fbpx
ದೇವರು

ಶುಕ್ರನ ನಕ್ಷತ್ರದಲ್ಲಿ ಶನಿಯ ಸಂಚಾರವಾಗಿದೆ,ಇದರಿಂದ 12 ರಾಶಿಯವರ ಮೇಲೆ ಆಗುವ ಪರಿಣಾಮ ಹಾಗೂ ಶುಭ ಅಶುಭ ಫಲಗಳು ಏನೇನು ಗೊತ್ತಾ

ಶುಕ್ರನ ನಕ್ಷತ್ರವಾದ ಪೂರ್ವಾಷಾಡ ನಕ್ಷತ್ರದಲ್ಲಿ ಶನಿ ಸಂಚಾರ ಮಾಡಲಿದ್ದಾನೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಶುಭ ಫಲಗಳು ಲಭಿಸುತ್ತವೆ ? ಇನ್ನು ಯಾವ ರಾಶಿಯವರಿಗೆ ಅಶುಭ ಫಲಗಳನ್ನು ಉಂಟು ಮಾಡುತ್ತವೆ. ಈ ಶನಿಯ ಸಂಚಾರ ಡಿಸೆಂಬರ್ 1ನೇ ತಾರೀಖಿನಿಂದ ಆರಂಭವಾಗಿದೆ.

 

 

 

ಮೇಷ ರಾಶಿ:ಮೇಷ ರಾಶಿಯವರಿಗೆ ಧನಾಗಮನವಾಗಲಿದೆ ಮತ್ತು ಶುಭ ಕಾರ್ಯಗಳಿಗೆ ತುಂಬಾ ದಿನಗಳಿಂದ ಪ್ರಯತ್ನಿಸುತ್ತಿದ್ದೀರಿ ಅದು ಕೂಡಿಬರಲಿದೆ, ಸ್ಥಿರಾಸ್ತಿ ಯೋಗ, ವಾಹನ ಖರೀದಿಯ ಯೋಗ ಕೂಡಿ ಬರಲಿದೆ.
ವೃಷಭ ರಾಶಿ:ಸ್ವಂತ ಉದ್ಯಮ ,ವ್ಯಾಪಾರ, ವ್ಯವಹಾರದಲ್ಲಿ ಒತ್ತಡವಿದ್ದರೂ ಅನುಕೂಲವಾದ ಸಮಯವಾಗಿದೆ. ಅನಿರೀಕ್ಷಿತವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ, ಶತ್ರುಗಳಿಂದ ತೊಂದರೆಯೂ ಇದೆ .
ಮಿಥುನ ರಾಶಿ:ಪ್ರೀತಿ ಪ್ರೇಮ ಭಾವನೆಯ ವಿಶ್ವಾಸಕ್ಕೆ ಓಳಗಾಗಲಿದ್ದೀರಿ ಮತ್ತು ಸಣ್ಣದಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ, ಭಾವನಾತ್ಮಕವಾಗಿ ವಿಚಾರಗಳನ್ನು ಮಾಡುತ್ತೀರ, ಐಷಾರಾಮಿ ಜೀವನ ಅಥವಾ ತಿರುಗಾಟಕೋಸ್ಕರ ಹೆಚ್ಚು ಹಣವನ್ನು ಖರ್ಚು ಮಾಡುವಿರಿ, ಅನಿರೀಕ್ಷಿತವಾಗಿ ಖರ್ಚುಗಳು ಹೆಚ್ಚಾಗುತ್ತವೆ.
ಕಟಕ ರಾಶಿ:ಸಾಮಾನ್ಯವಾಗಿ ಸ್ಥಿರಾಸ್ತಿ ಯೋಗ ಕೂಡಿ ಬಂದರೂ ಅಪವಾದಗಳು ಹೆಚ್ಚಾಗಲಿವೆ, ಶತ್ರುಗಳು ಹೆಚ್ಚಾಗುತ್ತಾರೆ, ನಷ್ಟ ಉಂಟಾಗಲಿದೆ, ಲಾಭವನ್ನು ನೋಡಬೇಕು ಅಂದರೆ ಬಾಧೆ, ನೋವುಗಳು ಹೆಣ್ಣುಮಕ್ಕಳು ಒಬ್ಬರಿಂದ ಭಾದೆಯನ್ನು, ನೋವುಗಳನ್ನು ಅನುಭವಿಸಬೇಕಾಗುತ್ತದೆ.

 

ಸಿಂಹ ರಾಶಿ:ದಾಯಾದಿ ಕಲಹಗಳು, ದಾಯಾದಿಗಳಿಂದ ನೋವು, ಸಹೋದರಿ ಸ್ತ್ರೀಯರಿಂದ ನೋವುಗಳನ್ನು ಅನುಭವಿಸಬೇಕಾಗುತ್ತದೆ, ನಿಂದನೆಗಳು ಬರುತ್ತವೆ.
ಕನ್ಯಾ ರಾಶಿ:ಅದ್ಭುತವಾದ ಅವಕಾಶಗಳು, ಸ್ಥಿರಾಸ್ತಿ ಯೋಗ ಕೂಡಿಬರಲಿದೆ, ಗುರು ಅಸ್ತವಾಗಿ ತ್ಯಾಗದ ನಂತರ ಸಾಲ ಮಾಡಿದ್ದರು ಹೇಗೋ ಸ್ಥಿರಾಸ್ತಿ ಯೋಗ, ವಾಹನ ಯೋಗ, ಏನೋ ಒಂದು ಖರೀದಿ ಮಾಡುವ ಯೋಗ ಕೂಡಿ ಬರುತ್ತದೆ.
ತುಲಾ ರಾಶಿ:ಆಕಸ್ಮಿಕ ತಿರುಗಾಟಗಳು ಹೆಚ್ಚಾಗುತ್ತವೆ , ಸ್ವಂತ ಉದ್ಯಮ ಮತ್ತು ಹೊಸ ವ್ಯಾಪಾರ ವ್ಯವಹಾರಗಳು ಕೂಡಿ ಬರಲಿವೆ.
ವೃಶ್ಚಿಕ ರಾಶಿ:ಸಂಗಾತಿಯಿಂದ ಯೋಗ ಕೂಡಿ ಬರಲಿದೆ, ಸಂಗಾತಿಯಿಂದ ಅನುಕೂಲವಾಗಲಿದೆ,ಅಧಿಕ ಹಣ ಖರ್ಚಾಗಲಿದೆ, ಹಣ ಮರುಪಾವತಿಯಾಗಲಿದೆ.
ಧನಸ್ಸು ರಾಶಿ:ಸಾಲದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತೀರಿ , ಅದೇ ರೀತಿಯಲ್ಲಿ ಲಾಭವನ್ನು ಕೂಡ ಗಳಿಸುತ್ತೀರಿ.
ಮಕರ ರಾಶಿ:ಮಕರ ರಾಶಿಯವರಿಗೆ ಅದ್ಭುತವಾದ ಅವಕಾಶಗಳು ಒದಗಿ ಬರಲಿವೆ, ಉದ್ಯೋಗಗಳಲ್ಲಿ ಪ್ರಗತಿ ,ವಿದೇಶದಲ್ಲಿ ಉದ್ಯೋಗ ಗಳು ಕೂಡಿ ಬರಲಿವೆ.
ಕುಂಭ ರಾಶಿ:ಸ್ಥಿರಾಸ್ತಿಯನ್ನು ಅನುಭವಿಸುತ್ತೀರಿ, ಮಿತ್ರರಿಂದ ಯೋಗಗಳು ಕೂಡಿ ಬರಲಿವೆ , ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.
ಮೀನ ರಾಶಿ:ಆಕಸ್ಮಿಕ ಖರ್ಚುಗಳು ಮತ್ತು ಆಕಸ್ಮಿಕವಾಗಿ ಯಾವುದೋ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ, ಇನ್ಯಾವುದೋ ನಿರ್ಧಾರ ತೆಗೆದುಕೊಳ್ಳಲು ಹೋಗಿ ಬೇರೆ ಇನ್ಯಾವುದೊ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top