ಸಮಾಚಾರ

ಕೊನೆಗೂ ಪ್ರಾರಂಭವಾಗುತ್ತಿದೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ- ಇದು ಮೊದಲ ಕನ್ನಡದ ಮೊದಲ ಸ್ಪೋರ್ಟ್ಸ್ ಚಾನಲ್.

ಕ್ರೀಡಾ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿರುವ ಕ್ರೀಡಾ ವಾಹಿನಿ ಸ್ಟಾರ್ ನೆಟ್ ವರ್ಕ್ ಅತಿ ಶೀಘ್ರದಲ್ಲೇ “ಸ್ಟಾರ್ ಸ್ಫೋರ್ಟ್ಸ್ ಕನ್ನಡ” ಚಾನೆಲ್ ಅನ್ನು ಆರಂಭಿಸಲು ತಯಾರಿ ನಡೆಸುತ್ತಿದೆ.. ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ಪ್ರಾದೇಶಿಕ ಭಾಷೆಗಳಾದ ತೆಲುಗು ಮತ್ತು ತಮಿಳಿನಲ್ಲಿ ಪ್ರಸಾರವಾಗುತ್ತಿದ್ದು, ಡಿಸೆಂಬರ್ 30ರಿಂದ ಕನ್ನಡದಲ್ಲೂ ತನ್ನ ಪ್ರಸಾರವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಡಿಸೆಂಬರ್ 30ರಿಂದ ಸ್ಟಾರ್ ಸ್ಫೋರ್ಟ್ಸ್ ಕನ್ನಡ ಚಾನೆಲ್ ಆರಂಭಿಸಲು ಸ್ಟಾರ್ ನೆಟ್ ವರ್ಕ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.. ವೀಕ್ಷಕ ವಿವರಣೆಯನ್ನು ಇಷ್ಟು ದಿನ ಇಂಗ್ಲಿಷ್ ನಲ್ಲಿ ಕೇಳುತ್ತಿದ್ದ ವೀಕ್ಷಕರು ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಕೇಳಿ ನೋಡಿ ಎಂಜಾಯ್ ಮಾಡಬಹುದು. ವಿಶೇಷ ಎಂದರೆ “ಸ್ಟಾರ್ ಸ್ಪೋರ್ಟ್ಸ್ ಕನ್ನಡ” ಚಾನೆಲ್ ಆನ್‌ಲೈನ್‌ ನಲ್ಲೂ ಲಭ್ಯವಾಗಿರುತ್ತದೆ. ಈ ಬಗ್ಗೆ ಅಭಿವೃದ್ಧಿಗೆ ಹತ್ತಿರದಲ್ಲಿರುವ ಮೂಲವು ಭಾರತೀಯ ಟೆಲಿವಿಷನ್.ಕಾಂಗೆ ಮಾಹಿತಿ ನೀಡಿದೆ.

ಈಗಾಗಲೇ ಪ್ರೊ ಲೀಗ್ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸ್ಥಳೀಯ ತಂಡಗಳು ಇರುವುದರಿಂದ ಚಾನೆಲ್ ವರ್ಷವಿಡೀ ಕಾರ್ಯಕ್ರಮಗಳ ಆಯೋಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದು ಸ್ಟಾರ್ ನೆಟ್ ವರ್ಕ್ ತಿಳಿಸಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು, ಐಪಿಎಲ್ ನಲ್ಲಿ ಆರ್ಸಿಬಿ, ಐಎಸ್ಎಲ್ ನಲ್ಲಿ ಬೆಂಗಳೂರು ಎಫ್ ಸಿ, ಕೆಪಿಎಲ್ ಸೇರಿದಂತೆ ಮುಂತಾದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಹೆಸರು ಪ್ರಸ್ತಾಪವಾಗಿರುವುದರಿಂದ ಚಾನೆಲ್ ತೆರೆಯಲು ಸ್ಟಾರ್ ನೆಟ್ ವರ್ಕ್ ಮುಂದಾಗಿರುವುದು ಕನ್ನಡಿಗರಿಗೆ ಸಂತಸದ ವಿಚಾರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top