ಭವಿಷ್ಯ

06 ಡಿಸೆಂಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಗುರುವಾರ, ೦೬ ಡಿಸೆಂಬರ್ ೨೦೧೮
ಸೂರ್ಯೋದಯ : ೦೭:೦೫
ಸೂರ್ಯಾಸ್ತ : ೧೭:೫೩
ಅಮಂತ ತಿಂಗಳು : ಕಾರ್ತಿಕ

ಪಕ್ಷ : ಕೃಷ್ಣ ಪಕ್ಷ
ತಿಥಿ : ಚತುರ್ದಶೀ – ೧೨:೧೧ ವರೆಗೆ
ನಕ್ಷತ್ರ : ಅನುರಾಧ – ೨೮:೩೬+ ವರೆಗೆ
ಯೋಗ : ಸುಕರ್ಮ – ೨೧:೩೮ ವರೆಗೆ
ಸೂರ್ಯ ರಾಶಿ -ವೃಶ್ಚಿಕ

ಅಭಿಜಿತ್ ಮುಹುರ್ತ :೧೨:೦೭ – ೧೨:೫೦
ಅಮೃತಕಾಲ : ೧೭:೪೫ – ೧೯:೨೫
ರಾಹು ಕಾಲ: ೧೩:೫೦ – ೧೫:೧೧
ಗುಳಿಕ ಕಾಲ: ೦೯:೪೭ – ೧೧:೦೮
ಯಮಗಂಡ:೦೭:೦೫ – ೦೮:೨೬

ಎದುರಾಗುವ ಅಲ್ಪ ನಷ್ಟವನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರುವುದು ಒಳ್ಳೆಯದು. ಸಭೆ ಸಮಾರಂಭಗಳಲ್ಲಿ ಜನರೊಡನೆ ಪ್ರೀತಿ ವಾತ್ಸಲ್ಯದಿಂದ ವರ್ತಿಸಿ. ಕುಟುಂಬದಲ್ಲಿ ನೆಮ್ಮದಿ ಮೂಡಲಿದೆ. ಜಾಮೀನಿನ ವಿಷಯದಲ್ಲಿ ತಟಸ್ಥರಾಗಿರಿ.

 

ಬಂಧುಗಳು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಎಲ್ಲದಕ್ಕೂ ಅನುಮಾನ ಪಡುವುದು ಒಳ್ಳೆಯದಲ್ಲ. ಪ್ರಯಾಣವನ್ನು ಮಾಡದಿರುವುದು ಒಳ್ಳೆಯದು. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಹಣಕಾಸು ಉತ್ತಮವಾಗಿರುತ್ತದೆ.

 

ಆಮೆ ವೇಗದಲ್ಲಿ ಸಾಗುತ್ತಿದ್ದ ಕೆಲಸಗಳು ವೇಗ ಹೆಚ್ಚಿಸಿಕೊಳ್ಳುವವು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬರುವುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕಡಿಮೆ ಆಗುವುದು. ಬಂಧುಗಳೊಡನೆ ಸಂಬಂಧ ಗಟ್ಟಿಗೊಳ್ಳುವುದು.

 

ಅನಿರೀಕ್ಷಿತವಾಗಿ ಪ್ರೀತಿ ಪಾತ್ರರನ್ನು ಭೇಟಿಯಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಲ್ಪ ನಷ್ಟ ಕಂಡುಬರುವುದು. ಹಿರಿಯರ ಮೇಲೆ ವಿನಾಕಾರಣ ಮುನಿಸು ತೋರಿಸಬೇಡಿ. ಪ್ರೇಮ ಪ್ರಕರಣಗಳಿಂದ ದೂರವಿರುವುದು ಒಳ್ಳೆಯದು.

 

 

ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ಕೊಟ್ಟ ಸಾಲ ಭಾಗಶಃ ವಸೂಲಾಗುವ ಸಾಧ್ಯತೆಯಿದೆ. ಆದಾಯ ಮೂಲಗಳು ಹೆಚ್ಚಾಗುವವು. ಖರ್ಚು ವೆಚ್ಚಗಳಿಗೆ ಸರಿಯಾದ ಲೆಕ್ಕವಿಡುವುದು ಒಳ್ಳೆಯದು.

 

 

ನೀವು ಊಹಿಸದ ರೀತಿಯಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯಿದೆ. ನೀವು ಸಂಧಾನ ಚತುರರಾಗಿರುವ ಕಾರಣ ಅದನ್ನು ಸಮರ್ಥವಾಗಿ ಎದುರಿಸುವಿರಿ. ನಿಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ.

 

 

ನಿಮ್ಮ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ ಎಂದು ಚಿಂತಿಸದಿರಿ. ಈಗ ಆಗುತ್ತಿರುವ ಘಟನೆಗಳು ನಿಮಗೆ ಒಂದು ಪಾಠವೆಂದು ಭಾವಿಸಿ ಮುನ್ನುಗ್ಗಿ ಹೋರಾಟ ಮಾಡಿ. ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.

 

 

ತೋಳ ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವಂತೆ ಯಾವುದೋ ಕಾರಣಕ್ಕೆ ನಿಮ್ಮಿಂದ ತಪ್ಪಾಗಿರುವುದನ್ನೆ ಪುನಃ ಪುನಃ ನೆನೆಸಿ ನಿಮಗೆ ಕಿರುಕುಳ ಕೊಡುವರು. ಇದು ಒಂದು ರೀತಿಯ ಪರೀಕ್ಷೆ ಕಾಲ. ಮನಸಾ ಕುಲದೇವರನ್ನು ಸ್ಮರಿಸಿಕೊಳ್ಳಿರಿ.

ಸಂಕಷ್ಟಗಳನ್ನು ಎದುರಿಸುವ ಕಲೆಗಾರಿಕೆ ನಿಮಗೆ ಹೇಳಿಕೊಡಬೇಕಾಗಿಲ್ಲ. ಎಲ್ಲವನ್ನು ನಗುನಗುತ್ತಲೇ ನಿಭಾಯಿಸುವ ಗುಣ ಅನುಕರಣಿಯವಾದುದು. ಆದರೆ ನಿಮ್ಮ ಮನೆ ಮಂದಿಯೇ ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ನುಂಗಲಾರದ ತುತ್ತಾಗುವುದು.

 

 

ದಿಢೀರಾಗಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ವಿದೇಶದಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟು ಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದರಿಂದ ಇಚ್ಛಿತ ಕಾರ್ಯಗಳು ಕೈಗೂಡುವುದು.

 

ಸಾಕ್ಷಾತ್‌ ಗುರುವೆ ನಿಮ್ಮ ಬಳಿ ಬಂದು ನಿಮ್ಮನ್ನು ತಿದ್ದುವುದಿಲ್ಲ. ಮನೆಯ ಹಿರಿಯರ ರೂಪದಲ್ಲಿ ಇದ್ದು ನಿಮಗೆ ಸಕಾಲಿಕ ಎಚ್ಚರಿಕೆಯನ್ನು ನೀಡುವರು. ಹಾಗಾಗಿ ಹಿರಿಯರ ಮಾತನ್ನು ಉದಾಸೀನ ಮಾಡದಿರಿ.

 

ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top