ಭವಿಷ್ಯ

ಇಂದು ಮತ್ತು ನಾಳೆ ಕಾರ್ತಿಕ ಅಮಾವಾಸ್ಯೆ ಈ ದಿನ ಈ ಪರಿಹಾರವನ್ನು ಮಾಡ್ಕೊಂಡು ನಿಮ್ಮ ಸಂಕಷ್ಟಗಳಿಂದ ಹೊರಬನ್ನಿ

ಅಮಾವಾಸ್ಯೆ ತುಂಬಾ ವಿಶೇಷವಾದದ್ದು. ಈ ಕಾರ್ತಿಕ ಅಮಾವಾಸ್ಯೆಯನ್ನು ಆಚರಣೆ ಮಾಡುವುದರಿಂದ ಏನೆಲ್ಲಾ ಪಲಗಳು ಲಭಿಸುತ್ತವೆ ? ಮನೆಯಲ್ಲಿ ಯಾವ ಎಲ್ಲಾ ಕಷ್ಟಗಳು ಮತ್ತು ಸಮಸ್ಯೆಗಳಿಂದ ಮುಕ್ತರಾಗಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಅಮಾವಾಸ್ಯೆ ಎಂದರೆ ವಿಶೇಷ. ಅದರಲ್ಲೂ ಕಾರ್ತಿಕ ಅಮಾವಾಸ್ಯೆ ಎಂದರೆ ವಿಪರೀತವಾದ ಶ್ರೇಷ್ಠತೆಯನ್ನು ಹೊಂದಿದೆ. ಅದರಲ್ಲೂ ಅಮಾವಾಸ್ಯೆ , ಪೌರ್ಣಮಿ, ಅಷ್ಟಮಿಯಲ್ಲಿ ಬರುವ ತಿಥಿಗಳು ಅದು ಗುರುವಾರದ ದಿನ ಬಂದರೆ ವಿಪರೀತ ಶ್ರೇಷ್ಠ ವಿಪರೀತವಾದ ಅನುಕೂಲವನ್ನು ಮಾಡಿ ಕೊಡುತ್ತವೆ. ಮತ್ತು ಅಷ್ಟೇ ಪ್ರಶಸ್ತವನ್ನು ಕೂಡ ಪಡೆದುಕೊಂಡಿವೆ. ಸಿದ್ದಿ ಸಾಧಕರಿಗೂ ಕೂಡ ಸಾಧನೆ ಮಾಡುವುದಕ್ಕೆ ಭಗವಂತನ ಅನುಗ್ರಹ ಪಡೆಯುವುದಕ್ಕೆ ಭಗವತಿಯ ಆಶೀರ್ವಾದ ಪಡೆಯುವುದಕ್ಕೆ ಅಥವಾ ಬೇರೆ ರೀತಿಯಾದಂತಹ ತಂತ್ರ, ಮಾಟ, ಮಂತ್ರ, ದೋಷಗಳನ್ನು ಕೂಡ ನಿವಾರಿಸಿಕೊಳ್ಳಬಹುದು ಅಥವಾ ಜಾತಕದಲ್ಲಿ ದೋಷಗಳು ಇದ್ದರೂ ಕೂಡ ಇವುಗಳನ್ನೆಲ್ಲಾ ನಿವಾರಣೆ ಮಾಡಿಕೊಳ್ಳಬಹುದು.

 

 

 

ಬಹಳ ಮುಖ್ಯವಾಗಿ ಕಾತ್ಯಾಯಿನಿ ಅಮಾವಾಸ್ಯೆಯನ್ನು ಆಚರಿಸುವುದರಿಂದ ಹೆಚ್ಚಿನ ಪಲಗಳನ್ನು ಕಾಣಬಹುದು. ಇಂದು ಮಧ್ಯಾಹ್ನ 12 ಗಂಟೆ 12 ನಿಮಿಷಕ್ಕೆ ಸರಿಯಾಗಿ ಕಾರ್ತಿಕ ಅಮಾವಾಸ್ಯೆ ಪ್ರಾರಂಭವಾಗಲಿದೆ. ಈ ಅಮಾವಾಸ್ಯೆಯನ್ನು ಮನೆಯಲ್ಲಿ ಯಾವ ರೀತಿಯಾಗಿ ಆಚರಣೆ ಮಾಡಬೇಕು ? ಅಥವಾ ದೇವಿಯ ದೇವಸ್ಥಾನಗಳಿಗೆ ಹೋಗಿ ಮಾಡಬಹುದು. ದೇವಿ ದೇವಸ್ಥಾನಕ್ಕೆ ಹೋಗಲು ಸಾಧ್ಯವಾದರೆ ಒಂದು ಕುಂಬಳಕಾಯಿಯನ್ನು ಪೂರ್ಣವಾಗಿ ಅರ್ಧಕ್ಕೆ ಕತ್ತರಿಸಿ ಅದರಲ್ಲಿರುವ ತಿರುಳನ್ನು ತೆಗೆದು ಅದರೊಳಗೆ ಎಳ್ಳೆಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬಹುದು. ಇಂತಹ ದೀಪವನ್ನು ಹಚ್ಚಿದ ನಂತರ ಇಂದು 12 ಗಂಟೆ 12 ನಿಮಿಷಕ್ಕೆ ಸರಿಯಾಗಿ ಅಮಾವಾಸ್ಯೆ ಪ್ರಾರಂಭವಾಗಲಿದ್ದು, ಆಗ ಹಚ್ಚಿದ ದೀಪ ಅಮಾವಾಸ್ಯೆ ಮುಗಿಯುವವರೆಗೂ ಕೂಡ ದೇವಿಯ ದೇವಸ್ಥಾನದಲ್ಲಿ ಹುರಿಯುತ್ತಲೇ ಇರಬೇಕು ಅಥವಾ ಈ 12 ಗಂಟೆಗೆ ಹಚ್ಚಿದ ದೀಪ 24 ಗಂಟೆಯವರೆಗೆ ಅದು ಉರಿಯುವಂತಹ ರೀತಿಯಲ್ಲಿ ಆ ದೀಪವನ್ನು ಹಚ್ಚಬೇಕು. ವಿಧಿ ವಿಧಾನವಾಗಿ ಶಾಸ್ತ್ರ ಬದ್ಧವಾಗಿ ಅದಕ್ಕೆ ಪೂಜೆಯನ್ನು ಮಾಡಿ ದೀಪವನ್ನು ಹಚ್ಚಿ ನಂತರ ಭಗವತಿಯಲ್ಲಿ ಪ್ರಾರ್ಥನೆ ಮಾಡಿ ಕೊಳ್ಳಬೇಕು. ತಾಯಿ ನನಗೆ ಈ ರೀತಿಯಾದಂತಹ ಸಂಕಷ್ಟಗಳು ಇವೆ, ಶತ್ರು ಕಾಟಗಳು ಇವೆ, ಅವುಗಳನ್ನು ತಡೆಯಲು ಆಗುತ್ತಿಲ್ಲ ಅವುಗಳೆಲ್ಲವನ್ನೂ ನಿವಾರಣೆ ಮಾಡು ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ಈ ರೀತಿ ಪ್ರಾರ್ಥನೆ ಮಾಡಿದರೆ ಸಿದ್ಧವಾಗಿ ಭಗವತಿ ಒಲಿಯುತ್ತಾಳೆ.

 

ವಿಪರೀತ ಶತ್ರು ಕಾಟ ಇರುವವರು ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಎಷ್ಟೇ ವೈದ್ಯರಿಗೆ ತೋರಿಸಿದರೂ ಆರೋಗ್ಯ ಸರಿ ಹೋಗುತ್ತಿಲ್ಲ ಎನ್ನುವವರು, ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಕುಂಬಳಕಾಯಿಯ ಈ ದೀಪವನ್ನು ಹಚ್ಚುವುದರಿಂದ ಈ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ. ನಿಮಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದರೆ ಮನೆಯಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಬೂದಗುಂಬಳಕಾಯಿಯ ಮೇಲೆ ಅಮ್ಮನವರ ಅಂದರೆ ದೇವಿಯ ಚಿತ್ರವನ್ನು ಬರೆದು ಅದಕ್ಕೆ ಪೂಜೆ ಮಾಡಬೇಕು. ಮನೆಯಲ್ಲಿ ದೇವರ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಅ ಬೂದು ಗುಂಬಲಕಾಯಿಯನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡುವುದು ಇದು ಒಂದು ವಿಧಾನ.ಈ ರೀತಿಯಾಗಿ ನಿಮಗೆ ಸಾಧ್ಯವಾಗುವಂತ ಯಾವುದಾದರೂ ಪರಿಹಾರವನ್ನು ಮಾಡಿಕೊಂಡು ನಿಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top