ಸಮಾಚಾರ

ಐಂದ್ರಿತಾ ದಿಗಂತ್ ಮದುವೆ ನಡೆಯೋದು ಎಲ್ಲಿ ಗೊತ್ತಾ?

ಈ ಜೋಡಿ ಸಿನಿಮಾಗಳಿಗಿಂತ ಲವ್ ವಿಚಾರವಾಗಿ ಸುದ್ದಿಯಾಗಿದ್ದೆ ಹೆಚ್ಚು. ಪ್ರಣಯ ಪ್ರಸಂಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಭಂಗಿಗಳ ಫೋಟೋ ಹರಿ ಬಿಡುತ್ತಾ ಸದಾ ಚಾಲ್ತಿಯಲ್ಲಿರು ದಿಗ್ಗಿ- ಆಂಡಿ ಸದ್ಯದಲ್ಲೇ ಮದುವೆ ಮಾಡಿಕೊಳ್ಳುತ್ತಾರೆ ಎಂಬ ವದಂತಿ ಸದಾ ಚಾಲ್ತಿಯಲ್ಲಿರುತ್ತದೆ.. ಈ ಬಗ್ಗೆ ಯಾರೇನೇ ಪ್ರಶ್ನಿಸಿದರು ಅದರಿಂದ ನುಸುಳಿಕೊಳ್ಳುವ ಜಾಣ್ಮೆಯನ್ನು ಇಬ್ಬರೂ ಕರಗತ ಮಾಡಿಕೊಂಡಿದ್ದರು.

ಈ ಜೋಡಿ ಇದೀಗ ದಾಂಪತ್ಯ ಜೀವನವನ್ನ ಆರಂಭಿಸಲು ನಿರ್ಧರಿಸಿದ್ದು ಹಸಮಣೆಯೇರಲು ಸಜ್ಜಾಗಿದೆ. ದಿಗಂತ್ ಹಗೂ ಐಂದ್ರಿತಾ ರೇ ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಡೇಟ್ ಕೂಡಾ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಡಿಸೆಂಬರ್ 12 ರಂದು ರಿಂಗ್ ಬದಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

 

 

ಮದುವೆಗೆ ದಿನ ಗಣನೆ ಆರಂಭವಾಗಿದ್ದು, ಮದುವೆಗೆ ಜೋರಾಗಿ ಸಿದ್ಧತೆ ನಡೆಯುತ್ತಿದೆ. ಈ ವಿವಾಹದಲ್ಲಿ ಒಂದು ವಿಶೇಷತೆ ಇದೆ. ಹೌದು ಇವರ ಮದುವೆಗೆ ಹೋಗುವವರು ಭಾರತೀಯ ಶೈಲಿಯಲ್ಲಿ ವಸ್ತ್ರಗಳನ್ನು ತೊಟ್ಟು ಹೋಗಬೇಕಂತೆ. ಅದಕ್ಕಾಗಿಯೇ ಅವರ ವಿವಾಹದ ಲಗ್ನ ಪತ್ರಿಕೆ ಮೇಲೆ ಅದನ್ನು ಪ್ರತ್ಯೇಕವಾಗಿ ಪ್ರಿಂಟ್​ ಮಾಡಿಸಲಾಗಿದೆ.

ನಂಧಿ ಹಿಲ್ಸ್ ನಲ್ಲಿ ಮದುವೆ.
ಸದ್ಯ ಸಿಕ್ಕಿರುವ ಈ ಆಮಂತ್ರಣ ಪತ್ರಿಕೆಯನ್ನು ಆಪ್ತರು, ಕುಟುಂಬಸ್ಥರಿಗಷ್ಟೇ ನೀಡಲಾಗಿದ್ದು, ಡಿ.16ರಂದು ಸ್ಯಾಂಡಲ್​​ವುಡ್ ಗೆಳೆಯರಿಗಾಗಿ ವಿಶೇಷ ಪಾರ್ಟಿ ಆಯೋಜಿಸಲಾಗಿದೆ ಎನ್ನಲಾಗಿದೆ. ಡಿಸೆಂಬರ್ 11 ಹಾಗೂ 12ರಂದು ಮದುವೆ ನಡೆಯಲಿದ್ದು, ಸರಳವಾಗಿ ನಡೆಯಲಿರುವ ಮದುವೆಗೆ ಅಷ್ಟೇ ಸಿಂಪಲ್ಲಾಗಿ ಮದುವೆ ಆಹ್ವಾನ ಪತ್ರಿಕೆಯನ್ನು ಮುದ್ರಣಗೊಳಿಸಲಾಗಿದೆ. ಡಿ.12ರಂದು ಬೆಂಗಳೂರಿನ ನಂದಿ ಹಿಲ್ಸ್‌ ಬಳಿ ಇರುವ, ಡಿಸ್ಕವರಿ ವಿಲೇಕ್‌ ರೇಸಾರ್ಟ್‌ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಮನಸಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸುವ ಮೂಲಕ ದಿಗಂತ್ ಹಾಗೂ ಐಂದ್ರಿತಾ ರೈ ಪರಿಚಯವಾಗಿದ್ದು, ನಂತರ 2012ರ ಪಾರಿಜಾತ ಚಿತ್ರದಲ್ಲೂ ಈ ಜೋಡಿಯ ರೊಮ್ಯಾನ್ಸ್ ತೆರೆ ಮೇಲೆ ಮುಂದುವರೆದಿತ್ತು. ಆ ಬಳಿಕ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಈ ಜೋಡಿಯ ತೆರೆ ಹಿಂದಿನ ಕೆಮೆಸ್ಟ್ರಿ ಮಾತ್ರ ಮುಂದುವರೆದಿತ್ತು. ಸ್ವತಃ ಐಂದ್ರಿಯಾ ಅವರೇ, “ನನ್ನ ಬೆಸ್ಟ್ ಫ್ರೇಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top