ಸಮಾಚಾರ

“ಸಿದ್ದರಾಮಯ್ಯನ ತಲೆಯಲ್ಲಿ ಮೆದುಳಿಲ್ಲ ಬದಲಾಗಿ ಸಗಣಿ ತುಂಬಿದೆ” ಕೆಎಸ್ ಈಶ್ವರಪ್ಪ ವಾಗ್ದಾಳಿ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಗೆ ಬದಲಾಗಿ ಬರೀ ಸಗಣಿ ತುಂಬಿಕೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ. ವಿಜಯಪುರದಲ್ಲಿ ಮಾದ್ಯಮದವರೊಂದಿಗೆ ತಮ್ಮನ್ನು ಪೆದ್ದು ಎನ್ನುವ ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ತುಂಬಿದೆ. ಅವರು ಯಾವಾಗ ಏನು ಮಾತನಾಡುತ್ತಾರೊ ಗೊತ್ತಿಲ್ಲ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

“ರಾಜ್ಯ ಸರಕಾರ ಪಾಪರ್ ಆಗಿದೆ. ರಾಜ್ಯ ಸರಕಾರದ ಬಳಿ ಹಣವೇ ಇಲ್ಲ. ಯೋಜನೆಗಳನ್ನು ಘೋಷಣೆ ಮಾಡುತ್ತಿದೆ ಹೊರತು ಹಣ ಬಿಡುಗಡೆ ಮಾಡುತ್ತಿಲ್ಲ. ದೇವೇಗೌಡರು, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್​, ಸಿದ್ದರಾಮಯ್ಯ ಎಸಿ ರೂಂನಲ್ಲಿ ಕೂರುವುದನ್ನು ಬಿಟ್ಟು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿ.”

“ಪರಿಹಾರ ಕೊಡುವ ಬಗ್ಗೆ ಆಮೇಲೆ ವಿಚಾರಿಸಲಿ. ಅದಕ್ಕೂ ಮೊದಲು ಹೊಲಗಳಿಗೆ ಭೇಟಿ ನೀಡಲಿ. ಸಿಎಂ ಹೆಚ್ಡಿಕೆ ರೈತರಿಗೆ ಪರಿಹಾರ ಕೊಡಬೇಕು. ಇಲ್ಲದಿದ್ದರೆ ರೈತನ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಕಾರಣ ಎಂಬುದನ್ನು ಒಪ್ಪಿಕೊಳ್ಳಬೇಕು. ಡಿಸೆಂಬರ್ 10ರಂದು ಅಧಿವೇಶನ ನಡೆಯಲಿದೆ. ಅಂದು 1 ಲಕ್ಷ ರೈತರ ಜೊತೆ ಪ್ರತಿಭಟನೆ ನಡೆಸಲಿದ್ದೇವೆ. ಆಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ” ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top