ಮನೋರಂಜನೆ

ಎರಡು ವರ್ಷಗಳ ಬಳಿಕ ನಟ ರಣಬೀರ್ ಕಪೂರ್ ನೊಂದಿಗಿನ ತನ್ನ ಲವ್ ಬ್ರೇಕ್ ಅಪ್ ವಿಚಾರದ ಕುರಿತು ಮಾತನಾಡಿದ ಕತ್ರಿನಾ ಕೈಫ್

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ 2 ವರ್ಷಗಳ ನಂತರ ತಮ್ಮ ಲವ್ ಬ್ರೇಕ್ ಅಪ್ ವಿಚಾರವನ್ನು ಜಗಜ್ಜಾಹೀರಾತು ಗೊಳಿಸಿದ್ದಾರೆ. ಈ ಹಿಂದೆ ನಟ ರಣ್‍ಬೀರ್ ಕಪೂರ್ ರನ್ನು ಪ್ರೀತಿಸುತ್ತಿದ್ದ ಈ ನಟಿ ಕಳೆದ 2 ವರ್ಷಗಳ ಹಿಂದೆಯೇ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಆದರೆ ಆಗ ಬ್ರೇಕಪ್ ಆಗಿದ್ದಕ್ಕೆ ಕಾರಣವನ್ನು ಸ್ಪಷ್ಟ ಪಡಿಸಿದೆ ಇದ್ದ ಕತ್ರಿನಾ ಕೈಫ್ ಇದೀಗ ಕತ್ರಿನಾ ನಟ ರಣ್‍ಬೀರ್ ಕಪೂರ್ ಜೊತೆಗಿನ ಬ್ರೇಕಪ್ ಯಾಕೆ ಮಾಡಿಕೊಂಡಿದೆ ಎನ್ನುವ ವಿಷಯವನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಹೌದು, 2016ರಲ್ಲಿ ಕತ್ರಿನಾ ಕೈಫ್ ಹಾಗೂ ರಣ್‍ಬೀರ್ ಕಪೂರ್ ನಡುವಿನ ಬ್ರೇಕಪ್ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ 2 ವರ್ಷದ ನಂತರ ಇತ್ತೀಚೆಗೆ ವೋಗ್ ಸಂದರ್ಶನದಲ್ಲಿ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.

“ಬ್ರೇಕಪ್ ನನಗಾಗಿ ಒಂದು ಆಶೀರ್ವಾದ ಇದ್ದಂತೆ. ನನ್ನ ಹಾಗೂ ರಣ್‍ಬೀರ್ ನಡುವೆ ಯಾವುದೇ ಸಂಬಂಧವಿಲ್ಲ. ರಣ್‍ಬೀರ್ ಜೊತೆ ಸಂಬಂಧದಲ್ಲಿದ್ದಾಗ ನಾನು ಯಾರು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ” ಎಂದು ಕತ್ರಿನಾ ಕೈಫ್ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾತು ಮುಂದುವರೆಸಿದ ನಟಿ ಕತ್ರಿನಾ ‘ ನಾನು ನನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಈಗ ಈ ಸಂಬಂಧದಿಂದ ಹೊರಬಂದಿದ್ದು, ಇದನ್ನು ಆಶೀರ್ವಾದದ ರೂಪದಲ್ಲಿ ನೋಡುತ್ತೇನೆ. ಈಗ ನನ್ನ ಪ್ಯಾಟ್ರನ್, ವಿಚಾರ ಹಾಗೂ ನನ್ನ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಈ ಘಟನೆಯ ಬಳಿಕ ನನ್ನ ಜೀವನವನ್ನು ಬೇರೆ ರೀತಿಯಲ್ಲಿ ನೋಡುತ್ತಿದ್ದೇನೆ. ಸಂಬಂಧದಲ್ಲಿ ಒಬ್ಬಂಟಿಯಾಗಿರುವುದು ಅತ್ಯಂತ ಕೆಟ್ಟ ಭಾವನೆ. ನಾನು ಕಳೆದ ಆ ಸಮಯದ ಬಗ್ಗೆ ಈಗ ಯೋಚಿಸುತ್ತಿರುವೆ’ ಎಂದು ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಬ್ರೇಕಪ್ ಆದ ಮೇಲೆ , ನಟ ರಣಬೀರ್ ಕಪೂರ್ ಎಲ್ಲರಿಗೂ ಬ್ರೇಕಪ್ ಪಾರ್ಟಿಯನ್ನು ಸಹ ಕೊಟ್ಟಿದ್ದರು, ಇದರಿಂದಾಗಿ ಕತ್ರಿನಾ ಇನ್ನಷ್ಟು ನೊಂದಿದ್ದರು.

ಸದ್ಯಕ್ಕೆ ಈ ನೋವಿನಿಂದ ಹೊರಬಂದಿರುವ ಕತ್ರಿನಾ ಕೈಫ್ ಈಗ ‘ಭಾರತ್’ ಚತ್ರದಲ್ಲಿ ಸಲ್ಮಾನ್ ಖಾನ್‍ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top