ಸಮಾಚಾರ

ಯಶ್ ‘ಕೆಜಿಎಫ್’ ಜೊತೆ ಕಾದಾಡಲು ಬಂದ ಧನುಷ್ ‘ಮಾರಿ-2.’

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಚಿತ್ರ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಸದ್ದು ಮಾಡುತ್ತಿದೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ಮೂಲಕವೇ ಎಲ್ಲರ ಗಮನ ಸೆಳೆದಿರುವ ‘ಕೆಜಿಎಫ್’ ಒಂದು ರೀತಿಯ ಕುತೂಹಲವನ್ನು ಹುಟ್ಟುಹಾಕಿದೆ.. ಇಂಥಾ ಕೆಜಿಎಫ್ ರಿಲೀಸ್ ಆಗುತ್ತಿರುವ ದಿನದಂದೇ ಭೇರೆ ಭೇರೆ ಭಾಷೆಗಳ ಐದಾರು ಸ್ಟಾರ್ ನಟರ ಸಿನಿಮಾಗಳು ತೆರೆಕಾಣುತ್ತಿವೆ. ಆ ಪಟ್ಟಿಗೆ ಇದೀಗ ಮತ್ತೊಂದು ದೊಡ್ಡ ಚಿತ್ರ ಸೇರಿಕೊಂಡಿದೆ.

ಕಾಲಿವುಡ್ ಸ್ಟಾರ್ ಧನುಷ್ ಅಭಿನಯದ ಬಹುನಿರೀಕ್ಷಿತ ಮಾರಿ-2 ಚಿತ್ರವೂ ಕೂಡ ಕೆಜಿಎಫ್ ರಿಲೀಸ್ ಆಗುತ್ತಿರುವ ದಿನದಂದೇ ಬಿಡುಗಡೆಯಾಗುತ್ತಿದೆ.. ಈ ದಿನಾಂಕವನ್ನು ಸ್ವತಃ ಧನುಷ್ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ.. ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಧನುಷ್ ನಟನೆಯ ಮಾರಿ-2
ಸಿನಿಮಾ ಮೇಲೂ ಬೆಟ್ಟದಷ್ಟು ನಿರೀಕ್ಷೆಗಳು ಬೆಳೆದುಕೊಂಡಿವೆ. ಇಂಥಾ ಮಾರಿ-2 ಸ್ಪರ್ಧೆ ಎದುರಿಸಿ ಕೆಜಿಎಫ್ ತಮಿಳುನಾಡಿನಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬ ಕುತೂಹಲವಿದೆ. 2015ರಲ್ಲಿ ತೆರೆಕಂಡ “ಮಾರಿ” ಚಿತ್ರದ ಸೀಕ್ವೆಲ್ ಇದಾಗಿದ್ದು ಬಾಲಾಜಿ ಮೋಹನ್ ಅವರೇ ಸೀಕ್ವೆಲ್ ನಿರ್ದೇಶನ ಮಾಡಿದ್ದಾರೆ,.

ಹಾಗೆ ನೋಡಿದರೆ ‘ಕೆಜಿಎಫ್’ ಚಿತ್ರದ ಕ್ರೇಜ್ ಏನು ಕಡಿಮೆ ಇಲ್ಲ. ಕನ್ನಡವು ಸೇರಿದಂತೆ ಐದು ಲಾಂಗ್ವೇಜ್ ಗಳಲ್ಲಿ ತಯಾರಾಗಿರುವ ಸಿನಿಮಾ ಮೇಕಿಂಗ್ ನಿಂದಲೇ ಗಮನ ಸೆಳೆದಿದೆ. ಅಲ್ಲದೆ ತಮಿಳು ನಟ ವಿಶಾಲ್ ಕೆಜಿಎಫ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದು ತಮಿಳುನಾಡಿನಲ್ಲಿ ರಿಲೀಸ್ ಮಾಡಿಕೊಡುತ್ತಿದ್ದಾರೆ. ಹಾಗಾಗಿ ತಮಿಳು ನಾಡಿನಲ್ಲಿ ಕೆಜಿಎಫ್ ಅನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಇನ್ನು ಈ ಎರಡು ಚಿತ್ರಗಳು ತೆರೆಕಾಣುತ್ತಿರುವ ದಿನವೇ ಮತ್ತೊಬ್ಬ ತಮಿಳು ನಟ ವಿಜಯ್ ಸೇತುಪತಿ ನಟನೆಯ ‘ಸೀತಾಕಥೀ’ ಮತ್ತು ಶಿವಕಾರ್ತಿಕೇಯನ್ ‘ಕನಾ’ ಸೇರಿದಂತೆ ಇನ್ನೂ ಎರಡು ಸಿನಿಮಾಗಳು ಕೂಡ ತೆರೆಕಾಣುತ್ತಿದೆ. ಒಟ್ಟಿನಲ್ಲಿ ಕ್ರಿಸ್ ಮಾಸ್ ರಜೆಯನ್ನು ಸದುಪಯೋಗಗಪಡಿಸಿಕೊಳ್ಳಲು ಎಲ್ಲಾ ಸಿನಿಮಾಗಳೂ ಕಾತುರರಾಗಿದ್ದು
ಪ್ರೇಕ್ಷಕ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top