ಸಮಾಚಾರ

ಆಸ್ಟ್ರೇಲಿಯಾ ತಂಡದಲ್ಲಿ 6 ವರ್ಷದ ಬಾಲಕ- ಆತ ಕೊಹ್ಲಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್​ ಪಂದ್ಯ ಗುರುವಾರದಿಂದ ಆರಂಭವಾಗಿದೆ. ಭಾರತದ ಕಾಲಮಾನ ಬೆಳಿಗ್ಗೆ 5.30 ಕ್ಕೆ ಅಡಿಲೇಡ್​ನ ಓವಲ್​ ಕ್ರೀಡಾಂಗಣದಲ್ಲಿ ಬಾರ್ಡರ್‌-ಗವಾಸ್ಕರ್‌ ಸರಣಿಯ ಮೊದಲ ಪಂದ್ಯ ಶುರುವಾಗಿದೆ. ತವರಿನಲ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿ ಜಯಿಸಿ ಆತ್ಮ ವಿಶ್ವಾಸದಲ್ಲಿರುವ ಟೀಂ ಇಂಡಿಯಾ ಆಸೀಸ್ ವಿರುದ್ಧದ ಟೆಸ್ಟ್​ ಸರಣಿ ಅಗ್ನಿ ಪರೀಕ್ಷೆ ಆಗಿರಲಿದೆ ಎನ್ನಲಾಗಿದೆ.

 

 

ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆತಿಥೇಯ ಆಸ್ಟ್ರೇಲಿಯಾ 12 ಆಟಗಾರರ ಪಂದ್ಯವನ್ನು ಘೋಷಿಸಿದ್ದು ಅದರಲ್ಲಿ 6 ವರ್ಷದ ಬಾಲಕನನ್ನು ಆಯ್ಕೆ ಮಾಡಿದ್ದು ಇದು ಅಚ್ಚರಿಕೆ ಕಾರಣವಾಗಿತ್ತು. ಆಸ್ಟ್ರೇಲಿಯಾ ಆರು ವರ್ಷದ ಬಾಲಕ ಸ್ಪಿನ್ನರ್ ಆರ್ಚೀ ಷಿಲ್ಲರ್ ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಆರ್ಚೀ ನಾಯಕ ವಿರಾಟ್ ಕೊಹ್ಲಿಗೆ ವಿಕೆಟ್ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಈ ಪಂದ್ಯಕ್ಕೆ ಆಸೀಸ್ ತಂಡದಲ್ಲಿ 6 ವರ್ಷದ ಆರ್ಚಿ ಷಿಲ್ಲರ್ ಸ್ಥಾನ ಪಡೆದಿದ್ದಾನೆ. ಈ ಪೋರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆತನ ಆಸೆಯಂತೆ ಆಸೀಸ್ ತಂಡದಲ್ಲಿ ಆಡುವ ಅವಕಾಶ ನೀಡಲಾಗಿದೆ. ಆರ್ಚಿ ಮಗುವಿದ್ದಾಗಲೇ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದು, ತನ್ನ ಜೀವನದ ಬಹು ಸಮಯವನ್ನು ಆಸ್ಪತ್ರೆಯಲ್ಲೇ ಕಳೆದಿದ್ದಾನೆ. ಆತನ ಮುಖದಲ್ಲಿ ನಗು ಕಾಣುವ ಉದ್ದೇಶದಿಂದ ಈ ಅವಕಾಶ ನೀಡಲಾಗಿದೆ. ಇದು ನಾವು ಆತನಿಗೆ ಮಾಡಬಲ್ಲ ಸಣ್ಣ ಕಾರ್ಯ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top