fbpx
ದೇವರು

ದೀಪಾರಾಧನೆ ಮಹತ್ವವೇನು , ಯಾವ ಯಾವ ಫಲಗಳಿಗೆ ಯಾವ ನಿಯಮಗಳನ್ನು ತಪ್ಪದೆ ಅನುಸರಿಸಬೇಕಾಗುತ್ತದೆ ತಿಳ್ಕೊಳ್ಳಿ

ದೀಪಾರಾಧನೆ ಮಾಡುವಾಗ ತಪ್ಪದೇ ಅನುಸರಿಸಬೇಕಾದ ನಿಯಮಗಳು ಯಾವುವು ಎಂದು ನಿಮಗೆ ಗೊತ್ತೇ ?ಬನ್ನಿ ತಿಳಿಯೋಣ ದೀಪಾರಾಧನೆಯ ಮಹತ್ವವನ್ನು

ದೀಪದಲ್ಲಿ  ದೇವರು ಇದ್ದಾರೆ ಎಂದು ವೇದಗಳಲ್ಲಿ  ಹೇಳಿದ್ದಾರೆ. ಶಾಂತಿ,ಕಾಂತಿ ಇದೆ ಇಂತಹ ಪವಿತ್ರವಾದ ವಿಶಿಷ್ಟ ದೀಪವನ್ನು ನೇರವಾಗಿ ಬೆಂಕಿ ಕಡ್ಡಿಯಿಂದ ಹಚ್ಚಬಾರದು ಮತ್ತೊಂದು ದೀಪವನ್ನು ಮೊದಲಿಗೆ ಹಚ್ಚಿಕೊಂಡು,  ಆ ದೀಪದಿಂದ ದೇವರ ದೀಪವನ್ನು ಹಚ್ಚಬೇಕು ಅಥವಾ  ಉದುಬತ್ತಿಯನ್ನು ಹಚ್ಚಿಕೊಂಡು ನಂತರ ಅದರಿಂದ ದೀಪ  ಹಚ್ಚಬೇಕು.

 

 

 

ದೇವರ ದೀಪಾರಾಧನೆ ಎಷ್ಟು ಬತ್ತಿಯಿಂದ ಮಾಡಬೇಕು ?

ಇದರ ಬಗ್ಗೆ ಹಲವರಿಗೆ ಸಂಶಯ ಇದೆ.ಪ್ರತಿನಿತ್ಯ ಮನೆಯಲ್ಲಿ ಮಾಡುವ ದೀಪಾರಾಧನೆಯನ್ನು ಯಾರು ಮಾಡಿದರು ಒಳ್ಳೆಯದು. ಆದರೆ  ಎರಡು  ಬತ್ತಿಗಳನ್ನು ಕಡ್ಡಾಯವಾಗಿ ಹಾಕಬೇಕು.ಒಂದು ಬತ್ತಿಯಿಂದ ದೀಪಾರಾಧನೆಯನ್ನು ಎಂದು ಸಹ ಮಾಡಬಾರದು.ಅದು ದುರಾದೃಷ್ಟ, ದಾರಿದ್ರ್ಯ ಮತ್ತು  ಮನೆಯ ವಿನಾಶಕ್ಕೆ ಕಾರಣವಾಗುತ್ತದೆ.ಹಬ್ಬದ ದಿನಗಳಲ್ಲಿ ಮಾತ್ರ ಐದು ಬತ್ತಿಯಿಂದ ದೀಪಾರಾಧನೆ ಮಾಡುವುದರಿಂದ ಮನೆಗೆ ಒಳ್ಳೆಯದು.ಮೊದಲನೇ ಬತ್ತಿಯಿಂದ ಗಂಡನ ಕ್ಷೇಮ ಮತ್ತು ಸಂತಾನ  ಅಭಿವೃದ್ಧಿಗೆ.ಎರಡನೇ ಬತ್ತಿಯಿಂದ ಅತ್ತೆ ಮತ್ತು ಮಾವರ ಕ್ಷೇಮಕೋಸ್ಕರ.ಮೂರನೇ  ಬತ್ತಿಯಿಂದ ಅಣ್ಣ-ತಮ್ಮ, ಅಕ್ಕ-ತಂಗಿಯರ ಕ್ಷೇಮಕೋಸ್ಕರ.ನಾಲ್ಕನೆಯ ಬತ್ತಿಯಿಂದ ಗೌರವ , ಧರ್ಮ ಮತ್ತು ದೊಡ್ಡವರ ಕ್ಷೇಮಕೋಸ್ಕರ.ಐದನೆಯ ಬತ್ತಿಯಿಂದ ವಂಶಾಭಿವೃದ್ದಿಗೋಸ್ಕರ ಎಂದು ಪುರಾಣಗಳು ಹೇಳುತ್ತವೆ.

ಯಾವ ಎಣ್ಣೆಯಲ್ಲಿ ದೀಪಾರಾಧನೆ ಮಾಡಿದರೆ ಒಳ್ಳೆಯದು ?  ಎಂದು ಈಗ ನಾವು ತಿಳಿಯೋಣ.ಒಂದು ಕಡೆ ಹಸುವಿನ ತುಪ್ಪದಿಂದ  ಮತ್ತೊಂದು ಕಡೆ ಎಳ್ಳಿನ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಶ್ರೇಷ್ಠವಾದುದು. ಹಸುವಿನ ತುಪ್ಪದಲ್ಲಿ ಸೂರ್ಯನ ಶಕ್ತಿ ಹೆಚ್ಚಾಗಿರುತ್ತದೆ.ಇದರಿಂದ ಆರೋಗ್ಯ, ಐಶ್ವರ್ಯ ,ಸುಖ ಮತ್ತು  ಸಂತೋಷ ಪ್ರಾಪ್ತಿಯಾಗುತ್ತದೆ.ಹಸುವಿನ ತುಪ್ಪದಲ್ಲಿ ಬೇವಿನ ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಬೆರೆಸಿ ದೀಪಾರಾಧನೆ ಮಾಡಿದರೆ ವಿಶಿಷ್ಟವಾದ ಫಲಿತಾಂಶಗಳು ದೊರಕುತ್ತವೆ.

 

 

 

ಹಸುವಿನ ತುಪ್ಪದಲ್ಲಿ ಎರಡು ಚಮಚ ಬೇವಿನ ಎಣ್ಣೆಯನ್ನು ಬೆರೆಸಿ ಪರಶಿವನಾದ ಆ ಶಿವನ ಮುಂದೆ ದೀಪಾರಾಧನೆ ಮಾಡಿದರೆ ಯಾವುದೇ ಕೆಲಸದಲ್ಲಾದರೂ ವಿಜಯ ಸಿಗುತ್ತದೆ.ಕೊಬ್ಬರಿ ಎಣ್ಣೆಯಿಂದ ಅರ್ಧನಾರೀಶ್ವರ ದೇವರಿಗೆ ದೀಪಾರಾಧನೆ ಮಾಡುವುದರಿಂದ ಜೀವನದಲ್ಲಿ ದಂಪತಿಗಳಲ್ಲಿ ಅನ್ಯೂನ್ಯತೆ ಹೆಚ್ಚುತ್ತದೆ. ಗಣೇಶ ದೇವರಿಗೆ ಮುಂದೆ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಕಷ್ಟಗಳು ದೂರವಾಗುತ್ತವೆ.ಎಳ್ಳಿನ ಎಣ್ಣೆಯನ್ನು ಸಕಲ ದೇವತೆಗಳು ಇಷ್ಟ ಪಡುತ್ತಾರೆ. ಕೆಟ್ಟ ಪಾಲಿತಾಂಶಗಳನ್ನು ದೂರ ಮಾಡಿ ಸಕಲ ಶುಭವನ್ನು ತಂದುಕೊಡುತ್ತದೆ. ಎಳ್ಳಿನ ಎಣ್ಣೆ ತ್ರಿಮೂರ್ತಿಗಳಿಗೆ ಅತ್ಯಂತ ಪ್ರಿಯಕರವಾದುದು.ದೀಪಾಲೆ ಕಂಬದ ಕೊನೆಯ ಭಾಗವನ್ನು ಬ್ರಹ್ಮನೆಂದು, ಮದ್ಯ ಭಾಗ ವಿಷ್ಣುಮೂರ್ತಿ  ಎಂದು ಮತ್ತು ದೀಪವನ್ನು ಶಿವ ಸ್ವರೂಪವೆಂದು ಬೆಳಕನ್ನು ಸರಸ್ವತಿ ಎಂದು ದೀಪದ ಮೇಲ್ಬಾಗ ಲಕ್ಷ್ಮೀ ದೇವಿಯೆಂದು ಶಾಸ್ತ್ರಗಳು ಹೇಳುತ್ತವೆ.ಸ್ಟೀಲ್ ದೀಪದಲ್ಲಿ ದೀಪಾರಾಧನೆಯನ್ನು ಮಾಡಬಾರದು. ದೀಪಾಲೆ ಕಂಬದ ಜೊತೆ ಮತ್ತೊಂದು ಚಿಕ್ಕ ದೀಪವನ್ನು ಪಕ್ಕದಲ್ಲಿ ಇಡಬೇಕು.ದೀಪಾರಾಧನೆಯಲ್ಲಿ ಬೆಳ್ಳಿಯ ದೀಪ ತುಂಬಾ ಮಹತ್ವವಾದದು .ಪಂಚಲೋಹದ ದೀಪ ಮತ್ತು ಮಣ್ಣಿನ ದೀಪಗಳಿಗೆ ನಂತರದ ಸ್ಥಾನ.ದೀಪಾರಾಧನೆ ಮಾಡುವ ಮನೆಯಲ್ಲಿ ಲಕ್ಷ್ಮೀ ಸದಾ ಸ್ಥಿರವಾಗಿ ನಿವಾಸ ವಾಗಿರುತ್ತಾಳೆ. ದೀಪಾರಾಧನೆ ಮಾಡದ ಮನೆ ಕಳೆ ಹೀನವಾಗಿತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ದೀಪದ ವೈಶಿಷ್ಟ್ಯತೆ ತುಂಬಾ ಶ್ರೇಷ್ಠವಾದುದು. ದೀಪಾರಾಧನೆಯ ಸಮಯದಲ್ಲಿ ಈ ಶ್ಲೋಕವನ್ನು ಪಠಿಸಿದರೆ ಇನ್ನೂ ಶ್ರೇಷ್ಠವಾದುದು.

“ಶುಭಂ ಕರೋತಿ ಕಲ್ಯಾಣಂ ಆರೋಗ್ಯಮ್ ಧನಸಂಪಧಃ l

ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ ll

ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ಧನಃ l

ದೀಪೋ ಹರತಿ ಪಾಪಾನಿ ಸಂಧ್ಯಾಧೀಪಂ ನಮೋಸ್ತುತೆ ll”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top