ಸಮಾಚಾರ

ದುಬೈಗೆ ಹಾರಲಿದ್ದಾರೆ ರಿಯಲ್ ಸ್ಟಾರ್ ಉಪ್ಪಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್.

ಪ್ರಜಕೀಯ ಕಾನ್ಸೆಪ್ಟನ್ನು ಜನರ ಒಡ್ಡಿ ಆನಂತರ ಹಿಂದೆ ಸರಿದು, ಸದ್ಯ ರಾಜಕಾರಣಕ್ಕೆ ಟೆಂಪ್ರೆವರಿ ಬ್ರೇಕ್ ಕೊಟ್ಟಿರುವ ಉಪ್ಪಿ ಮತ್ತೆ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಅದರಂತೆ ಅವರ ಮುಂದಿನ ಐಲವ್ ಯೂ ಚಿತ್ರದ ಚಿತ್ರೀಕರಣ ಭೀರುಸಿನಿಂದ ನಡೆಯುತ್ತಿದ್ದು ನಿರ್ದೇಶಕ ಆರ್ ಚಂದ್ರು ಬಿಡುವು ಕೊಡದೆ ಕೆಲಸ ಮಾಡುತ್ತಿದ್ದಾರೆ .. ಈಗಾಗಲೇ ಬೆಂಗಳೂರಿನ ಸುತ್ತ ಮುತ್ತ ಶೂಟಿಂಗ್ ಮಾಡಿರುವ ಚಿತ್ರತಂಡ ಬಹುತೇಕ ಮುಗಿಸಿಕೊಂಡಿದ್ದು ಇದೀಗ ದುಬೈ ಪ್ರಯಾಣ ಬೆಳಸಲಿದ್ದಾರೆ.

ಹಾಡೊಂದರ ಚಿತ್ರೀಕರಣಕ್ಕಾಗಿ ನಟ ಉಪೇಂದ್ರ ಮತ್ತು ರಚಿತಾ ರಾಮ್ ಸಮೇತ ಚಿತ್ರತಂಡ ಶೀಘ್ರವೇ ದುಬೈಗೆ ತೆರಳಲಿದೆ. ನಿರ್ದೇಶಕ ಆರ್.ಚಂದ್ರು ಈಗಾಗಲೇ ದುಬೈಗೆ ತೆರಳಿದ್ದು, ಶೂಟಿಂಗ್ ಮಾಡಲು ಲೋಕೇಶನ್ ಹುಡುಕಾಟದಲ್ಲಿದ್ದಾರೆ,. ವಿಶೇಷವೆಂದರೆ ‘ಪ್ರೀತ್ಸೆ’ ಸಿನಿಮಾದ ‘ಪ್ರೀತ್ಸೆ ಪ್ರೀತ್ಸೆ’ ಹಾಡಿನ ಕೆಲವು ಸಾಲುಗಳನ್ನು ಇಲ್ಲಿಯೇ ಶೂಟಿಂಗ್ ಮಾಡಲು ಚಂದ್ರು ಪ್ಲಾನ್ ಮಾಡಿದ್ದಾರೆ.

ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿ ಸೋನು ಗೌಡ ಮತ್ತು ರಚಿತಾ ರಾಮ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಎಂಬುವರು ಸಿನಿಮಾಗೆ ಸಂಗೀತ ನೀಡಿದ್ದು ಈಮೂಲಕವೇ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಫೆಬ್ರವರಿ 8 ರಂದು ಚಂದ್ರು ಹುಟ್ಟುಹಬ್ಬವಿದ್ದು, ಅಂದೇ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ, ಆದರೆ ಇನ್ನೂ ಅಧಿಕೃತವಾಗಿ ನಿರ್ಧಾರ ಮಾಡಿಲ್ಲ.

ಆರ್. ಚಂದ್ರು ಅವರು ಉಪೇಂದ್ರ ಅವರ ಹಳೆ ಫ್ಲೇವರಿಗೆ ತಕ್ಕಂತೆ ಕತೆಯನ್ನು ಹೆಣೆದಿದ್ದು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲೂ ಈ ಚಿತ್ರವನ್ನು ಏಕಕಾಲಕ್ಕೆ ತಯಾರಿಸಲಿದ್ದಾರೆ. ವಿಶೇಷವೆಂದರೆ, ಇದೊಂದು ಪಕ್ಕಾ ಹಳೆ ಉಪೇಂದ್ರ ಫ್ಲೇವರಿನ ‘ಲವ್ ಸ್ಟೋರಿ’ ಸಿನಿಮಾ ಆಗಿರಲಿದ್ದು ಚಿತ್ರದಲ್ಲಿ ‘A’, ‘ಉಪೇಂದ್ರ’, ‘ಪ್ರೀತ್ಸೆ’ ಚಿತ್ರಗಳಲ್ಲಿ ಇದ್ದಂತಹ ಉಪೇಂದ್ರ ಅವರ ಮ್ಯಾನರಿಸಂ ಇರಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top