೆ ಒಂದು ವಿಶೇಷವಾದ ಸಂಬಂಧವಿರುತ್ತದೆ. ಈ ರಾಶಿಯ ಹುಡುಗರನ್ನು ಮದುವೆಯಾದರೆ ಇವರ ಜೀವನದ ವೈವಾಹಿಕ ಸಂಬಂಧವೂ ಕೊನೆಯ ಉಸಿರು ಇರುವವರೆಗೂ ಕೂಡ ಇಬ್ಬರ ಸಂಬಂಧವು ಉತ್ತಮವಾಗಿರುತ್ತದೆ . ಸಣ್ಣಪುಟ್ಟ ಜಗಳಗಳು ಇವರಿಬ್ಬರ ಮಧ್ಯೆ ನಡೆದರೂ ಕೂಡ ಅವುಗಳನ್ನು ಬೇಗನೆ ಅರ್ಥ ಮಾಡಿಕೊಂಡು ಮತ್ತೆ ಮೊದಲಿಗಿಂತ ಹೆಚ್ಚು ಪ್ರೀತಿಸುತ್ತಾರೆ.

ಮಕರ ರಾಶಿ:ಈ ರಾಶಿಯ ಗಂಡಸರು ಅವರ ಹೆಂಡತಿಯ ಬಗ್ಗೆ ಹೆಮ್ಮೆ ಪಡುತ್ತಾರೆ. ಇವರು ತಮ್ಮ ಪತ್ನಿಯೂ ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಇರಬೇಕೆಂದು ಬಯಸುತ್ತಾರೆ. ಪತ್ನಿಗೆ ವೃತ್ತಿಯಲ್ಲಿ ಉನ್ನತಿ ಯಾಗುತ್ತಿದ್ದರೆ ಇವರು ಅಸೂಯೆ ಪಡುವುದಿಲ್ಲ, ಬದಲಾಗಿ ಖುಷಿ ಪಡುತ್ತಾರೆ. ಅವರ ಪತ್ನಿಯ ರಕ್ಷಣೆಗಾಗಿ ಅವರ ಜೀವನವನ್ನೇ ಮುಡಿಪಾಗಿ ಇಡುತ್ತಾರೆ. ಇವರು ಅವರ ಪತ್ನಿಯೊಂದಿಗೆ ತುಂಬಾ ನಂಬಿಕಸ್ಥರಾಗಿರುತ್ತಾರೆ, ಬೇರೆ ಹೆಂಗಸಿನ ಕಡೆಗೆ ಎಂದಿಗೂ ಕೂಡ ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ, ಇದೇ ಸಂಗತಿ ಇವರನ್ನು ಪತ್ನಿಯ ಜೊತೆ ಮತ್ತು ಇವರ ದಾಂಪತ್ಯ ಜೀವನವನ್ನು ಮತ್ತಷ್ಟು ಬಲಗೊಳಿಸುತ್ತದೆ.

ಧನಸ್ಸು ರಾಶಿ:ಈ ರಾಶಿಯ ಹುಡುಗರು ಮಹಿಳೆಯರನ್ನು ಹೆಚ್ಚಾಗಿ ಗೌರವಿಸುತ್ತಾರೆ. ಇವರು ಹೆಂಗಸರಲ್ಲಿ ಯಾವುದೇ ಭೇದ ಭಾವವನ್ನು ಮಾಡುವುದಿಲ್ಲ . ಇವರು ಹೆಂಗಸರಿಗೆ ಏನು ಬೇಕು ? ಏನು ಬೇಡ ? ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವರು ತನ್ನ ಹೆಂಡತಿಯ ಮುಖದಲ್ಲಿ ನಗುವನ್ನು ನೋಡಲು ಸದಾ ಏನಾದರೊಂದು ವಿಶೇಷವಾದ ಕೆಲಸವನ್ನು ಮಾಡುತ್ತಿರುತ್ತಾರೆ. ಇವರಿಗೆ ಅವರ ಪತ್ನಿಯು ಸಾಗರದಲ್ಲಿ ಸಿಗುವ ಮುತ್ತಿಗಿಂತ ಏನೂ ಕಡಿಮೆಯಿಲ್ಲ ಅಂದುಕೊಳ್ಳುತ್ತಾರೆ. ಆದ್ದರಿಂದ ಇವರು ತಮ್ಮ ಪತ್ನಿಯ ಆರೈಕೆಯನ್ನು ಚೆನ್ನಾಗಿ ಮಾಡುತ್ತಾರೆ. ಧನುಸ್ಸು ರಾಶಿಯವರ ಜತೆ ಮದುವೆಯಾಗುವ ಹುಡುಗಿಯರು ತುಂಬಾ ಖುಷಿಯಾಗಿರುತ್ತಾರೆ .

ಕುಂಭ ರಾಶಿ:ಈ ರಾಶಿಯವರು ಅವರ ಪತ್ನಿಯರಿಗೋಸ್ಕರ ಹುಚ್ಚರೇ ಆಗಿಬಿಡುತ್ತಾರೆ . ತಮ್ಮ ಕುಟುಂಬದವರಿಗಿಂತ ಹೆಚ್ಚಿನ ಗಮನವನ್ನು ಇವರು ತಮ್ಮ ಪತ್ನಿಯರಿಗೆ ನೀಡುತ್ತಾರೆ .ಇವರು ಒಬ್ಬ ಉತ್ತಮ ಪ್ರೇಮಿಯಾಗಿ ಇವರನ್ನು ಸಾಬೀತು ಪಡಿಸಿಕೊಳ್ಳುತ್ತಾರೆ ತುಂಬಾ ರೋಮಾಂಚನ ಭರಿತರು ಕೂಡ ಆಗಿರುತ್ತಾರೆ. ಯಾವ ಹುಡುಗಿ ಈ ಕುಂಭ ರಾಶಿಯವರ ಜೊತೆ ಮದುವೆಯಾಗುತ್ತಾರೋ, ಅ0ತವರ ಜೀವನದಲ್ಲಿ ಮದುವೆಯಾದ ನಂತರವೂ ಸಹ ಅನೇಕ ವರ್ಷಗಳವರೆಗೂ ರೋಮಾಂಚನದಿಂದಲೇ ಕೂಡಿರುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top