ಸಮಾಚಾರ

ಕ್ರಿಕೆಟ್‌ನಿಂದ ವಿದಾಯ ಹೇಳಿದ ಗಂಭೀರ್​ಗೆ ಶಾರೂಖ್​ ನೀಡಿದ ವಿಶೇಷ ಸಲಹೆ ಏನು ಗೊತ್ತಾ?

ಭಾರತ ಕ್ರಿಕೆಟ್ ತಂಡದ ಹಿರಿಯ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ನೆನ್ನೆಯಷ್ಟೇ ಎಲ್ಲ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2007ರ ಟಿ-20 ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಗಂಭೀರ್ ವಿದಾಯ ಘೋಷಿಸುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನೆಚ್ಚಿನ ಆಟಗಾರನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಂತೆಯೇ ಬಾಲಿವುಡ್ ಬಾದ್ ಷಾ ಶಾರುಖ್ ಕೂಡ ಗಂಭೀರ್ ಗೆ ವಿಶೇಷವಾದೊಂದು ಸಂದೇಶ ರವಾನಿಸಿದ್ದಾರೆ.

 

 

ಗಂಭೀರ್ 2011 ರಿಂದ 17 ರವರೆಗೆ ಐಪಿಎಲ್ ನಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದರು​, ತಮ್ಮ ನಾಯಕತ್ವದ ಅವಧಿಯಲ್ಲಿ ಎರಡು ಬಾರಿ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರು. ಈಗ ​ ಕ್ರಿಕೆಟ್​ಗೆ​ ನಿವೃತ್ತಿ ಹೇಳಿದ ಹಿನ್ನಲೆಯಲ್ಲಿ ಶಾರೂಖ್​ ಗಂಭೀರ್​ಗೆ ಶುಭಕೋರಿದ್ದಾರೆ. “ನಿನ್ನ ಪ್ರೀತಿಗೆ ಹಾಗೂ ನಾಯಕತ್ವಕ್ಕೆ ಧನ್ಯವಾದಗಳು ಮೈ ಕ್ಯಾಪ್ಟನ್. ನೀನೊಬ್ಬ ವಿಶೇಷ ವ್ಯಕ್ತಿ. ಅಲ್ಲಾಹು ನಿನ್ನನ್ನು ಸದಾ ಸಂತೋಷದಿಂದ ಇಡಲಿ” ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರ ಜೊತೆಗೆ ನೀನು ಹೆಚ್ಚು ನಗುವುದನ್ನ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ವರ್ಷಗಳ ಹಿಂದೆ ತಂಡದಿಂದ ಹೊರಬಿದ್ದಿದ್ದ ಗಂಭೀರ್ ಎಷ್ಟೇ ಪ್ರಯತ್ನ ಪಟ್ಟರೂ ಮತ್ತೆ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವಲ್ಲಿ ಸಫಲರಾಗಿರಲಿಲ್ಲ. ಅಲ್ಲದೆ ಇದೀಗ ಅವರ ವಯಸ್ಸು ಕೂಡ 37 ದಾಟಿದ್ದು ಕ್ರಿಕೆಟ್ ನಿಂದ ದೂರ ಸರಿಯಲು ಇದು ಸೂಕ್ತ ಸಮಯ ಎಂದು ಭಾವಿಸಿ ನಿವೃತ್ತಿ ಘೋಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top