ಸಿನಿಮಾ

ನಿಜವಾಗ್ಲೂ ಅನುಷ್ಕಾ ಗರ್ಭಿಣಿಯಾಗಿದ್ದಾರಾ ? ಈ ಬಗ್ಗೆ ಕೊಹ್ಲಿ ಪತ್ನಿ ಹೇಳಿದ್ದೇನು ಓದಿ .

ಕಳೆದ ಡಿಸೆಂಬರ್ 11 ರಂದು ಮದುವೆಯಾಗಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇನ್ನೇನು ತಮ್ಮ ಮೊದಲ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿರುವಾಗ ಮೇಲಿಂದ ಮೇಲೆ ಬರುತ್ತಿರುವ ಸುಳ್ಳು ಸುದ್ದಿಗಳು ಅವರ ತಲೆಯನ್ನು ಕೆಡಿಸಿವೆ.

ಹೌದು, ಕಳೆದ ಕೆಲವು ದಿನಗಳಿಂದ ಅನುಷ್ಕಾ ಶರ್ಮ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಕೇಳಿ ಬರುತ್ತಿತ್ತು ಅದರಂತೆ ಅನುಷ್ಕಾ ರ ಬೇಬಿ ಬಂಪಿಂಗ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅವರನ್ನು ಗರ್ಭಿಣಿ ಎಂದೇ ಬಿಂಬಿಸಲಾಗಿತ್ತು. ಇದೀಗ ಈ ಸುದ್ದಿಯ ಬಗ್ಗೆ ಮೊದಲ ಬಾರಿಗೆ ಅನುಷ್ಕಾ ಶರ್ಮಾ ಮೌನ ಮುರಿದಿದ್ದು, ಈ ವದಂತಿಗಳೆಲ್ಲ ಸುಳ್ಳು ಎಂದು ಜರಿದಿದ್ದಾರೆ.

ಈ ಬಗ್ಗೆ ಅನುಷ್ಕಾ ಶರ್ಮಾ ಹೇಳಿದ್ದೇನು ?

”ಇಂತಹ ರೂಮರ್ ಗಳು ಸಿಲ್ಲಿ. ತಿಂಗಳು ಉರುಳಿದರೆ ಯಾರೂ ಅದನ್ನ ಬಚ್ಚಿಡಲು ಸಾಧ್ಯವಿಲ್ಲ. ಯಾರು ಏನು ಬೇಕಾದರೂ ಬರೆದುಕೊಳ್ಳಲಿ, ಕೆಲ ದಿನ ಆದ್ಮೇಲೆ ಅವರೇ ಫೂಲ್ ಆಗುತ್ತಾರೆ” ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ ನಟಿ ಅನುಷ್ಕಾ ಶರ್ಮಾ.

ಸಾಲು-ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಅನುಷ್ಕಾ ಶರ್ಮಾ ಫುಲ್ ಬ್ಯುಸಿಯಾಗಿದ್ದು, ಸದ್ಯಕ್ಕೆ ಅವರು ನಾಯಕಿಯಾಗಿ ನಟಿಸಿರುವ ‘ಝೀರೋ‘ ಸಿನಿಮಾ ಇನ್ನೇನು ತೆರೆಕಾಣಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top