fbpx
ದೇವರು

ಶುಕ್ರವಾರದ ದಿನ ಹೆಣ್ಣುಮಕ್ಕಳು ಅಕ್ಕಿಯಿಂದ ಈ ರೀತಿ ಪೂಜೆ ಮಾಡಿದರೆ ಮನೆಯ ಆರ್ಥಿಕ ಕಷ್ಟಗಳು ದೂರವಾಗಿ ನೆಮ್ಮದಿ ದೊರೆಯುತ್ತದೆ

ಶುಕ್ರವಾರದ ದಿನ ನಿಮ್ಮ ಶ್ರೀಮತಿ ಅಕ್ಕಿಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀ ದೇವಿಯು ಸದಾ ನೆಲೆಸುತ್ತಾಳೆ ಹಾಗೆ ನೀವು ಕೂಡ ಸಿರಿವಂತರಾಗುತ್ತೀರ .ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಬಹಳಷ್ಟು ತೊಂದರೆ ಕೊಡುತ್ತಿವೆಯೇ ?. ಕೈಯಲ್ಲಿ ಬಿಡಿಗಾಸು ಇಲ್ಲದೆ ವಿಲವಿಲ ಎಂದು ಒದ್ದಾಡುವಂತಾಗಿದೆಯೇ. ಹಾಗಾದರೆ ನಿಮ್ಮ ಮೇಲೆ ಆ ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ಕರುಣೆ ,ಕೃಪೆ ಸರಿಯಾಗಿ ಆಗಿಲ್ಲ ಅಂತಾನೇ ಮತ್ತೆ ಆಕೆಯ ಅನುಗ್ರಹ ಆಗಬೇಕಾದರೆ ಯಾವುದೇ ಪ್ರಯತ್ನವಿಲ್ಲದೆ ಸುಲಭವಾಗಿ ಯಾವುದು ಸಿಗುವುದಿಲ್ಲ “ ಕೃಷಿತೋ ನಾಸ್ತಿ ದುರ್ಭಿಕ್ಷ0” ಎನ್ನುತ್ತಾರೆ. ನಾವು ನಮ್ಮ ಕರ್ಮವನ್ನು ತಪ್ಪದೇ ಆಚರಿಸಬೇಕು. ಆಮೇಲೆ ಆಕೆಯೇ ನಮ್ಮ ಮೇಲೆ ತಪ್ಪದೇ ಆಗುತ್ತದೆ.

 

 

 

ಹಾಗಾದರೆ ಪ್ರತಿಯೊಬ್ಬ ಮನುಷ್ಯ ಏನು ಮಾಡಬೇಕು ಅಂತೀರಾ, ಸಂಪೂರ್ಣ ಶ್ರೀಮಹಾಲಕ್ಷ್ಮೀ ದೇವಿಯ ಕೃಪೆಯಾಗಬೇಕು ಎಂದರೆ ನಾವು ಕೆಲವು ಪದ್ಧತಿಗಳನ್ನು, ರೂಢಿಗಳನ್ನು, ಸದಾಚಾರಗಳನ್ನು ನಮ್ಮ ದಿನ ನಿತ್ಯದ ಕರ್ಮಗಳಲ್ಲಿ ಅಳವಡಿಸಿಕೊಳ್ಳಬೇಕು.ಪ್ರತಿ ನಿತ್ಯ ಸೂರ್ಯೋದಯದ ವೇಳೆಗೆ ಎದ್ದು ಮನೆಯನ್ನು ಶುಚಿಗೊಳಿಸಿಕೊಂಡು, ಅಂಗಳವನ್ನು ಸಾರಿಸಿಕೊಂಡು ರಂಗವಲ್ಲಿಯನ್ನು ಹಾಕಿ, ಶ್ರೀ ಮಹಾಲಕ್ಷ್ಮೀ ದೇವಿಯನ್ನು ಆಹ್ವಾನಿಸುವಂತೆ ಇರಬೇಕು ಆ ಮನೆ.ಗೋಧೂಳಿ ಸಮಯದಲ್ಲಿ ಪ್ರತಿಯೊಬ್ಬರು ದೇವರ ಕೋಣೆಯಲ್ಲಿ ಹಾಗೂ ಸೂರ್ಯೋದಯದ ಸಮಯದಲ್ಲಿ ತಪ್ಪದೇ ದೀಪವನ್ನು ಬೆಳಗಿಸಬೇಕು. ಮುಖ್ಯವಾಗಿ ಸುಮಂಗಲಿಯರು ಮನೆಯಲ್ಲಿ ಸದಾ ಲವಲವಿಕೆಯಿಂದ ಓಡಾಡಿಕೊಂಡು ಮನೆಯನ್ನು ಕನ್ನಡಿಯಂತೆ ತಿದ್ದಿಡಬೇಕು.ದೀಪವನ್ನು ಬೆಳಗಬೇಕಾದರೆ ತಪ್ಪದೇ ಎಳ್ಳೆಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಿಸಬೇಕು. ಹಾಗೆಯೇ ತುಳಸಿ ವೃಂದಾವನದ ಮುಂದೆ ದೀಪವನ್ನು ಬೆಳಗಿಸುವುದರಿಂದ ಮನಸ್ಸಿನ ಮತ್ತು ಮಸ್ತಿಷ್ಕದ ಅಂಧಕಾರ ತೊಲಗಿ ಕಣ್ಣಿಗೆ ಬೆಳಕು ಮತ್ತು ಜ್ಞಾನದ ಉದಯವಾಗುತ್ತದೆ.

ಸಂಜೆ ಹೊತ್ತಿನಲ್ಲಿ ತಪ್ಪದೇ ಹಿತ್ತಲಿನ ಬಾಗಿಲನ್ನು ಮುಚ್ಚಿ ,ಮುಖ್ಯ ದ್ವಾರ ಅ0ದರೆ ಪ್ರಧಾನ ಬಾಗಿಲನ್ನು ತೆಗೆದು ಬಿಡಬೇಕು. ಹಿಂದಿನ ಹಿತ್ತಲು ಬಾಗಿಲು ಮುಚ್ಚದಿದ್ದರೆ ಅಲ್ಲಿಂದ ಜೇಷ್ಠ ದೇವಿ ಅಂದರೆ ದಾರಿದ್ರ್ಯ ದೇವಿಯು ಬಂದು ಮನೆಯಲ್ಲಿ ಸ್ಥಿರ ನಿವಾಸ ಏರ್ಪಡಿಸಿಕೊಳ್ಳುತ್ತಾಳೆ . ಹೀಗಾಗಿ ಮರೆಯದೆ ಹಿತ್ತಲಿನ ಬಾಗಿಲನ್ನು ಮುಚ್ಚಿ , ಪ್ರಧಾನ ಮುಖ ದ್ವಾರವನ್ನು ತೆಗೆದು, ಶ್ರೀ ಮಹಾಲಕ್ಷ್ಮೀ ದೇವಿಯನ್ನು ಆಹ್ವಾನಿಸಬೇಕು.ತಪ್ಪದೇ ಸಂಜೆ ಹೊತ್ತು ಯಾರೂ ಕೂಡ ಹೆಂಗಸರಾಗಲಿ , ಗಂಡಸರಾಗಲಿ ,ವೃದ್ಧರಾಗಲಿ , ಕಿರಿಯರಾಗಲಿ ಉಗುರುಗಳನ್ನು ಕತ್ತರಿಸಬಾರದು . ಅವಸರ ,ಅನಗತ್ಯ ಕಿರಿಕಿರಿ, ಗೊಂದಲ ಮಾಡಿಕೊಳ್ಳಬಾರದು. ಮುಖ್ಯವಾಗಿ ಹೆಣ್ಣು ಮಕ್ಕಳು ತಲೆ ಬಾಚುವುದಾಗಲಿ, ಕೂದಲು ಬಿಚ್ಚಿ ತಿರುಗುವುದಾಗಲಿ ಮಾಡಬಾರದು .ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ .ಅವರು ಸುಮ್ಮನೆ ಹೇಳಿಲ್ಲ. ಧರ್ಮ ಶಾಸ್ತ್ರಗಳಲ್ಲಿ ನಮ್ಮ ವೇದಗಳ ಕಾಲದಿಂದಲೂ ಆಚರಿಸುವಂತ ಪದ್ಧತಿಗಳನ್ನು ತಿಳಿಸುತ್ತಾ ಬಂದಿದ್ದಾರೆ . ಹಾಗೆಯೇ ಕೆಟ್ಟ ಶಬ್ದಗಳನ್ನು ಮಾಡಬಾರದು ಕೆಟ್ಟದಾಗಿ ಕಿರುಚಾಡಬಾರದು. ಈ ಸಂಜೆ ಹೊತ್ತಿನಲ್ಲಿ ಮುಖ್ಯವಾಗಿ ಈ ಕೆಲವು ಎಚ್ಚರಿಕೆಗಳನ್ನು ತಪ್ಪದೇ ತೆಗೆದುಕೊಳ್ಳಬೇಕು.

ಮುಖ್ಯವಾಗಿ ಮನೆ ಅಥವಾ ಗೃಹ ಎಂದ ತಕ್ಷಣ ಯಾರಾದರೂ ಅತಿಥಿಗಳು ಬರುತ್ತಾರೆ, ಹಾಗಾದರೆ ಅತಿಥಿಗಳು ಬರುತ್ತಾರೆ ಎಂದರೆ ನಾವು ಮನೆಯನ್ನ ಶುಚಿಯಾಗಿ ಮತ್ತು ಶುಭ್ರವಾಗಿ ಇಟ್ಟುಕೊಳ್ಳುತ್ತೇವೆ. ಹಾಗಾದರೆ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯೇ ಸ್ವತಃ ಮನೆಗೆ ಬಂದು ನೆಲೆಸುತ್ತಾಳೆ ಎಂದರೆ ನಾವು ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು, ಅಂತ ಒಮ್ಮೆ ಆಲೋಚಿಸಿ ಆಕೆಯನ್ನು ಶುದ್ಧವಾದ ಮನಸ್ಸಿನಿಂದ ಏಕಾಗ್ರತೆಯಿಂದ, ಪ್ರೀತಿಯಿಂದ, ಶ್ರದ್ಧೆಯಿಂದ ಭಕ್ತಿಯಿಂದ ಬರಮಾಡಿಕೊಳ್ಳಬೇಕು.ಸಂಜೆಯ ಹೊತ್ತು ಸುಮಂಗಲಿಯರು ಯಾರೇ ಬರಲಿ ಅವರಿಗೆ ಆತಿಥ್ಯವನ್ನು ನೀಡಬೇಕು. ಈ ಕೆಲವು ನಿಯಮಗಳನ್ನು ಪ್ರತಿನಿತ್ಯ ಪಾಲಿಸಬೇಕು. ಸಾಯಂಕಾಲದ ಹೊತ್ತಿನಲ್ಲಿ ಆದಷ್ಟು ಪ್ರಶಾಂತ ಚಿತ್ತರಾಗಿ ಶ್ರೀ ಮಹಾಲಕ್ಷ್ಮೀ ದೇವಿಯ ಧ್ಯಾನವನ್ನು ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮೀ ದೇವಿಯು ಮನೆಗೆ ಆಗಮಿಸಿ ಸ್ಥಿರ ನಿವಾಸ ಏರ್ಪಡಿಸಿಕೊಂಡು ,ಸಿರಿ, ಸಂಪತ್ತು, ಧನ, ಧಾನ್ಯವನ್ನು ನೀಡೋದೇ ಅಲ್ಲದೇ, ಅಧಿಕ ಮತ್ತು ಅನಂತವಾದ0ತಹ ಸುಖ ಸಂತೋಷವನ್ನು ನೀಡುತ್ತಾಳೆ.

ಮುಖ್ಯವಾಗಿ ಸಂಜೆಯ ಸಮಯದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಪೂಜೆ ಮಾಡಿಕೊಳ್ಳುವಾಗ ತಪ್ಪದೆ ಧಾನ್ಯ ಲಕ್ಷ್ಮೀ ದೇವಿಯನ್ನು ಆರಾಧಿಸಿಕೊಳ್ಳಬೇಕು. ಧನಲಕ್ಷ್ಮೀ , ಧಾನ್ಯಲಕ್ಷ್ಮೀ , ಸಂಪತ್ತು, ಶ್ರೀ ಐಶ್ವರ್ಯಲಕ್ಷ್ಮೀ ಅದೇ ಈಕೆಯನ್ನು ಒಂದು ಅಳತೆಯಷ್ಟು ಅಕ್ಕಿಯನ್ನು ತೆಗೆದುಕೊಂಡು ಶ್ರೀ ಮಹಾಲಕ್ಷ್ಮೀ ದೇವಿಯ ಚಿತ್ರಪಟದ ಮುಂದೆ ಅವುಗಳನ್ನು ಇಟ್ಟು ತಾನೇ ಲಕ್ಷ್ಮೀ ಪೂಜೆಯನ್ನು ಮಾಡಿಕೊಳ್ಳಬೇಕು.ಮಹಾಲಕ್ಷ್ಮೀ ದೇವಿಯನ್ನು ಪೂಜಿಸುವಾಗ ತಪ್ಪದೇ ಈ ಶ್ರೀಮನ್ ನಾರಾಯಣನ ಜೊತೆಗಿರುವ ಶ್ರೀ ಮಹಾ ಲಕ್ಷ್ಮೀಯನ್ನು ಪೂಜಿಸಬೇಕು. ಸತಿಪತಿ ಇರುವಂತಹ ಪೂಜೆ ಆಕೆಗೆ ಪ್ರೀತಿಯಾಗುತ್ತದೆ. ಎಲ್ಲಿ ಸತಿ ಇರುತ್ತಾಳೋ ಅಲ್ಲಿ ಪತಿಯು ಇರುತ್ತಾನೆ. ಹೀಗೆ ಅವರಿಬ್ಬರನ್ನು ಪೂಜಿಸಿದಾಗ ಆಕೆ ಸಂತುಷ್ಟಗೊಂಡ ಮನೆಯಲ್ಲಿ ಬಂದು ನೆಲೆಸುತ್ತಾಳೆ .

 

 

 

ಹಾಗೆಯೇ ಮರೆಯದೇ ವಿಜ್ಞ ವಿನಾಯಕನನ್ನು ಗಣಪತಿಯನ್ನು ಕೂಡ ಆಕೆಯ ಪಕ್ಕದಲ್ಲಿಟ್ಟು ಪೂಜಿಸಬೇಕು. ಹೀಗೆ ಚಿತ್ರ ಪಟಗಳ ಮುಂದೆ ಅಕ್ಕಿಯನ್ನು ಹಾಕಿ ಆ ಧಾನ್ಯವನ್ನು ಮನೆಯಲ್ಲಿ ಪ್ರತಿನಿತ್ಯ ಉಪಯೋಗಿಸಿದಾಗ ಮನೆಯಲ್ಲಿ ಹಣದ ಸಮಸ್ಯೆ ನಿವಾರಣೆಯಾಗಿ, ಹಣದ ಸಮಸ್ಯೆ ನಿವಾರಣೆಯಾಗಿ , ಧನ ಧಾನ್ಯ ಸಮೃದ್ಧಿಯಾಗಿರುತ್ತದೆ.ಈ ಕೆಲವು ನಿಯಮಗಳನ್ನು ನಾವು ತಪ್ಪದೇ ಪಾಲಿಸಿದರೆ ನಮ್ಮ ಹಿಂದೆ ಶ್ರೀ ಮಹಾಲಕ್ಷ್ಮೀ ದೇವಿಯು ಸದಾ ನಿಂತು ಅನುಗ್ರಹಿಸುತ್ತಾಳೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top